ವೈ.ಎಂ.ಯಾಕೊಳ್ಳಿ ಅವರ ಕವಿತೆ-ನಾನು ಕನಕನಾಗ ಬಯಸಿದ್ದೆ

ಕನಕನಾಗುವೆ
ಎಂದೆ
ಹುಚ್ಚ ..
ಹೆಂಡತಿ ಮಕ್ಕಳನ್ನು
ಬಿಟ್ಟು ಯುದ್ದಕ್ಕೆ
ಹೋಗಿ ಸೋಲತಿ
ಎಂದಳು

ಕೀರ್ತನೆ ಬರಿತಿನಿ
ಎಂದೆ…
ನಿನ್ನ ಬಗ್ಗೆ
ನಾ ಬರಿಬೇಕಾದ
ಕಿರ್ತನಾ
ಬಹಳ ಅದಾವು
ಎಂದಳು

ಭಕ್ತನಾಗುವೆ
ಎಂದೆ…
ತಾಳ ದಂಡಿಗೆ
ಮಾರಕೊಂಡು
ಎಲ್ಲೆರೆ ತಿರಗಬೇಕಂತಿ..
ಎಂದಳು

ಸಂತನಾಗುವೆ
ಎಂದೆ..
ಉಡುಪ್ಯಾಗ
ಎಲ್ಲೂ
ಮಠ‌ಖಾಲಿಯಿಲ್ಲ
ಎಂದಳು

ಕೊಟ್ಟ ಕೈಚೀಲ
ಹಿಡದು
ಸುಮ್ಮನೇ
ಕಿರಾಣಿ ಅಂಗಡಿ ಕಡೆ
ಕಾಲ ಹಾಕಿದೆ..

ಪೋಟೊದಲ್ಲಿದ್ದ
ಮಹಾತ್ಮ ಕನಕದಾಸ
ಕಿಸಕ್ಕನ
ನಕ್ಕಾಂಗಾತು

—————————-

2 thoughts on “ವೈ.ಎಂ.ಯಾಕೊಳ್ಳಿ ಅವರ ಕವಿತೆ-ನಾನು ಕನಕನಾಗ ಬಯಸಿದ್ದೆ

  1. ಕಟುಸತ್ಯದ ವಿಡಂಬನಾತ್ಮಕ ಕವಿತೆ

Leave a Reply

Back To Top