ವಿಶೇಷ ಲೇಖನ
ಸಂವಿಧಾನವನ್ನು ನಾವು ಕಾಪಾಡಿದರೆ
ಸಂವಿಧಾನ ನಮ್ಮನ್ನು ಕಾಪಾಡುತ್ತದೆ.
ಸಿದ್ಧಾರ್ಥ ಟಿ ಮಿತ್ರಾ
ಭವ್ಯ ಭಾರತದ ಸಂವಿಧಾನವು 1950 ಜನವರಿ 26ನೇ ತಾರೀಖುನಂದು ಜಾರಿಗೆ ಬಂದಿತ್ತು.ಆದರೆ ಎರಡು ನೂರು ವರ್ಷಗಳ ಕಾಲ ಬ್ರೀಟಿಷರ ಕಪಿಮುಷ್ಠಿಯಲ್ಲಿ ಉಸಿರುಗಟ್ಟಿ ಒದ್ದಾಡುವ ನಮ್ಮ ಭಾರತೀಯರ ಜೀವನದ ಸ್ಥಿತಿಗತಿ ತುಂಬಾ ಶುಚನಿಯ ಹಾಗೂ ಚಿಂತಾಜನಕವಾಗಿತ್ತು.
“If you take risk more you will get more Success” ಎನ್ನುವಂತೆ ಡಾ|| ಬಾಬಾಸಾಹೇಬ ಅಂಬೇಡ್ಕರ್ ಅವರು ವಿದ್ಯಾರ್ಥಿ ದೆಸೆಯಿಂದಲೇ ಹೆಚ್ಚು ಹೆಚ್ಚು Risk ತೆಗೆದುಕೊಳ್ಳುವ ಮನೋಭಾವನೆ ಹೊಂದಿದ್ದರು.ಏಕೆಂದರೆ ಅವರು ಬದುಕಿ ಬಾಳಿದ ವಾತಾವರಣ ಮತ್ತು ಸಮಾಜ ಅವರನ್ನು ನಡೆಸಿಕೊಳ್ಳುವ ದೃಷ್ಟಿಕೋನ ಅಂಬೇಡ್ಕರ್ ಅವರನ್ನು ವಿಶ್ವದ ಮಾಹನ್ ವ್ಯೆಕ್ತಿಯಾಗಲು ಸಹಾಯಕವಾದವು.ಭಾರತ ಸಂವಿಧಾನ ರಚನೆಯಲ್ಲಿ ಡಾ|| ಬಾಬಾಸಾಹೇಬ ಅಂಬೇಡ್ಕರ್ ಅವರ ಪಾತ್ರ ಅವಿಸ್ಮರಣೀಯವಾಗಿದೆ.ಆದ್ದರಿಂದ ಅವರನ್ನು ವಿಶ್ವದ ಅನೇಕ ಮಾಹನ ಲೇಖಕರು,ನಾಯಕರು ಸಂವಿಧಾನ ಶಿಲ್ಪಿ, ಸಂವಿಧಾನ ಪಿತಾಮಹ, ಆಧುನಿಕ ಭಾರತದ ನಿರ್ಮಾಪಕ, ಎಂದೆಲ್ಲಾ ವರ್ಣಿಸಿರುವರು.ಕರಡು ಸಮಿತಿಯ ಅಧ್ಯಕ್ಷರಾದ ಡಾ|| ಬಾಬಾಸಾಹೇಬ್ ಅಂಬೇಡ್ಕರ ಅವರು ಸಂವಿಧಾನ ರಚನೆಯಲ್ಲಿ ಮಹತ್ತರವಾದ ಪಾತ್ರವನ್ನು ನಿರ್ವಹಿಸಿದ್ದಾರೆ.ಭಾರತ ಸಂವಿಧಾನ ರಚನಾಕ್ರಮದ ಪ್ರಕ್ರಿಯೆಯು ಸಂವಿಧಾನಾತ್ಮಕ ಸುಧಾರಣೆಯಿಂದಲೆ ಆರಂಭಗೊಂಡಿತು.ಅಂಬೇಡ್ಕರ ಅವರು 1919 ರ ಮಾಂಟ ಫ್ಲೇರ್ಡವರ ಸುಧಾರಣೆಗಳಿಂದ ಹಿಡಿದು 1946ರರ ಕ್ಯಾಬಿನೆಟ್ ಮಿಶನ್ ನಿಯೋಗದವರೆಗೂ ಭಾರತ ಸಂವಿಧಾನದ ರಚನೆಯ ಕಾರ್ಯದಲ್ಲಿ ಪ್ರಮುಖವಾದ ಪಾತ್ರವನ್ನು ನಿರ್ವಹಿಸಿದ್ದಾರೆ.ಅಂಬೇಡ್ಕರರು ಅಮೇರಿಕಾ ಇಂಗ್ಲೆಂಡ್ ಹಾಗೂ ಇನ್ನೂ ಅನೇಕ ರಾಷ್ಟ್ರಗಳಲ್ಲಿ ವ್ಯಾಸಂಗ ಮಾಡಿದರು, ನೆಹರೂರವರ ಸರ್ಕಾರದಲ್ಲಿ ಸ್ವತಂತ್ರ ಭಾರತದ ಪ್ರಥಮ ಕಾನೂನು ಸಚಿವರಾಗಿ ಅಷ್ಟೇ ಅಲ್ಲ ಸ್ವತ ಅಂಬೇಡ್ಕರ್ ಅವರು ಕಾನೂನು ಪರಿಣಿತರಾಗಿದ್ದರು, ನ್ಯಾಯವಾದಿ ಮತ್ತು ದಲಿತ ದಮನಿತ ವರ್ಗಗಳ ಮುಖಂಡರಾಗಿದ್ದರು , ಸಂಸತ್ತಿನ ಅಧಿವೇಶನಗಳಲ್ಲಿ ಬಾಬಾಸಾಹೇಬರು ಕೊಡುವ ಸ್ಪಷ್ಟೀಕರಣ ಎಲ್ಲರನ್ನೂ ಬೆಚ್ಚಿಬೀಳಿಸುವ ಮೂಲಕ ದಿಗ್ಬ್ರಾಂತ ಗೊಳಿಸಿ ಎಲ್ಲರ ಗಮನ ಸೆಳೆಯುತ್ತಿದ್ದವು.ಸಂವಿಧಾನಕ್ಕೆ ಸಂಬಂಧಪಟ್ಟ ಯಾವುದೇ ರೀತಿಯ ಸಮಸ್ಯೆ ಇದ್ದರು ಶಾಂತಿಯಿಂದ ಹಾಗೂ ಸ್ಪಷ್ಟವಾಗಿ ನಿರ್ಭಯವಾಗಿ ತಮ್ಮದೆ ರೀತಿಯಲ್ಲಿ ಬಗೆಹರಿಸುವ ಮೇಧಾವಿ ಎಂದರೆ ಅದು ಡಾ ಬಾಬಾಸಾಹೇಬ್ ಅಂಬೇಡ್ಕರ ಅವರು. ಸಂವಿಧಾನದ ಮೂಲ ತತ್ವಗಳ ಬಗ್ಗೆ ಅಪಾರವಾದ ಜ್ಞಾನ ಭಂಡಾರ ಅವರಲ್ಲಿತ್ತು .ಭಾರತ ಸ್ವತಂತ್ರಗೊಂಡಾಗ ಅನೇಕ ವಿಚಿತ್ರಕಾರಿ ಶಕ್ತಿಗಳು ತೆಲೆ ಎತ್ತಿದ್ದವು.ಉದಾ: ಪ್ರಾದೇಶಿಕ, ಜಾತಿಯತೆ, ಹಾಗೂ ಭಾಷವಾರಗಳನ್ನು ಎದುರಿಸಲು ಅಧಿಕಾರಿಯುಕ್ತ ಕೇಂದ್ರ ಸರ್ಕಾರದ ಅವಶ್ಯಕತೆ ಕಂಡು ಬಂದಿತ್ತು.ಸಂವಿಧಾನ ರಚನಾ ಸಭೆಗಳಲ್ಲಿ ಸಂಯುಕ್ತ ರಾಜ್ಯ ಸ್ವರೂಪ ಕುರಿತು ಅನೇಕ ವಾದ ವಿವಾದಗಳು ನಡೆದವು ಆದರೆ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ರಾಜ್ಯಗಳ ಒಕ್ಕೂಟ ಕುರಿತು ವಿವರಣೆ ಸಹ ಕೊಟ್ಟರು.ರಾಜ್ಯಗಳು ಒಂದು ಒಪ್ಪಿಗೆಯನ್ನು ನೀಡುವ ಮೂಲಕವಾಗಿ ಸಂಯುಕ್ತ ರಾಷ್ಟ್ರವನ್ನು ಸೇರಿಲ್ಲ ಸಂಯುಕ್ತ ರಾಷ್ಟ್ರವು ಒಪ್ಪಿಗೆಯ ಮೂಲಕ ರಚನೆಯಾಗಿಲ್ಲ.ಯಾವ ರಾಜ್ಯವು ಪ್ರತ್ಯೇಕತೆಯ ಹಕನ್ನು ಪಡೆದಿಲ್ಲ ದೇಶದಲ್ಲಿ ವಿವಿಧ ಜನಾಂಗ, ಧರ್ಮ, ಸಂಸ್ಕೃತಿ ಹಾಗೂ ಜಾತಿಯ ಜನರಿರಬಹುದು.ಆಡಳಿತದ ಅನುಕೂಲತೆಗಾಗಿ ರಾಜ್ಯಗಳನ್ನು ರಚಿಸಿರಬಹುದು.ಆದರೆ ಸಮಗ್ರವಾಗಿ ರಾಜ್ಯಗಳ ಒಂದು ಒಕ್ಕೂಟ ಎನ್ನಲಾಗಿದೆ .
ಸಂಸದಿಯ ಸರ್ಕಾರವು ಚಿಂನನವವೂ ಮತ್ತು ಕಾಲಕಾಲಕ್ಕೆ ಸಂದಾಯವಾಗುವ ಜವಾಬ್ದಾರಿಯುತವಾದ ಸರ್ಕಾರವಾಗಿದೆ’ ಎಂದು ಅಂಬೇಡ್ಕರ ಅವರು ಸರ್ಮತಿಸಿಕೊಂಡಿದ್ದಾರೆ.
ಪ್ರಜಾಸತ್ತಾತ್ಮಕ ಗಣರಾಜ್ಯ. ಸಾರ್ವಭೌಮ ಸ್ವತಂತ್ರ ಗಣರಾಜ್ಯ ಎಂಬ ಪದವನ್ನು ಪೂರ್ವ ಪೀಠಿಕೆಯಲ್ಲಿ ಉಪಯೋಗಿಸಲು ಸೂಚನೆ ನೀಡಿದ್ದು ಇದನ್ನು ಅಂಬೇಡ್ಕರ್ ಅವರು ಕರಡು ಸಮಿತಿಯಲ್ಲಿ ಪ್ರಜಾಸತ್ತಾತ್ಮಕ ಗಣರಾಜ್ಯ ಎಂದು ಬದಲಿಸಿದರು.
ಸ್ವಾತಂತ್ರ್ಯವಿಲ್ಲದೆ ಗುಲಾಮರಂತೆ ಜೀವನ ನಡೆಸುತ್ತಿದ್ದರು.1773ರಲ್ಲಿ ಲಾರ್ಡವಾರ್ನ ಹೆಸ್ಟಿಂಟ್ ಪಾಸ್ ಮಾಡಿದ ರೆಗೂಲ್ಯೆಟಿಂಗ ಕಾಯಿದೆಗಳು ಭಾರತದ ಸಂವಿಧಾನಕ್ಕೆ ಮೈಲುಗಲ್ಲು ಎಂದು ಭಾವಿಸಲಾಗುತ್ತದೆ.ಹಲವಾರು ಕಾಯಿದೆಗಳನ್ನು ಬ್ರಿಟಿಷರು ಪಾಸ್ ಮಾಡಿದರು.ಅವು ಭಾರತದ ಸಂವಿಧಾನಕ್ಕೆ ಬದ್ರಬುನಾಧಿಯಾದವು .
ಒಂದು ರಾಜ್ಯವು ಸುಸಜ್ಜಿತವಾಗಿರಲಿ ಅಥವಾ ಇಲ್ಲದಿರಲಿ ಸಂವಿಧಾನದ ಹೊರತು ರಾಜ್ಯವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ.ಸಂವಿಧಾನವು ತನ್ನ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸದಿದ್ದರೆ ದೇಶದಲ್ಲಿ ಅರಾಜಕತೆ ಉಂಟಾಗಿ ಅವನತಿಯತ್ತ ಸಾಗುತ್ತದೆ.ಆದ್ದರಿಂದ ಸಂವಿಧಾನವಿಲ್ಲದ ದೇಶವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ.ಅದಕ್ಕಾಗಿ ಒಂದಿಲ್ಲ ಒಂದು ರೀತಿಯಲ್ಲಿ ಸಂವಿಧಾನ ಬೇಕೆ ಬೇಕು.ಅದು ಲಿಖಿತವಾಗಿರಬಹುದು ಅಥವಾ ಅಲಿಖಿತವಾಗಿರಬಹುದು ಆದ್ದರಿಂದ ಸಂವಿಧಾನವನ್ನು ಸರ್ಕಾರದ ಕೈಪಿಡಿ ಅಥವಾ ಮಾರ್ಗಸೂಚಿ ಎಂದು ಕರೆಯಲಾಗುತ್ತದೆ.
ರಾಜ್ಯದ ಉದ್ದೇಶ ಜನರ ಕಲ್ಯಾಣವೇ ಆಗಿದ್ದು,ರಾಜ್ಯ ತನ್ನ ಉದ್ದೇಶಿತ ಗುರಿ ಸಾಧನೆಗಾಗಿ ಸರ್ಕಾರ ಎಂಬ ಸಾಧನಯಂತ್ರವನ್ನು ಆಶ್ರಯಿಸಿರುತ್ತದೆ.ಈ ಸಾಧನೆಗಾಗಿ ಸರ್ಕಾರವು ವ್ಯವಸ್ಥಿತ ಜೀವನ ಕ್ರಮವನ್ನು ಮಾನವನಿಗೆ ಒದಗಿಸಬೇಕಾದರೆ ಕೆಲವೊಂದು ನೀತಿ ನಿಯಮಗಳ ಸಮುದಾಯವನ್ನೇ ಸಂವಿಧಾನ ಎಂದು ಕರೆಯಲಾಗುತ್ತದೆ.ಅಂದರೆ ಸಂವಿಧಾನವು ರಾಜ್ಯದ ಉಸಿರಾಗಿದ್ದು ಸಂವಿಧಾನವನ್ನು ರಾಷ್ಟ್ರದ ಸರ್ವಶ್ರೇಷ್ಠವಾದ ಕಾನೂನು ಅಥವಾ ನಿಯಮಗಳ ಸಂಕಲನ ಎಂದು ಕರೆಯಲಾಗುತ್ತದೆ.ರಾಜ್ಯದ ಎಲ್ಲ ನಿಯಮಗಳು ಮತ್ತು ಕಾಯಿದೆ ಕಾನೂನುಗಳು ಸಂವಿಧಾನದ ಚೌಕಟ್ಟಿಗೆ ಒಳಪಡುತ್ತವೆ,ಅಂತಹ ನಿಯಮಗಳ ಒಂದು ಸಮೂಹವನ್ನು ಸಂವಿಧಾನ ಎಂದು ಕರೆಯಲಾಗುವುದು.ರಾಷ್ಟ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲ ಸರ್ಕಾರಿ ಯಂತ್ರಗಳು ಎಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಜೆಗಳು ಮತ್ತು ಸಂಘ ಸಂಸ್ಥೆಗಳು ಸಂವಿಧಾನದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಲೇಬೆಕಾಗುತ್ತದೆ
ಯಾರಾದರು ಸಂವಿಧಾನವನ್ನು ಉಲ್ಲಂಘಿಸಿದರೆ ಕಾನೂನು ಬದ್ದವಾಗಿ ಶಿಕ್ಷೆಗೆ ಒಳಪಡುತ್ತಾರೆ.
ಆಧುನಿಕ ರಾಷ್ಟ್ರಗಳು ಒಂದಿಲ್ಲ ಒಂದು ರೀತಿಯ ಸಂವಿಧಾನವನ್ನು ಹೊಂದಿರಲೆ ಬೇಕು ,ಮಾನವನ ಸರ್ವತೋಮುಖ ಬೆಳವಣಿಗೆಯ ಗುರಿಯನ್ನು ಹೊಂದಿದ್ದು ಹತ್ತು ಹಲವು ಯೋಜನೆಗಳನ್ನು ಹಾಕಿಕೊಂಡು ಸರಿಯಾದ ಸಮಯದಲ್ಲಿ ಕಾರ್ಯ ನಿರ್ವಹಿಸಲು ದೇಶದಲ್ಲಿ ಕಾನೂನ ಬದ್ದವಾದ ಆಡಳಿತ ವ್ಯವಸ್ಥೆ ಹೊಂದುವುದು ಅತ್ಯವಶ್ಯವಾಗಿದೆ. ಸಂವಿಧಾನದ ಪರಿಕಲ್ಪನೆ ಕುರಿತು ರಾಜ್ಯ ಶಾಸ್ತ್ರಜ್ಞರಲ್ಲಿ ಒಮ್ಮತದ ಅಭಿಪ್ರಾಯವಿಲ್ಲ ಇದಕ್ಕೆ ಕಾರಣ ಸಂವಿಧಾನದ ಕಲ್ಪನೆ.ಸ್ಥಳದಿಂದ ಸ್ಥಳಕ್ಕೆ ಕಾಲದಿಂದ ಕಾಲಕ್ಕೆ ಕಾರಣ ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿದೆ.ವಿಶ್ವದ ಎಲ್ಲ ರಾಷ್ಟ್ರಗಳು ಮತ್ತು ಅಲ್ಲಿಯ ಸರಕಾರಗಳು ಏಕ ಪ್ರಕಾರದ ತತ್ವಗಳಮೇಲೆ ರೂಪುಗೊಂಡಿರುವುದಿಲ್ಲ .ಪ್ರತಿಯೊಂದು ದೇಶವು ಆಸೆ ಆಶೋತ್ತರಗಳಿಗೆ ಅನುಗುಣವಾಗಿ ರೂಪತಳದಿವೆ.ಸಂವಿಧಾನದ ಅರ್ಥ ಸ್ವರೂಪದ ಬಗ್ಗೆ ರಾಜ್ಯಶಾಸ್ತ್ರಜ್ಞರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ವಿಶ್ವಮಾನ್ಯತೆಯನ್ನು ಪಡೆದ ನಮ್ಮ ಸಂವಿಧಾನವು ಆಧುನಿಕ ಭಾರತದಲ್ಲಿ ಸಮಾನತೆಯನ್ನು ಸಾಕಾರಗೊಳಿಸುವ ಸೋದರತೆ ಮತ್ತು ಮಾನವೀಯ ಸಂಬಂಧಗಳನ್ನುಳಗೊಂಡ ಒಂದು ಬೆಚ್ಚನೆಯ ಬದುಕುನ್ನು ಹಲವು ಶತಮಾನಗಳ ಕಾಲ ಹಂಬಲಿಸಿದ, ಒತ್ತಾಯಿಸಿದ ಜನ ಸಮುದಾಯದ ಕನಸುಗಳು ಆಶಯಗಳು ಸ್ವಾಂತಂತ್ರ್ಯ ನಂತರ ಸಂವಿಧಾನ ರೂಪ ಪಡೆಯಿತು.ಸಮಾನತೆಯ ಕನಸುಗಾರ ಡಾ.ಬಾಬಸಾಹೇಬ ಅಂಬೇಡ್ಕರ್ ಅವರ ಸಮರ್ಥ ನಾಯಕತ್ವದಲ್ಲಿ ಹುತಾತ್ಮರು ಕಂಡ ಕನಸಿನ ಭಾರತವನ್ನು ನನಸು ಮಾಡುವ ನಿಟ್ಟಿನಲ್ಲಿ ನಮ್ಮ ಸಂವಿಧಾನ ಹೆಚ್ಚು ಸಶಕ್ತವಾಗಿದೆ.ಇದನ್ನು ಎಲ್ಲರು ಓದುವುದು ನಮ್ಮಲೇರ ಮೊದಲ ಆದ್ಯ ಕರ್ತವ್ಯವಾಗಬೇಕಿದೆ.ಕಾಯಕ ಜೀವಿಗಳು,ದಲಿತರು,ದಮನಿತರು ಮಹಿಳೆಯರನ್ನು ಒಳಗೊಂಡಂತೆ ದೇಶದ ಎಲ್ಲ ವರ್ಗದ ಸಾಮಾಜಿಕ,ಆರ್ಥಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ದುರ್ಬಲ ಜನ ಸಮುದಾಯದ ಪಾಲಿಗೆ ಸಂವಿಧಾನದ ಆಶಯಗಳು ಇನ್ನೂ ಪೂರ್ಣವಾಗಿ ಕೈಗೂಡದ ಕನಸಿನ ಗಂಟಾಗಿದೆ.ಎಲ್ಲ ಮಿತಿಗಳ ನಡುವೆಯೂ ಕೂಡ ಸ್ವಾತಂತ್ರ್ಯ ಭಾರತದ ಏಳುವರೆ ದಶಕಗಳ ಸಾಧನೆ ಗಮನಾರ್ಹವಾದದ್ದು ಇದು ಸಾಧ್ಯವಾಗಿರುವುದು ಸಂವಿಧಾನದ ಆಶಯಗಳು ಭಾಗಂಶವಾಗಿ ಆದರು ಜಾರಿಯಾಗಿರುವುದು ಎನ್ನುವ ಸತ್ಯ ನಮ್ಮೊಂದಿಗಿದೆ . ಇತ್ತೀಚಿನ ದಿನಗಳಲ್ಲಿ ಸಂವಿಧಾನದ ಮೇಲೆ ಹಾಗೂ ಆದರ ಆಶಯಗಳ ಮೇಲೆ ಇಂದು ಗದಾಪ್ರಹಾರ ನಡೆಯುತ್ತಿರುವುದು ತುಂಬಾ ಆತಂಕಕಾರಿ ಹಾಗು ಕಳವಳದ ಸಂಗತಿಯಾಗಿದೆ.ಸಂವಿಧಾನವನ್ನು ಅದರ ರಚನೆಯ ಹಿಂದಿರುವ ಆಶಯದೊಂದಿಗೆ ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸದ ಸಂದರ್ಭದಲ್ಲಿ ಹುಟ್ಟಿಕೊಂಡ ಅತೃಪ್ತಿಗಳನನ್ನು ಬಳಸಿ ಹುಸಿ ಸಂಸ್ಕೃತಿಯ ಪ್ರಚಾರದ ಮೂಲಕ ಸಂವಿಧಾನದ ಮೂಲ ಆಶಯಗಳ ಮೇಲೆ ದಾಳಿ ಮಾಡುತ್ತ ನಮ್ಮ ಯುವ ಸಮುದಾಯವನ್ನು ದಿಕ್ಕು ತಪ್ಪಿಸುವ ಪ್ರಯತ್ನ ಇಂದು ವ್ಯವಸ್ಥಿತವಾಗಿ ನಡೆಯುತ್ತಿದೆ.ನಮ್ಮನ್ನು ಮುನ್ನಡೆಸಬೇಕಾದ ಸಂವಿಧಾನವನ್ನು ನಾವು ಕಾಪಾಡಿಕೊಳ್ಳಬೇಕಾದ ಸಂದ್ದಿಗ್ನ ಗಳಿಗೆಯಲ್ಲಿ ಬಂದು ನಿಂತಿದ್ದೆವೆ. ನಮ್ಮ ಸಂವಿಧಾನ ಜಗತ್ತಿನ ಅತಿದೊಡ್ಡ ಲೀಖಿತ ಸಂವಿಧಾನ.ಅನುಷ್ಠಾನಕ್ಕೆ ಬಂದು 75ವರ್ಷಗಳು ಕಳೆದರು ನಮ್ಮ ಸಂವಿಧಾನ ಪ್ರಸ್ತುತವಾಗಿದೆ.ಆದರೂ,ನಮ್ಮ ದೇಶದ ಬಹುಪಾಲು ಜನ ಸಂವಿಧಾನವನ್ನು ಓದಲಿಲ್ಲ ಅನ್ನೋದೆ ವಿಪರ್ಯಾಸದ ಸಂಗತಿಯಾಗಿದೆ.ಆದರೂ ಕೂಡ ಇತ್ತೀಚೆಗೆ ನಮ್ಮ ಶಿಕ್ಷಣದಲ್ಲಿ ಸಂವಿಧಾನವನ್ನು ಓದುವ ಮತ್ತು ತಿಳಿಯಪಡಿಸುವ ಸಣ್ಣ ಪ್ರಮಾಣದ ಪ್ರಯತ್ನ ಪ್ರಾರಂಭವಾಗಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ.
ಇತ್ತೀಚೆಗೆ ನಮ್ಮ ಸಂವಿಧಾನಕ್ಕೆ ಸಂಬಂಧಿಸಿದಂತೆ ಕೆಲವು ಅಹಿತಕರ ಘಟನೆಗಳು ಸಂಭವಿಸುತ್ತಿವೆ.ಒಬ್ಬ ನಿವೃತ್ತ ನ್ಯಾಯಮೂರ್ತಿಯೊಬ್ಬರು ಹಿಂದುತ್ವವೆ ಭಾರತಿಯತೆ ಎಂದು ಹೆಳಿದ್ದು ತುಂಬಾ ಆತಂಕಕಾರಿ ಬೆಳವಣಿಗೆ . ಹಿಂದುತ್ವವೆ ಭಾರತಿಯತೆ ಎನ್ನುವುದಾದರೆ ಅವರು ಸಂವಿಧಾನವನ್ನು ಹೇಗೆ ಅರ್ಥ ಮಾಡಿಕೊಂಡಿದ್ದಾರೆ ಎಂಬುದು ಚಿಂತಾಜನಕವಾಗಿದೆ.ಸಮಾಜದ ಈ ವರೆಗಿನ ಲಿಖಿತ ಚರಿತ್ರೆಯು ಪರಸ್ಪರ ವಿರೋಧಿ ವರ್ಗಗಳ ನಡುವಿನ ಸಂಘರ್ಷದ ಕಥೆಯಾಗಿದೆ.ಯಾವ ದೇಶವು ಸ್ವತಂತ್ರ್ಯವಾಗಿದ್ದು , ಲಿಖಿತ ಸಂವಿಧಾನವನ್ನು ಹೊಂದಿದ್ದು ಅದರಂತೆ ದೇಶದ ಆಡಳಿತವನ್ನು ನಡೆಸುತ್ತದೊ ಅಂತಹ ದೇಶಗಳನ್ನು ಗಣರಾಜ್ಯವೆಂದು ಕರೆಯಲಾಗುತ್ತದೆ.ನಮ್ಮ ಸಂವಿಧಾನವನ್ನು ಹಲವು ಮೂಲತತ್ವಗಳ ಅಡಿಪಾಯದ ಮೇಲೆ ರೂಪಿಸಲಾಗಿದೆ.ಈ ಮೂಲ ತತ್ವಗಳನ್ನು ಬದಲಾಯಿಸಲು ಆಗುವುದಿಲ್ಲ ಹಾಗೂ ತಿದ್ದುಪಡಿ ಮಾಡಲು ಸಾಧ್ಯವಿಲ್ಲ.ಸಂವಿಧಾನ ಜಾರಿಗೆ ಬಂದ ನಂತರ ಭಾರತ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ, ಅದರಲ್ಲೂ ಇತಿಹಾಸದ ಪುಟಗಳನ್ನು ಒಂದು ಸಾರಿ ತಿರುವಿದಾಗ ಸಾಮಾನ್ಯವಾಗಿ ಕಾಣುವುದು ಗುಪ್ತರ ,ಭಾರತ , ಮೌರ್ಯರ ಭಾರತ, ಹರ್ಷವರ್ಧನನ ಭಾರತ,ಕಾನಿಷ್ಕರ ಭಾರತ ಮೊಘಲರ ಭಾರತ,ಫ್ರೇಂಚರ ಭಾರತ, ಬ್ರೀಟಿಷರ ಭಾರತ,ಎಂದು ಹಂಚಿ ಹರಿದು ಹೊಗಿದ್ದ ಹಲವು ಭಾರತಗಳು.ಕಾರಣವೇಂದರೆ ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೆ ಇಡಿ ಭಾರತದ ಭೂಪ್ರದೇಶವನ್ನು ಹಿಂದೆಂದೂ ಒಂದೆ ಒಂದು ರಾಜಕೀಯ ಆಡಳಿತಕ್ಕೆ ಒಳಪಟ್ಟಿರಲಿಲ್ಲ .1947ರಲ್ಲಿ ಸ್ವಾತಂತ್ರ್ಯ ಬಂದ ಸಂದರ್ಭದ ಸಮಯ ಆವಾಗ ಭಾರತದಲ್ಲಿ ಸುಮಾರು ಆರುನೂರು ಅರಸೊತ್ತಿಗೆಗಳಿದ್ದವು . ಅವುಗಳನ್ನೆಲ್ಲ ರದ್ದು ಪಡಿಸಿ ಕನ್ಯಾಕುಮಾರಿಯವರೆಗೆ ಒಂದೇ ರಾಜಕೀಯ ಆಡಳಿತಕ್ಕೆ ಒಳಪಡಿಸಲಾಯಿತು.ಒಂದೆ ಸಂವಿಧಾನ,ಒಂದೆ ಗಡಿ,ಒಂದೇ ರಾಷ್ಟ್ರ ಗೀತೆ,ಒಂದೇ ಧ್ವಜ,ಒಂದೇ ರಾಷ್ಟ್ರ ಚಿನ್ಹೆ ಇದು ನಿಜವಾದ ಭಾರತ ರಾಷ್ಟ್ರ ನಿರ್ಮಾಣ.ಇದು ನಿಜವಾಗಿಯೂ ಮಹತ್ತರವಾದ ಸಾಧನೆ.ಪಾಳೆಗಾರಿಕೆ ಪದ್ದತಿಯನ್ನು ಸಂಪೂರ್ಣವಾಗಿ ರದ್ದುಪಡಿಸಿ ಸ್ವತಂತ್ರವಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಂಸ್ಥೆ ಗಳನ್ನು ಸ್ಥಾಪಿಸಿದ್ದೆವೇ ಕೇಂದ್ರದಲ್ಲಿ ಲೋಕಸಭೆ, ರಾಜ್ಯ ಸಭೆ, ರಾಜ್ಯ ಮಟ್ಟದಲ್ಲಿ ವಿಧಾನಸಭೆ, ವಿಧಾನಪರಿಷತ್ತು ಎಂಬ ಶಾಸಕಾಂಗ ರಾಜ್ಯ ಸರ್ಕಾರ ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿ, ಮತ್ತು ಗ್ರಾಮ ಪಂಚಾಯಿತಿ ಎಂಬ ಕಾರ್ಯಾಂಗ ಸಂಸ್ಥೆಗಳನ್ನು ಮತ್ತು ಸರ್ವೋಚ್ಚ ನ್ಯಾಯಾಲಯ,ಉಚ್ಚ ನ್ಯಾಯಾಲಯಗಳು ಜಿಲ್ಲಾ ನ್ಯಾಯಾಲಯಗಳು ಮತ್ತು ತಾಲೂಕು ನ್ಯಾಯಾಲಯಗಳೆಂಬ ನ್ಯಾಯಾಂಗ ಸಂಸ್ಥೆಗಳನ್ನು ಕಟ್ಟಿ ಅನೇಕ ಸುಧಾರಣೆಗಳನ್ನು ತಂದಿದ್ದಿವೆ. ಭಾರತಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದ ನಂತರ ಕೆಲವರು ನಮ್ಮ ಸಂವಿಧಾನದ ಕುರಿತು ಯೋಚಿಸುವ,ಮಾತಾಡಲು,ಬರೆಯಲು ಮತ್ತು,ಚರ್ಚಿಸಲು ಆರಂಭಿಸಿದ್ದೆವೆ.ಇದು ಉತ್ತಮವಾದ ಆರೋಗ್ಯಕರ ಬೆಳವಣಿಗೆ.ನಾವೆಲ್ಲ ಯಾವ ಯಾವ ಸೂತ್ರಗಳಿಗೆ ಬದ್ಧರಾಗಿ ಕೆಲಸ ಮಾಡುತ್ತಿದ್ದೆವೆ ಎಂಬ ಅರಿವು ನಮಗೆಲ್ಲರಿಗು ಬೇಕು ಈ ರೀತಿಯ ಅರಿವು ನಮ್ಮನು ಒಳ್ಳೆಯ ಪ್ರಜೆಗಳನ್ನಾಗಿ ರೂಪಿಸುತ್ತದೆ. ತುಂಬಾ ನೋವಿನ ಸಂಗತಿ ಎಂದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಂವಿಧಾನದ ಪ್ರತಿಯನ್ನು ಸುಟ್ಟು ವಿಕೃತಿ ಮೇರೆದರು,ಸಂವಿಧಾನದ ರಕ್ಷಣೆಯ ಜವಾಬ್ದಾರಿ ಹೊತ್ತವರು ಆಣೆ ಪ್ರಮಾಣ ಮಾಡಿ ಅಧಿಕಾರಕ್ಕೆ ಬಂದವರು ಯಾರೂ ಕೂಡ ಈ ರೀತಿಯ ಹೀನ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿಲ್ಲ.ಹೆಚ್ಚಿನ ಮಾದ್ಯಮಗಳು ಈ ವಿಷಯವನ್ನ ಚರ್ಚೆಯ ಮಾಡಲಿಲ್ಲ, ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಕೂಡ ಸಂವಿಧಾನವನ್ನು ಬದಲಾಯಿಸುವ ಮಾತು ಕೆಲವು ಬಲಪಂಥೀಯ ರಾಜಕಾರಣಿಗಳು ಸಾರ್ವಜನಿಕವಾಗಿ ಬಹಿರಂಗವಾಗಿ, ಸಂವಿಧಾನ ವಿರೋಧಿ ಹೇಳಿಕೆಗಳು ಘೋಷಣೆಗಳು ಕೆಳಿಬಂದರು ಇವೆಲ್ಲವನ್ನೂ ಗಮನಿಸಿದಾಗ ಇಂದಿನ ಭಾರತದ ಅನೇಕರು ಜನವರಿ 26 ರಂದು ಜಾರಿಗೆ ತಂದ ಸಂವಿಧಾನದ ಬಗ್ಗೆ ಗೌರವ ಹೊಂದಿಲ್ಲ ಎಂಬುದು ನೋವಿನ ಸಂಗತಿಯಾಗಿದೆ.ಇಂದಿನ ಸದ್ಯದ ಮಟ್ಟಿಗೆ ಪರಿಸ್ಥಿತಿ ಹೇಳುವುದಾದರೆ .ಸಂವಿಧಾನ ವಿರೋಧಿಗಳು ಪರ್ಯಾಯವಾಗಿ ಈ ನಾಡಿಗೆ ಏನು ಕೊಡುತ್ತಾರೆ? ಮನುಸ್ಮೃತಿ, ಅಥವಾ ಭಾಗ್ವತಗೀಯೊ ? ಸ್ಪಷ್ಟವಿಲ್ಲ.ಜಾತಿ ಪದ್ದತಿ ವರ್ಣಾಶ್ರಮ, ಧರ್ಮ, ಅಸಮಾನತೆ ಒಂದಲ್ಲಾ ಒಂದು ರೀತಿಯಲ್ಲಿ ಸಮರ್ಥಿಸುವ ಈ ಬಹುತೇಕ ಭಾರತೀಯರಿಗೆ ಏನು ತಿಳಿದಿಲ್ಲ, ಸಂಸ್ಕೃತವನ್ನು ದೇವ ಭಾಷೆ ಎಂದು ಘೋಷಿಸಿ ಮನುಷ್ಯರಿಂದ ದೂರ ಇಟ್ಟಿದ್ದ ಪಾರಂಪರಿಕ ಲೋಕದಲ್ಲಿ ಬಹುತೇಕ ಅಂಶಗಳು ಇಂದಿನ ಭಾರತಕ್ಕೂ ವಿಶ್ವಕ್ಕೂ ಸಂಬಂಧವೆ ಇಲ್ಲ.ಮತಿಹಿನ ಪಂಡಿತರಿಂದ ಇವತ್ತು ಭಾರತವು ವಿಶ್ವದಾದ್ಯಂತ ನಗೆಪಾಟಲಿಗೆ ಗುರಿಯಾಗುತ್ತಿದೆ.ಕಾರಣ ಸೆಗಣಿಯಲ್ಲಿ ಚಿನ್ನವಿದೆ , ಎಂದು ವಾದಿಸುವ ಪಂಡಿತರಿಂದ ಜಾಗತಿಕವಾಗಿ ತೆಲೆ ತಗ್ಗಿಸುವಂತಾಗಿದೆ. ಭಾರತದ ಯಾವ ಶಾಸ್ತ್ರಗಳೂ ಈ ದೇಶದ ವೈವಿಧ್ಯಕ್ಕೆ ಸರಿಯಾದ ವ್ಯಾಕರಣ ಬರೆದಿಲ್ಲ.ಬರೆದಿದ್ದರೆ ಅದು ಡಾ ಬಾಬಾಸಾಹೇಬ ಅಂಬೇಡ್ಕರರು ಮಾತ್ರ ಅವರ ಮುಂದಾಳತ್ವದಲ್ಲಿ ಸಿದ್ಧಗೊಂಡ ಸಂವಿಧಾನ ಮಾತ್ರ ಭಾರತದ ಎಲ್ಲ ಬಗೆಯ ನಿರೂಪಣೆಗಳಿಗೆ ಸಮಾನ ಗೌರವ ನೀಡಿ, ಅವುಗಳನ್ನು ಒಂದು ಸೂತ್ರದಲ್ಲಿ ಮೊದಲ ಬಾರಿಗೆ ಹಿಡಿದಿಟ್ಟ ಏಕೈಕ ಗ್ರಂಥವೆಂದರೆ ನಮ್ಮ ಸಂವಿಧಾನ.ಅದನ್ನು ಗೌರವಿಸುವುದೆಂದರೆ ದೇಶವನ್ನು ಗೌರವಿಸಿದಂತೆ ಅದನ್ನು ವಿರೋಧಿಸುವುದೆಂದರೆ ದೇಶವನ್ನು ವಿರೋಧಿಸಿದಂತೆ. ನಮ್ಮ ಸಂವಿಧಾನವು ಇಲ್ಲಿನ ಈ ನೇಲದ ರಾಜ್ಯತ್ವ ಧಾರ್ಮಿಕತೆ,ಜಾತಿಯತೆ,ಮೊದಲಾದ ಹಂಗುಗಳಿಂದ ನಮ್ಮನು ಬಿಡಿಸಿ ನಮಗೆ ದೇಶದ ಪೌರತ್ವವನ್ನು ನಿಡಿದೆ, ಮೌಖಿಕ ಪರಂಪರೆಯ ಅನೇಕ ಹುಸಿ ಮಾತುಗಳ ಸಂಕೊಲೆಯಿಂದ ಬಿಡಿಸಿ , ಕೋಟ್ಯಂತರ ಭಾರತಿಯರ ಬದುಕಿಗೊಂದು ಭದ್ರತೆಯನ್ನೂ ನಿಡಿದೆ.ಸಮಾನತೆ ಮತ್ತು ಸಾಮಾಜಿಕ ನ್ಯಾಯವು ಮರಿಚಿಕೆಯಾಗಿದ್ದ ಭಾರತದಲ್ಲಿ ಎಲ್ಲರ ಘನತೆಯನ್ನು ಸಮಾನವಾಗಿ ಎತ್ತಿ ಹಿಡಿದದ್ದು ಮಾತ್ರ ಸಂವಿಧಾನ ಅದಕ್ಕೆ ಎಲ್ಲರ ಮೇಲೂ ಕೂಡ ರಕ್ಷಿಸುವ ಹೊಣೆಗಾರಿಕೆಯಿದೆ.ಇಷ್ಟೆಲ್ಲಾ ಗೊತ್ತಿದ್ದರು ಇತ್ತೀಚೆಗಿನ ದಿನಗಳಲ್ಲಿ ನಾವೆಲ್ಲ ನಿಜವಾಗಿ ಆತಂಕ ಪಡುವ ಘಟನೆಗಳು ದಿನನಿತ್ಯ ನಡೆಯುತ್ತಿವೆ .ಶಾಸಕಾಂಗವು ನ್ಯಾಯಾಂಗವು ನಿಯಂತ್ರಿಸಲು ವಿವಿಧ ಬಗೆಯ ಒಳ ಹೆಂಚುಗಳನ್ನು ನಡೆಸುತ್ತಿರುವುದು ಭಯದ ವಾತಾವರಣ ನಿರ್ಮಾಣವಾಗಿದೆ.ನ್ಯಾಯಂಗದ ಕೆಲವರು ತಮ್ಮ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸಿದೆ, ಕೋಮುವಾದಿ ಹೇಳಿಕೆಗಳನ್ನು ನೀಡುತ್ತಾ ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ ಉಂಟು ಮಾಡುವ ಮೂಲಕ ಅವಮಾನ ಮಾಡುತ್ತಿರುವ ನಾವೆಲ್ಲ ದಿನಂಪ್ರತಿ ಕಾಣುತ್ತಿದ್ದೇವೆ.ನಿರ್ಲಜ್ಯ ರಾಜಕಾರಣವು ಪ್ರಜಾಪ್ರಭುತ್ವವನ್ನು ಅಣುಕಿಸುತ್ತಿದೆ.ಮಾನವನ ಘನತೆಗೆ ಧಕ್ಕೆ ತರುವಂತಹ ಕೆಲಸಗಳನ್ನು ಕೆಲವು ಜನಪ್ರತಿನಿಧಿಗಳು ಮಾಡುತ್ತಿದ್ದಾರೆ.ಮತ್ತು ಅಂಥವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವಲ್ಲಿ ಸರ್ಕಾರವು ವಿಫಲವಾಗಿದೆ.ಆಹಾರ,ಭಾಷೆ, ಧರ್ಮ ಮತ್ತಿತರ ವಿಷಯಗಳ ಮೇಲೆ ಸರ್ಕಾರ ಬಲಾತ್ಕಾರದಿಂದ ಹಸ್ತಕ್ಷೇಪ ಮಾಡಲು ಶುರು ಮಾಡಿದೆ.ಎಲ್ಲ ಭಾರತಿಯರಿಗೆ ಒಂದೆ ಕಾನೂನು ಎಂಬ ಮಾತು ಜಾರಿಗೆ ಬರದೆ ಉಳ್ಳವರಿಗೊಂದು ಬಡವರಿಗೊಂದು ಎಂಬಂತಾಗಿ ತನ್ನ ಮಹತ್ವವನ್ನೆ ಕಳೆದುಕೊಳ್ಳುತ್ತಲಿದೆ.ವಿದ್ಯಾವಂತರು ಸಾಮಾಜಿಕ ನ್ಯಾಯದ ವಿರುದ್ಧ ಮಾತನಾಡದಷ್ಟು ಭ್ರಷ್ಟರಾಗಿದ್ದಾರೆ.ಪ್ರಜಾಪ್ರಭುತ್ವದ ಬೆಳವಣಿಗೆಗೆ ಅತಿ ದೊಡ್ಡ ಕೊಡುಗೆ ನೀಡಿದ ಮಾದ್ಯಮಗಳು ಇದೀಗ ಬಹುತೇಕ ಕೊಳೆತು ಹೊಗಿವೆ.ಧರ್ಮನಿರಪೇಕ್ಷತೆಯ ನಮ್ಮ ಆದರ್ಶವಾಗಿರಬೇಕಾಗಿರುವ ಹೊತ್ತು ಧರ್ಮಾಧಿಕಾರಿಗಳೆ ಶಾಸಕಾಂಗದ ಹೊಣೆ ಹೊತ್ತುಕೊಂಡು ಸಂವಿಧಾನವನ್ನು ಹಾಸ್ಯ ಮಾಡುತಿದ್ದಾರೆ .ಇಂತಹ ದಯನಿಯ ಸಂದರ್ಭದಲ್ಲಿ ಬದುಕುತ್ತಿರುವ ನಾವುಗಳು ಮೊದಲು ಮಾಡಬೇಕಾದ ಕಾರ್ಯವೇಂದರೆ ನಮ್ಮ ಸಂವಿಧಾನವನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಂಡು ಅದನ್ನು ರಕ್ಷಿಸಲು ಹೊರಡಾಬೇಕಾಗಿದೆ ಸಂವಿಧಾನವನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ.ಸ್ವತಂತ್ರ್ಯ ಸಮಾನತೆ, ಭ್ರಾತೃತ್ವ, ಸಮಾಜವಾದಿ ಮತ್ತು, ಜಾತ್ಯತೀತ ಭಾವನೆಗಳನ್ನು ಮೂಡಿಸುವ ದೃಢ ಸಂಕಲ್ಪದ ಆಶಯಗಳನ್ನು ಜನಸಾಮಾನ್ಯರಿಗೆ ಅದರಲ್ಲಿಯೂ ಭವಿಷ್ಯವನ್ನು ನಿರ್ಮಾಣ ಮಾಡುವ ಶಿಕ್ಷಕ ವೃಂದಕ್ಕೆ ವಿದ್ಯಾರ್ಥಿ,ಯುವ ಸಮುದಾಯಕ್ಕೆ ತಿಳಿಸುವ ಅಗತ್ಯತೆ ಇದೆ.
ಸಿದ್ಧಾರ್ಥ ಟಿ ಮಿತ್ರಾ