ಕಾವ್ಯ ಸಂಗಾತಿ
ಶೃತಿ ಮಧುಸೂಧನ್
ನನ್ನೊಳಗೆ ನಾ ಒಂಟಿ…
ಕಡಿದು
ಕಡಿವಾಣವಾಗುವ
ಸಂಬಂಧಗಳಿಂದ
ಅರಿವಿನ
ಅನುಭವಕ್ಕೆ
ಕುರುಡು
ಕಣ್ಣುಗಳ
ಚಿವುಟಿ
ಹುಡುಕಬೇಕಾಗಿದೆ
ನನ್ನದೇ
ಪ್ರತಿಬಿಂಬವ
ನನಗೆ ನಾ
ಮಾತ್ರ ಜಂಟಿ.
ಸಾವೆಂಬ
ಪದವಿ
ಸಿಗಲು
ಹೆಸರು ಕೀರ್ತಿ
ಪ್ರಶಸ್ತಿ
ಎಲ್ಲವೂ
ಮೂರು /ಆರು ಅಡಿ
ಮಣ್ಣಿಗೆ ಅಂಟಿ
ಸಿಕ್ಕಿದು
ಬೂದಿ
ಸಿಗದಿದ್ದು
ಹುಳಿ ಹುಗ್ಗಿ
ತಿಳಿದಾಗ
ಚಿತೆಯ
ರುದ್ರಾಗ್ನಿ …
ಶೃತಿ ಮಧುಸೂಧನ್
ಚಂದದ ಕವಿತೆ