ಶಕುಂತಲಾ ಎಫ್ ಕೋಣನವರ ಗಜಲ್

 ಒಡನಾಡಿಯ ಏಳಿಗೆಗೆ ಕರುಬಿದರೆ ಬೆಳೆಯುವೆ ಹೇಗೆ
ಸಡಗರದ ವೇಳೆಯಲಿ ಕಣ್ಣೀರಿಟ್ಟರೆ ಮೊಳೆಯುವೆ ಹೇಗೆ

ತ್ಯಾಗವೊಂದು ಒಡವೆಯಂತೆ ತೊಟ್ಟವರು ಶೋಭಿಪರು ಲೋಕದಿ
ಆಗುಹೋಗು ಸಹಿಸದೆ ಎದೆಯೊಳಗೆ ಇಳಿಯುವೆ ಹೇಗೆ

ಮಮತೆಯೂಡಿ ಸಂಭ್ರಮಿಪ ಮನಸು ಅಕ್ಷಯ ಪಾತ್ರೆಯಂತೆ
ದಮನಿಸದೆ ಹೀನಗುಣ ಆಂತರ್ಯವ ತೊಳೆಯುವೆ ಹೇಗೆ

ಮನನೋಯಿಸಿ ಗಂಗೆಯಲಿ ಮಿಂದರೆ ಪಾಪ ನಾಶವಾದೀತೆ
ಕನವರಿಸಿ ಯಶಕೆ ಕೈಚಾಚಿದರೆ ಬಿರಿಯುವೆ ಹೇಗೆ

ಅಹಂಕಾರದ ಮದಗಜ ಏರಿದವಗೆ ಅಂಕುಶದ ಅರಿವಿರದು ಶಕು
ಮಹಂತರ ಸಂಗದೊಳು ತೃಪ್ತಿಯುಣದೆ ತಣಿಯುವೆ ಹೇಗೆ

—————————–

2 thoughts on “ಶಕುಂತಲಾ ಎಫ್ ಕೋಣನವರ ಗಜಲ್

  1. ಈ ಸುಂದರವಾದ ಕವಿತೆ ಕವನಗಳನ್ನು ತುಂಬಾ ಸುಂದರವಾಗಿ ಮತ್ತು ಅದರ ಕೃತಿಗಳನ್ನು ಸವಿಸ್ತಾರವಾಗಿ ನಮ್ಮ ಎಲ್ಲರಿಗೂ ತಿಳಿಸಿ ಕೊಡುತ್ತೀರಾ ನಿಮ್ಮಿಂದ ಕಲಿಯುವುದು ತಿಳಿದುಕೊಳ್ಳುವುದು ತುಂಬಾನೇ ಇದೆ ಧನ್ಯವಾದಗಳು

Leave a Reply

Back To Top