ಲಕ್ಷ್ಮೀದೇವಿ ಪತ್ತಾರ ಅವರ ಕವಿತೆ-ಮುಂದುವರಿದಿದೆ

ಹೊಸದೆನ್ನುವುದು ಈ ಜಗದಲ್ಲಿ
ಯಾವುದಿದೆ ?
ಗಮನವಿಟ್ಟು ನೋಡಿದರೆ
ಎಲ್ಲವೂ ಹಳೆಯದರ ಹೊಸ ರೂಪವಷ್ಟೆ

ಹುಟ್ಟುವುದು ಅದೇ ಹಳೆಯ ಆತ್ಮ ಸಾಯುವುದು ಅವೆ ಪಂಚಭೂತಗಳು
ಸತ್ತಿರುವುದು ಹಳೆಯ ಸಂಬಂಧ
ಹುಟ್ಟುವುದು ಮತ್ಯಾವುದೋ  ಹೊಸ ಬಂಧ


 ಇದ್ದದ್ದನ್ನು ಲಯ ಮಾಡಲು ಬಾರದು ಇಲ್ಲದನ್ನು ಸೃಷ್ಟಿಸಲು  ಆಗದು
 ಸೃಷ್ಟಿಯು ಇಲ್ಲ  , ಲಯವೂ ಇಲ್ಲ
ಅದೇ ಮುರಿದು ಕಟ್ಟುವ (  ಕಾರ್ಯ )ದೃಷ್ಟಿ

ಕೆಟ್ಟದ್ದು ಕಳೆಯುವುದಿಲ್ಲ
 ಒಳ್ಳೆಯದು ಅಳಿಯುವುದಿಲ್ಲ
 ಕೊರಗಿ,ಮರುಗಲು ಕಾರಣವೇ ಇಲ್ಲ.

ಈಗ ಇರುವುದೆಲ್ಲವೂ ಮೊದಲೂ ಇತ್ತು
ಮತ್ತೆ ಮತ್ತೆ ಮುಂದುವರಿಯುವದು
ಕಾಲಚಕ್ರದಲ್ಲಿ ಹಳೆಯದು ನವನವೀನ ಹೊಸದು ಹಳೆಯದಕ್ಕೆ ಹಚ್ಚಿದ ಬಣ್ಣ


Leave a Reply

Back To Top