ಕವಿತಾ ವಿರೂಪಾಕ್ಷ ಅವರ ಕವಿತೆ-‘ಬಂದಿಲ್ಲಿ ಸ್ವಲ್ಪ ಕೂರು’

ಬಾ ಇಲ್ಲಿ
ಸ್ವಲ್ಪ ಕೂರು..

ಸುದೀರ್ಘ ಜೀವನದ
ಒಣ ತಯಾರಿ ,
ಎಷ್ಟು ಮಾಡಿದರೂ
ಅಷ್ಟೆ..,
ಮುಗಿಯುವ ಲಕ್ಷಣವೇ ಇಲ್ಲ…!

ಧಾವಂತದ ಬದುಕಲ್ಲಿ
ಹೆಚ್ಚಾದ ಉಸಿರಾಟ,
ಎದೆ ಬಡಿತದ ಸದ್ದನ್ನಾದರು
ಕೇಳಿಸಿಕೊ..
ಬದುಕಿರುವ
ಖಾತ್ರಿಯಾದರೂ ಆಗಲಿ..!!

ಹಾದಿ ಸವೆದು,
ಅಂಗಾಲಿನ ಚಕ್ಕಳವೆದ್ದರೂ
ವಿಶ್ರಾಂತಿ ಬೇಡವೇ…?
ಬಾ..,
ಬಂದಿಲ್ಲಿ ಸ್ವಲ್ಪ ಕೂರು…!
ಬದುಕಿನ ಕಡಲು ,
ಕೇವಲ ಕಲ್ಪನೆಯಲ್ಲ.
ಇದು..,
ನೋಡಿ,ಇಳಿದು,ಮುಳುಗಿ
ಸತ್ತು ಬದುಕುವಾ ಆಟ..!!

ಧಾವಂತ ಬೇಡ..,
ಬಾ..,
ಬಂದಿಲ್ಲಿ ಸ್ವಲ್ಪ ಕೂರು,
ವಿಶ್ರಮಿಸು..
ನಿನಗೆ ನೀನೇ ಇಲ್ಲಿ
ಸಿಕ್ಕರೂಸಿಗಬಹುದು..!

One thought on “ಕವಿತಾ ವಿರೂಪಾಕ್ಷ ಅವರ ಕವಿತೆ-‘ಬಂದಿಲ್ಲಿ ಸ್ವಲ್ಪ ಕೂರು’

Leave a Reply

Back To Top