ಮನ್ಸೂರ್ ಮೂಲ್ಕಿ ಕವಿತೆ-ಕಡಲ ತೀರ

ಕಂಡೆನು ಕಡಲನು ಮೊದಲ ಬಾರಿಗೆ
ಭಯದಿಂದ ಸರಿದೆನು ದೂರಕೆ
ಕಡಲಿನ ಹೊಳಪು ಇಲ್ಲ ಯಾಕೆ ನದಿಗೆ
ತೊರೆಯು ಸೆಳೆಯಿತು ತೀರದ ಸ್ಪರ್ಶಕೆ

ಪ್ರಕೃತಿಯು ನೀಡಿದ ವೈಶಿಷ್ಟಗಳನು
ಸವಿಯಲು ಈ ಆಯುಷ್ಯ ಸಾಕೇನು
ಸಂಜೆಯ ಹೊತ್ತಲ್ಲಿ ಕಡಲಿನ ಅಂದವ
ತೀರದಿ ವಿಹರಿಸುವ ಸವಿಯೇನು

ಕಡಲಿನ ಪ್ರೀತಿಯು ಕನಸಿನ ಲೋಕವು
ತೀರದ ಹೆಜ್ಜೆಯು ನನಸಾಗುವುದು
ಪ್ರೀತಿಯ ಮಾತಿಗೆ ಕಡಲಿನ ತಟವು
ಕನಸನು ಹುಟ್ಟು ಹಾಕುವುದು

ಬಾನಿನ ಹೊಳಪು ಕಡಲಲ್ಲಿ ತೇಲಿ
ಸೂರ್ಯನು ಮೆಲ್ಲನೆ ಮುಳುಗಿದನು
ತಂಪಗೆ ಬೀಸಿದ ಕಡಲಿನ ಗಾಳಿಗೆ
ಹೃದಯ ಕವಿಯು ನಿಂತಿಹನು


Leave a Reply

Back To Top