ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಮ್ಮೀ ಜೀವನ
ಸಾವಿರ ಪುಟಗಳ
ಗ್ರಂಥವಿದ್ದಂತೆ

ತಾಯಿಯೆಂದರೆ
ಬೆಲೆ ಕಟ್ಟಲಾಗದ
ಮಾಣಿಕ್ಯ ನಿಜ

ಜೇಬಿನ ತುಂಬಾ
ಹಣ, ಇಲ್ಲ -ಸಲ್ಲದ
ಚೆಲ್ಲಾಟ ಮನ

ತುಟಿ ಮೀರಿದ
ಮಾತು ಕೆಡಿಸುವುದು
ಒಳ್ಳೆ ಸಂಬಂಧ

ತಾಯಿ ಇರುವ
ತನಕ, ತವರಲ್ಲಿ
ಸದಾ ಬೆಳಕು

ನಲ್ಲೆಯ ತುಟಿ
ಸವಿದು -ಸವಿದು ನಾ
ಮಧುಮೇಹಿಯು

ನಾಳೆ ಅಂದಾಗ
ಕೇಡು ಎಂಬುದು
ತಿಳಿದಿರಲಿ

ಮರಿ ಹಕ್ಕಿಯು
ಕಾಣುತ್ತಿಲ್ಲ, ತಾಯಿಯ
ಅಳು ನಿಂತಿಲ್ಲ


About The Author

Leave a Reply

You cannot copy content of this page

Scroll to Top