ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಭೂಮಿ ಒಡೆಯರು
ಭೂಮಿ ಕ್ಷಮಿಸಿ ಬಿಡು ಭೂತಾಯಿ
ದಾಳಿ ಮಾಡಿದೆವು ನಾವು
ಸುಡು ಸುಡು ಕೆಂಡ
ತಿರುಗುವ ಭೂಮಿ
ಅಣುಶಕ್ತಿ ಬಾಂಬು
ಪಕ್ಷಿ ಪ್ರಾಣಿಯ ಕೊಂದು
ಹೆಮ್ಮೆಯಲಿ ಮೆರೆಯುವೆವು
ಭೂಪರೆಂದು
ಎಲ್ಲೆಂದರಲ್ಲಿ ಮೊಬೈಲ್ ಟವರ್
ಹದ್ದು ಗುಬ್ಬಿ ಬೆಳವ ಗೀಜಗ
ದಾರಿಯಲಿ ಸತ್ತು ಹೋದವು
ನಿಂತಿಲ್ಲ ಮಾನವನ ಕ್ರೂರ ಸ್ವಾರ್ಥ
ಕಾಡು ಕಡಿದೆವು ನಾವು
ಕಾಂಕ್ರೆಟಿನ ಗೂಡು
ಕೆರೆ ಹಳ್ಳ ನದಿಯೊತ್ತಿ
ನೆಲವ ಮಾಡಿದೆವು ಸುಡುಗಾಡು
ಮದ್ದು ಗುಂಡು ಪಟಾಕಿ
ಕುಲಗೆಟ್ಟಿತು ವಾಯು
ಡಿಜೆ ವಾಹನ ಯಂತ್ರಗಳ ಸಪ್ಪಳ
ಕಿವುಡರಾದೆವು ಶಬ್ದ ಮಾಲಿನ್ಯ
ಬದುಕ ಬೇಕು ನಾವು
ಬದುಕಿಸುತ ಜಗವನ್ನು
ಭೂಮಿ ಒಡೆಯರು ನೋಡು
ಹುಲಿ ಆನೆ ಜಿಂಕೆಗಳು
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಜಾಗತಿಕ ತಾಪಮಾನ ಏರಿಕೆಯಿಂದ ಉಂಟಾಗುತ್ತಿರುವ ಹವಾಮಾನ ವೈಪರಿತ್ಯದ ದುಷ್ಪರಿಣಾಮ ಗಳಿಗೆ ಮನುಷ್ಯನ ಸ್ವಾರ್ಥ ಕಾರಣ .. ಹಾಗೂ ಪರಿಸರದ ಈ ಸ್ಥಿತಿಗೆ ,ನಮ್ಮನ್ನು ನಾವೇ ಅವಲೋಕನ ಮಾಡಿಕೊಂಡು ಅದರ ಸಂರಕ್ಷಣೆಗಾಗಿ ಸುಂದರ ನಾಳೆಗಳಿಗಾಗಿ ನಾವು ಪಣ ತೊಡುವದು ಎಷ್ಟು ಮುಖ್ಯ ಎಂಬ ಸೂಕ್ಷ್ಮ ಅಂಶಗಳ ಸುಂದರ ಅನಾವರಣ ಸರ್. ಪರಿಸರದ ಸಂರಕ್ಷಣೆ ಕುರಿತು ತಮ್ಮ ಕಳಕಳಿಯ ಕಾಳಜಿ …ತಮ್ಮಂತೆ ಎಲ್ಲರಲ್ಲೂ ಮೂಡಿದರೆ ಈ ಧರೆ ಒಂದು ಸೊಗಸಾದ ನಂದನವನ ವಾಗುತ್ತದೆ.
Excellent poem