ಭಾರತಿ ಅಶೋಕ್ ಕವಿತೆ-ಪ್ರೇಮಧ್ಯಾನ

ಪ್ರೇಮ ದ್ಯಾನದಲ್ಲಿ
ನಿಂದ ಚಿರ ಬಿಂಬ ಅವನದೆಂದು
ಪೊಳ್ಳು ಮಾತಿಂದ ನಂಬಿಸಲಾರಳು
ಅವನನ್ನು, ತನ್ನನ್ನೂ

ಒಲವ ನೆಲದಲಿ
‘ಕೈ ಹಿಡಿದು ನಡೆದಳೆಂ’ದರೆ
ಅದು ಆತ್ಮ ವಂಚನೆಯಲ್ಲದೆ
ಮತ್ತೇನು!

ಅವನಲ್ಲದ ಅವನನ್ನು
ಅವನೇ ಎಂದರೆ
ಅವಳು ಅವನಿಗೆ
ಮಾಡುವ ವಂಚನೆಯೆ

ಮೌನಿಯಾದಾಗ
ಮಾತಿಗಿಳಿದುದು ಅವನೊಂದಿಗೆ
ಎಂದರೆ ನಯವಂಚನೆ
ಶಾಶ್ವತ ಮೌನಿಯಾಗಿಸೀತು.

ಇಲ್ಲ ಇಲ್ಲ
ಅದಾವುದು ಅವನಲ್ಲ
ಅವನಲ್ಲದ ಅವನನ್ನು
ಅವನೆಂದು ವಂಚಿಸಲಾರಳು


Leave a Reply

Back To Top