ಕಾವ್ಯ ಸಂಗಾತಿ
ಶೋಭಾ ನಾಗಭೂಷಣ
ಭಾವರಂಗದ ಪಯಣ
ಜಗದ ರಂಗದಲಿ ಪಾತ್ರಗಳು
ಅಗಣಿತವು ಕಾಣದಾಗಿದೆ
ಅದರಲಿ ಜೀವಂತಿಕೆಯು
ಪಯಣಿಸುತ್ತಿರುವವವು
ಭಾವಗಳು ನವರಸಗಳ
ಪಕ್ಕೆಯಲಿ ಕುಳಿತು
ಶೃಂಗಾರ ಹಾಸ್ಯ ಕರುಣ
ರೌದ್ರ ವೀರ ಭಯಾನಕ
ಭೀಭತ್ಸ ಅದ್ಭುತ ಶಾಂತ ಸ್ವರೂಪಗಳು
ಬೆರೆತು ಒಂದರ ಬೆನ್ನ ಹಿಂದೆ
ಮತ್ತೊಂದು ಕುಳಿತು ಸಾಗಿಹವು
ಬಿಡದೆ ಬೇತಾಳನಂತೆ
ಭಾವವಿಲ್ಲದ ಜೀವನ ಸಾಗುವುದಿಲ್ಲ
ಅದರ ಪಯಣ
ಸಾವಿನಲ್ಲೂ ಶಾಂತ ಭಾವವು
ಹಾಸ್ಯದ ಲೋಕಕ್ಕೆ ಮಾತ್ರವೂ
ಒಳಗೊಳಗೆ ತುಂಬಿರುವುದು
ಕರುಣರಸ ಕರುಳು ಹಿಂಡುವಂತೆ
ಶೃಂಗಾರ ಅವಿಭಾಜ್ಯ ಅಂಗವು
ಈ ರಂಗದ ಮೇಲಿನ ಅದ್ಭುತ ಪ್ರದರ್ಶನದಲಿ
ಮೆರೆಯುವುದು ವೀರತ್ವವು
ಬೇಡವೆಂದರೂ ಉಗ್ರ ರೂಪ ತಾಳುವ ಭಾವವು
ಬೀಭತ್ಸ ಭಾವಕದುವೆ ಮುನ್ನುಡಿಯು
ಫಲಿತಾಂಶ ಮಾತ್ರ ಭಯಾನಕ
ಈ ಬಾಳಿನ ಭಾವರಂಗದ
ಪಯಣದ ಹಾದಿಯಲಿ
ಶೋಭಾ ನಾಗಭೂಷಣ