ಸ್ವಾಗತ ಮತ್ತು ಬೀಳ್ಕೊಡುಗೆ ಯ ನಡುವೆ. ವಿಶೇಷ ಲೇಖನ-ಪ್ರಮೀಳಾ. ಎಸ್.ಪಿ.

ಇಂದಿನ ದಿನಮಾನಗಳಲ್ಲಿ ಎಲ್ಲ ಇಲಾಖೆಯ ಸಿಬ್ಬಂದಿ ವರ್ಗದವರು” ಜನಸ್ನೇಹಿ” ವಾತಾವರಣ ನಿರ್ಮಿಸಿ ಕರ್ತವ್ಯ ನಿರ್ವಹಿಸಲು ಮುಂದಾಗುತ್ತಿರುವುದು ಸಂತಸದ ವಿಚಾರ.
ಇದರಲ್ಲಿ ಇಲಾಖೆಯ ಅಥವಾ ಕಚೇರಿಯ ಮೇಲಧಿಕಾರಿಗಳು ಮತ್ತು ಕೆಳ ಹಂತದ ನೌಕರರ ನಡುವೆ ಒಂದು ಉತ್ತಮ ಬಾಂಧವ್ಯ ಇರಬೇಕಾದುದು ಅತ್ಯಗತ್ಯ.
ಆಗಿಂದಾಗ್ಗೆ ಚುನಾವಣೆ ಗಳ ಮೂಲಕ ಆಯ್ಕೆಗೊಂಡು ಅಧಿಕಾರ ಪಡೆಯುವ ಮತ್ತು ಅಧಿಕಾರ ಹಸ್ತಾಂತರ ಮಾಡುವ ರಾಜಕೀಯ ಪಕ್ಷಗಳಾಗ ಲಿ ,ವ್ಯಕ್ತಿಯಾಗಲಿ ಸರ್ಕಾರದ ಕಾರ್ಯ ಯೋಜನೆಗಳಿಗೆ ಉತ್ತರದಾಯಿತ್ವ ಹೊಂದಿರುವುದಿಲ್ಲ.ಇದು ಪ್ರಜಾಪ್ರಭುತ್ವ ದ ಒಂದು ದೊಡ್ಡ ದೋಷಕೂಡ ಆಗಿದೆ.ಆದರೇ
ಸರ್ಕಾರಿ ನೌಕರವರ್ಗ ಸರ್ಕಾರದ ಎಲ್ಲ ಯೋಜನೆಗಳ,ಕಾರ್ಯಕ್ರಮ ಗಳ,ಅಭಿವೃದ್ಧಿ ಕಾರ್ಯಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವ ಹೊಣೆಗಾರಿಕೆ ಹೊಂದಿರುತ್ತದೆ.
ಹಾಗೂ ತನ್ನ ಸೇವಾವಧಿ ಮತ್ತು ನಿವೃತ್ತಿಯ ನಂತರವೂ ಆತ ತಾನು ನಿರ್ವಹಿಸಿದ ಕಾರ್ಯಕ್ಕೆ ಬದ್ಧನಾಗಿಯೂ ಜವಾಬ್ದಾರಿಯುತನಾಗಿಯೂ ಇರಬೇಕಾಗುತ್ತದೆ.

ಒಬ್ಬ ಸರ್ಕಾರಿ ನೌಕರನೊಬ್ಬ ದಿನದ ಇಪ್ಪತ್ತನಾಲ್ಕು ಗಂಟೆಯೂ ಸರ್ಕಾರಿ ಸೇವೆಗೆ ಸಿದ್ಧನಿರಬೇಕು ಎಂದ ಮೇಲೆ ನಿಯಮಗಳಿಗೆ ಬದ್ಧನಾಗಿರಬೇಕಾಗುತ್ತದೆ.
 “ಪ್ರಾಮಾಣಿಕತೆ ಅವನ ಹೊಣೆಗಾರಿಕೆ’.
ಒಬ್ಬ ಸರ್ಕಾರಿ ನೌಕರ ತನ್ನ ನಿವೃತ್ತಿಯ ವಯಸ್ಸಿನವರೆಗೂ ಸಾಮಾಜಿಕ ಕಳಕಳಿಯಿಟ್ಟು ಧಕ್ಷತೆಯಿಂದ ಸೇವೆ ಸಲ್ಲಿಸುವುದು ಒಂದು ಮೌಲ್ವಿಕ ಗುಣ.ಇದು ಸಹಜವಾಗಿ ಯೇ ಅವನಲ್ಲಿ ಮೂಡಬೇಕು.ಇದಕ್ಕಾಗಿ ಅವನು ಸರ್ಕಾರದಿಂದ ನಿಗದಿಪಡಿಸಿದ ಸಂಬಳ ಪಡೆಯುತ್ತಾನೆ. ಆ ಮೂಲಕ ಸಮಾಜದ  ಶ್ರೇಯೋಭಿವೃದ್ಧಿಗೆ ನೆರವಾಗುತ್ತಾನೆ.

ಈ ಕಾರಣಕ್ಕಾಗಿ ಯೇ ಒಬ್ಬ ನೌಕರ ನಿವೃತ್ತನಾದಾಗ ಆತನ ಸಹೋದ್ಯೋಗಿ ಗಳಾಗಲಿ,ತನ್ನ ಕಾರ್ಯಕ್ಷೇತ್ರದ ಫಲಾನುಭವಿಗಳಿಗಳಾಗಲಿ, ನಿವೃತ್ತಿಯ ದಿನ ಶುಭ ಹಾರೈಸಿ ,ನೆನಪಿನ ಕಾಣಿಕೆ ಕೊಟ್ಟು ಗೌರವ ವಿದಾಯ ಹೇಳುವುದು ನಮ್ಮಲ್ಲಿ ಬೆಳೆದು ಬಂದ ಒಂದು ಸುಸಂಪ್ರದಾಯ.

ಇದರಿಂದಾಗಿ ನಿವೃತ್ತನಾದ ವ್ಯಕ್ತಿಯ ಮನದಲ್ಲಿ ಒಂದು ಸಂತೃಪ್ತಭಾವ ನೆಲೆಗೊಂಡು ಆತನಲ್ಲಿ ಸಾರ್ಥಕ ಮನೋಲ್ಲಾಸ ಕಾಣಬಹುದು.ಇದು ಇತರೆ ನೌಕರರು ಕೂಡ ಉತ್ತಮ ಸೇವೆ ಸಲ್ಲಿಸಲು ಉತ್ತೇಜನ ನೀಡಬಲ್ಲದು.
ಇತ್ತೀಚಿನ ದಿನಗಳಲ್ಲಿ ಕನಿಷ್ಠ ಎರಡು ಮೂರು ವರ್ಷಕ್ಕೊಮ್ಮೆ ವರ್ಗಾವಣೆ ಪ್ರಕ್ರಿಯೆ ನಡೆದು ಅಥವಾ ಬಡ್ತಿ ಹೊಂದಿ ನೌಕರರ ಸ್ಥಳ ಮತ್ತು ಸ್ಥಾನ ಬದಲಾವಣೆಗೊಂಡಾಗ
ಅಧಿಕಾರಿಗಳನ್ನು ಸ್ವಾಗತಿಸಲು ಮತ್ತು ಬೀಳ್ಕೊಡುಗೆ ನೀಡಲು ಕೆಳ ಹಂತದ ನೌಕರವರ್ಗ ಮುಗಿಬಿದ್ದು ನಿಲ್ಲುತ್ತದೆ.
ಹಾರ ,ತುರಾಯಿ,ಹಣ್ಣು,ಹೂವು,ಸ್ಮರಣಿಕೆ,ಶಾಲು,ಉಡುಗೊರೆ ಇತ್ಯಾದಿಗಳನ್ನು ಕೊಳ್ಳಲು ನೌಕರವರ್ಗವೇ ಹಣ ಹೊಂದಿಸಿಕೊಂಡು ಕಾರ್ಯಕ್ರಮ ಮಾಡಿ ಅಧಿಕಾರಿಗಳ ಮತ್ತು ಸಾರ್ವಜನಿಕ ರ ಗಮನ ಸೆಳೆಯಲು ಮುಂದಾಗುತ್ತಾರೆ.
ಬಂದ ಅಧಿಕಾರಿ ಯನ್ನು ಸ್ವಾಗತಿಸಲು ಮತ್ತು ಹೊರಹೋದ ಅಧಿಕಾರಿಗೆ ಗೌರವಿಸಲು ತಿಂಗಳಾದರೂ ನೌಕರ ಸಂಘಟನೆ ಗಳು ಪದೇ ಪದೇ ಮೇಲಧಿಕಾರಿಗಳ ಭೇಟಿ ಮಾಡಲು ದಾಂಗುಡಿ ಇಡುತ್ತಲೇ ಇರುತ್ತಾರೆ.ಫೋಟೋ ಕ್ಲಿಕ್ಕಿಸಿಕೊಳ್ಳಲು ಪೈಪೋಟಿ ನಡೆಸುತ್ತಾರೆ.

” ಬೀಳ್ಕೊಡುಗೆ ಸಮಾರಂಭ’
ನೌಕರರು ಒಂದೆಡೆ ನೆಲೆ ನಿಂತು ಕರ್ತವ್ಯ ನಿರ್ವಹಿಸಲು ಸಾಧ್ಯವಾಗುವುದಿಲ್ಲ.ನಿಯಮಗಳಿಗೆ ಅನುಸಾರವಾಗಿ ಇಲಾಖೆಯಿಂದ ಇಲಾಖೆಗೆ ವರ್ಗಗೊಂಡು ಅಥವಾ ಹುದ್ದೆ ಸ್ಥಳಾಂತರ ವಾಗಿಯೋ,ಬಡ್ತಿ ಹೊಂದಿಯೋ ಹೋಗುವಾಗ ಸಹೋದ್ಯೋಗಿ ಮಿತ್ರರು ಸರಳವಾಗಿ ಗೌರವಿಸಿ ವಿದಾಯ ಹೇಳುವುದು ಕೂಡ ಒಂದು ಸುಶಿಕ್ಷಿತ ಲಕ್ಷಣ.
ಆದರೆ
ಈಗೀಗ ಇಂತಹ ಕಾರ್ಯಕ್ರಮ ಗಳು ವ್ಯವಸ್ಥೆ ಯ ದಿಕ್ಕು ತಪ್ಪಿಸುವ ಮುನ್ಸೂಚಕವಾಗಿ ಗೋಚರಿಸುತ್ತಿವೆ.
ಸಾಧಕಗಳನ್ನು ನೋಡುವುದಾದರೆ

* ವರ್ಗಾವರ್ಗಿ ಗೊಂಡ ನೌಕರ ಅಧಿಕಾರಿಯನ್ನು ಸ್ವಾಗತಿಸುವುದರಿಂದ ಸಹೋದ್ಯೋಗಿ ಗಳ ಪರಿಚಯ ವಾಗಿ ತನ್ನ ಕಾರ್ಯ ನಿರ್ವಹಣೆ ಸರಾಗವಾಗಿ ಸಾಗಲು ಸಹಾಯಕವಾಗುತ್ತದೆ.

* ಹೊಸ ಹುದ್ದೆ ಅಥವಾ ಹೊಸ ಜಾಗಕ್ಕೆ ಬಂದಾಗ ನೌಕರನಲ್ಲಿರುವ ಗೊಂದಲ ಮಯ ಮನಸ್ಸನ್ನು ತಿಳಿಗೊಳಿಸಿ ಧಕ್ಷತೆಯಿಂದ ಸೇವೆ ಒದಗಿಸಲು ಸಾಧ್ಯವಾಗುತ್ತದೆ.

* ತನ್ನ ಕಾರ್ಯವ್ಯಾಪ್ತಿಯಲ್ಲಿ ” ಜನ ಸ್ನೇಹಿ’ ವಾತಾವರಣ ನಿರ್ಮಿಸಲು ಆ ಮೂಲಕ ಪರಿಣಾಮ ಕಾರಿ ಕೆಲಸ ಮಾಡಲು ನೆರವಾಗುತ್ತದೆ.

ಭಾದಕಗಳು.

*  ನೌಕರನೊಬ್ಬ  ಬಡ್ತಿ ಹೊಂದುವುದು,ವರ್ಗ ಗೊಳ್ಳುವುದು ,ಸ್ಥಾನ ಬದಲಾವಣೆ ಇವೆಲ್ಲವೂ ಸರ್ಕಾರದ ಸೇವೆಯಲ್ಲಿ ಇರುವಾಗ ನಿರಂತರ ಮತ್ತು ಸಾಮಾನ್ಯ ಪ್ರಕ್ರಿಯೆ.
ಇದರಿಂದಾಗಿ ಇತರೆ ಸಿಬ್ಬಂಧಿ ವರ್ಗವು  ಬಂದವರಿಗೆ ಸ್ವಾಗತ ಮತ್ತು ಹೋದವರಿಗೆ ಬೀಳ್ಕೊಡುಗೆ, ಅಭಿನಂದನೆ ಸಮಾರಂಭ ಎಂದು ಕೂತರೆ ಇಡೀ ವ್ಯವಸ್ಥೆ ಯ ಮೇಲೆ ಅದು ಪರಿಣಾಮ ಬೀರುತ್ತದೆ.

*  ಕಾರ್ಯಕ್ರಮ ದ ನೆಪದಲ್ಲಿ ಅಧಿಕ ವೆಚ್ಚ ಮಾಡುವುದು,ಉಡುಗೊರೆ ನೀಡುವುದು ಕೂಡ ಭ್ರಷ್ಟತೆಯ ಇನ್ನೊಂದು ಮುಖವಾಗಬಹುದು.

* ಕಾರ್ಯಕ್ರಮ ದ ನೆಪದಲ್ಲಿ ಹೊಗಳುವ ಭರದಲ್ಲಿ ಬಾಲಬಡುಕ  ಸಂಪ್ರದಾಯ ಕ್ಕೆ ನಾಂದಿಯಾಗಬಹುದು.

* ಕೆಲವೊಮ್ಮೆ ಬಡ್ತಿ ಅಥವಾ ಇನ್ನಿತರೆ ಕಾರಣ ಗಳಿಂದ ಅದೇ ಇಲಾಖೆಗೆ ವಾಪಸ್ಸಾಗುವ ಅಧಿಕಾರಿಗೆ ಈ ಅನುಯಾಯಿಗಳು ವ್ಯವಸ್ಥೆಯ ದುರುಪಯೋಗ ಕ್ಕೆ ನೆರವಾಗುವ ಸಾಧ್ಯತೆ ಇರುತ್ತದೆ.

*  ಜನ ಸ್ನೇಹಿ ವಾತಾವರಣ ಕ್ಕೆ ಬದಲಾಗಿ ನೌಕರ ಸ್ನೇಹಿ ವಾತಾವರಣ ರೂಪುಗೊಂಡು ಸಾರ್ವಜನಿಕ ಸೇವೆಯಲ್ಲಿ ವ್ಯತ್ಯಯ ಅಥವಾ ಸಾಮೂಹಿಕ ಭ್ರಷ್ಟತೆಗೆ ಕಾರಣವಾಗುವ ಸಾಧ್ಯತೆ ಹೆಚ್ಚಿರುತ್ತದೆ.

*   ಈ ರೀತಿಯ  ಸ್ವಾಗತ ಮತ್ತು ಬೀಳ್ಕೊಡುಗೆ ಕಾರ್ಯಕ್ರಮ ಗಳು ಅತಿಯಾದರೆ ಸರ್ಕಾರಿ ನೌಕರ ತನ್ನ ಸೇವೆ ಮತ್ತು ವೃತ್ತಿ ನಿರತೆಯ ಸಂಧರ್ಭದಲ್ಲಿ ಕಿರಿಕಿರಿಗೆ ಒಳಗಾಗುತ್ತಾನೆ.

ಕೆಳ ವರ್ಗದ ನೌಕರ ಸದಾ ಹಿರಿಯ ಅಧಿಕಾರಿಗಳ ಮನ ಒಲಿಸುವ ಲ್ಲಿಯೇ ತೊಡಗಬೇಕಾಗಬಹುದು.
 ಕೆಳ ಮತ್ತು ಮೇಲ್ಬರ್ಗದ ಅಧಿಕಾರಿಗಳ ಹತ್ತಿರದ ಸಂಬಂದ ಮತ್ತು ಸಂಪರ್ಕ ಕೂಡ ಭ್ರಷ್ಟ ವ್ಯವಸ್ಥೆ ಗೆ ಕಾರಣ ವಾಗಬಹುದು.

ನೌಕರರ ಹಿತದೃಷ್ಟಿಯಿಂದ ಕಟ್ಟಲ್ಪಟ್ಟ ಸಂಘಟನೆ ಗಳು ಇಲಾಖಾ ಮೇಲಧಿಕಾರಿಗಳ ಜೊತೆ ಇರುವಾಗ  ಒಂದಷ್ಟು ” ಆರೋಗ್ಯಕರ ದೂರ” ಕಾಯ್ದುಕೊಂಡು ಸರ್ಕಾರಿ ಕೆಲಸದಲ್ಲಿ ಪ್ರಾಮಾಣಿಕ ಪಾರದರ್ಶಕ ವ್ಯವಸ್ಥೆ ರೂಪುಗೊಳ್ಳಲು ನೆರವಾಗುವುದು ಪ್ರತೀ ನೌಕರನ ಜವಾಬ್ದಾರಿ ಎಂಬುದನ್ನು ಮನಗಾಣ ಬೇಕಿದೆ.


Leave a Reply

Back To Top