ಕಾವ್ಯ ಸಂಗಾತಿ
ನಾಗರಾಜ ಬಿ.ನಾಯ್ಕ
ಕಲ್ಲು ಬೆಂಚಿನ ಪ್ರೀತಿ
ಕಡಲ ತಟದಿ
ಉಳಿದ ಮರಳು
ಅಲ್ಲೊಂದು ಕಲ್ಲಿನ ಬೆಂಚು
ಆಪ್ತತೆಯೋ ನಂಟೋ
ತಿಳಿಯದು ಎಲ್ಲರದ್ದೂ
ಸಲಿಗೆ ಅದಕ್ಕೆ
ಹಲವರ ಕಥೆಗಳೂ
ಇಲ್ಲಿ ಜೀವಂತವಾಗಿವೆ
ಮಕ್ಕಳ ಮನೆಯ
ಸುದ್ದಿಗಳು ಇದರ ಸುತ್ತ
ಒಲುಮೆ ನಲುಮೆ
ಪ್ರೀತಿ ಪಾತ್ರರ ಕಳಕಳಿ
ಇದಕ್ಕಿದೆ ಎಂದರೂ ತಪ್ಪಿಲ್ಲ
ಕೇಳಲಿ ಎಂದು ಯಾರೂ
ಹೇಳುವುದಿಲ್ಲ ಆದರೆ
ಬೆಂಚಿಗೆ ಅನಿವಾರ್ಯ
ಸೋಲುಗಳು ನೋವುಗಳು
ಬಿಗುಮಾನದ ಮಾತುಗಳ
ಅರಗಿಸಿಕೊಂಡಿದೆ ಕಲ್ಲು
ಪ್ರತಿಯೊಬ್ಬರೂ ಬಂದಾಗಲೂ
ಚೆಂದವಿದೆ ಕಲ್ಲು ಎಂದು
ಕುಳಿತುಕೊಳ್ಳುವರು
ಹೋಗುವಾಗ ಒಮ್ಮೆ ನಕ್ಕು
ಹಗುರಾಗಿ ಹೋಗುವರು
ತರೇವಾರಿ ಮಾತುಗಳು
ಇಲ್ಲಿ ಬಂದು ಹೋಗುವುದು
ಹೆಚ್ಚು ನೆನಪಿಗೆ ಉಳಿದದ್ದು
ಪ್ರೀತಿ ಬದುಕು ಅಂತಃಕರಣ
ಕಥೆಯೋ ವ್ಯಥೆಯೋ
ಎನಿಸಿದರೂ ಎಲ್ಲರದ್ದೂ
ಒಂದೊಂದು ಜೀವನ
ಬದುಕಿನ ಖುಷಿಗೆ
ನಾಗರಾಜ ಬಿ.ನಾಯ್ಕ
Nice….. ಕಲ್ಲಿಗೂ ಭಾವದ ನಂಟು ಇದೆ ಎಂಬ ನಿಮ್ಮೊಳಗಿನ ಭಾವಕ್ಕೆ
Nice sir
ಕರಗುವುದಾದರೆ ಕಲ್ಲು ಕರುಗಿತೇನೋ ಮನುಷ್ಯನ ಭಾವನೆಗಳ ಭಾರಕ್ಕೆ
ಚೆಂದದ ಕವಿತೆ..
ಪರಿಶುದ್ಧ ಮನಸ್ಸಿನ ಭಾವಕ್ಕೆ ಕಲ್ಲು ಕೂಡ ಕರಗಿತೇನೋ ಎನ್ನುವ ಸಾರ್ಥಕ ಭಾವ. ಕವಿತೆ ಸುಂದರ….
Z
ಚಂದ..
ಮನೆ ಮನಸುಗಳ ಮಾತಿಗೆ, ಸುಮ್ಮನೆ ಕುಳಿತು, ನಕ್ಕು ಹಗುರಾಗಿ ಹೋಗಲು ಹೋಗಲು, ಕಲ್ಲಿನ ಬೆಂಚು ಒಂದು ಆಪ್ತ ಆಸನ. ಕಥೆಯಾಗಲಿ ವ್ಯಥೆಯಾಗಲಿ ಕೇಳಿಸಿ ಕೊಳ್ಳಲು ಒಂದು ಸಹಹೃದಯದ ಮನಸ್ಸು ಬೇಕು. ಭಾವನೆಗಳು ತೆರೆದು ಕೊಳ್ಳಲು, ಕೇಳಿಸಿಕೊಳ್ಳಲು, ಕಲ್ಲು ಬೆಂಚಿನ ಪಾತ್ರವೂ ಇಲ್ಲಿ ಮುಕ್ಯ. ನಮ್ಮ ಸ್ವಗತಕ್ಕೂ ಕಲ್ಲು ಬೆಂಚು ಸಹಕಾರಿಯಾಗಿದೆ..
ನಾನಾ ಬಾಡ
ಪ್ರಕಟಿಸಿದ ಸಂಗಾತಿ ಬಳಗಕ್ಕೆ ತುಂಬಾ ತುಂಬಾ ಧನ್ಯವಾದಗಳು……..
ಜೊತೆಗೆ ಓದಿ ಅಭಿಮಾನದಿಂದ ಪ್ರತಿಕ್ರಿಯೆ ನೀಡಿರುವ ಎಲ್ಲರಿಗೂ ಧನ್ಯವಾದಗಳು……..