ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಗಜಲ್

ಎದೆಯ ಸದ್ದುಗಳಿಗೆ ಅಕ್ಷರದ ನೆಪ ಬೇಕಾಗುತ್ತಿಲ್ಲ ಯಾಕೋ
ಸತ್ತಂತಿರುವ ನರ ನಾಡಿಗಳಿಗೆಅಪಧಮನಿಯ ರಕ್ತ ಬೇಕಾಗುತ್ತಿಲ್ಲ ಯಾಕೋ

ಮೌನವೆಂದರೆ ಮಾತುಮೂಕಾಗುವುದಲ್ಲ  ಎದೆಗೆ ದನಿ ಬೇಕಾಗುತ್ತಿಲ್ಲ ಯಾಕೋ
ನೆಲದಾಳದ ಬೇರಿಗೆ ನೀರಷ್ಟೇ ಮಣ್ಣಿನ ಸಾಂಗತ್ಯ ಬೇಕಾಗುತ್ತಿಲ್ಲ ಯಾಕೋ

ಕತ್ತಲೊಳಗೆ ಬೀಜ ಮೊಳಕೆ ಒಡೆಯುತ್ತಿದೆ ಬೆಳಕದಕೆ ಬೇಕಾಗುತ್ತಿಲ್ಲ ಯಾಕೋ
ಒಲವೆಂದರೆ ಮಾತೆಂದವರಾರು ಮೌನ ಹಾಡಿಗೆ ಪದ ಬೇಕಾಗುತ್ತಿಲ್ಲ ಯಾಕೋ

ಹೊಳೆಯ ಎರಡು ದಡಗಳು ಮೌನವೇ , ನೀರ ಸಂಗ ಬೇಕಾಗುತ್ತಿಲ್ಲ ಯಾಕೋ
ಬಾನು ಭೂಮಿ ದೂರ ತೀರ ಹಸಿರು ಫಸಲಿಗೆ ಒಲವ ನೇವರಿಕೆ ಬೇಕಾಗುತ್ತಿಲ್ಲ ಯಾಕೋ


ಮಾತುಗಳನಾಡಿ ಖಾಲಿಆಗಬಹುದು ಮೌನ ಬೇಕಾಗುತ್ತಿಲ್ಲ ಯಾಕೋ
ಫೈಜ್, ಒಲವ ಗರಗಸದಂತವನು ಘಾಸಿಯಾದರೂ ಮೌನ ಬೇಕಾಗುತ್ತಿಲ್ಲ ಯಾಕೋ!

——————————-

2 thoughts on “ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಗಜಲ್

Leave a Reply

Back To Top