ಭಾಷಾ ಸಂಗಾತಿ
‘ಬಂಜಾರ ತಾಯ್ನುಡಿ’
ನಾಳೆಯ ಲೋಕ ತಾಯ್ನುಡಿ ದಿನದ
ಅಂಗವಾಗಿ ವಿಶೇಷ ಲೇಖನ
ಲೋಹಿತೇಶ್ವರಿ ಎಸ್ ಪಿ.
ಬಂಜಾರ ಭಾಷಿಕರು ಜಗತ್ತಿನೆಲ್ಲೆಡೆ ನೆಲೆಸಿದ್ದಾರೆ. ಬಂಜಾರ ಭಾಷೆ ಸಾಹಿತ್ಯ ಸಂಸ್ಕೃತಿ ಎಲ್ಲವೂ ಬೆಳವಣಿಗೆ ಹಂತದತ್ತ ಸಾಗುತ್ತಿವೆ. ಆದರೂ ಬಂಜಾರ ಭಾಷೆಯ ಲಿಪಿ ವಿಷಯದಲ್ಲಿ ಅಷ್ಟು ಬೆಳವಣಿಗೆ ಕಾಣುತ್ತಿಲ್ಲ. ಕೆಲವು ವರ್ಷಗಳ ಹಿಂದೆ ಬಂಜಾರ ಭಾಷಿಕರೊಬ್ಬರು ಬಂಜಾರ ಲಿಪಿಯನ್ನು ಪರಿಚಯಿಸಿದ ಸುದ್ದಿ ಪತ್ರಿಕೆಗಳಲ್ಲಿ ಸುದ್ದಿಮಾಡಿ ಈಗ ಸದ್ದಿಲ್ಲದಂತಾಗಿದೆ. ಭಾಷೆಯೊಳಗಿನ ಸಂಪತ್ತನ್ನು ಹೊರಹಾಕಲು ಇಲ್ಲವೇ ಸಂಗೋಪನೆ ಮಾಡಿ ಮುಂದಿನ ಪೀಳಿಗೆಗೆ ಪರಿಚಯಿಸಲು ಲಿಪಿಯೂ ಒಂದು ಸಾಧನ. ಆದ ಕಾರಣ ಬಂಜಾರ ಭಾಷೆಗಾಗಿ ಪ್ರತ್ಯೇಕ ಲಿಪಿಯನ್ನು ಪರಿಚಯಿಸುವ ಇಲ್ಲವೆ ಇಂಡೋ ಆರ್ಯನ್ ಭಾಷೆಗಳ ಲಿಪಿಯನ್ನು ಹೊಂದಿಸುವ ಪ್ರಯತ್ನ ಇಲ್ಲವೇ ಅಗತ್ಯ ಕೆಲಸವನ್ನು ಮಾಡಬೇಕಿದೆ.
ಲಿಪಿಯ ವಿಚಾರಕ್ಕೆ ಬಂದಾಗ ಭಿನ್ನ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತವೆ. ಕೆಲವರು ಹೊಸದಾಗಿ ಬಂಜಾರ ಭಾಷೆಯ ಸ್ವರೂಪಕ್ಕೆ ಅನುಗುಣವಾಗಿ ಲಿಪಿಯನ್ನು ಸೃಷ್ಟಿಸಬೇಕು ಎಂದರೆ, ಇನ್ನು ಕೆಲವರು ಇಂಡೋ ಆರ್ಯನ್ ಭಾಷೆಯಾದ ಕಾರಣ ದೇವನಾಗರಿ ಲಿಪಿಯನ್ನೆ ಬಳಸಿದರೆ ಸೂಕ್ತ ಎನ್ನುವವರಿದ್ದಾರೆ. ಮತ್ತೊಂದು ವರ್ಗ ಭಾಷಿಕರ ಹಿತಕ್ಕಾಗಿ ಅವರು ನೆಲೆಸಿರುವ ರಾಜ್ಯಗಳಲ್ಲಿ ಇರುವ ತಾಯ್ನುಡಿ ಇಲ್ಲವೇ ಪ್ರಧಾನ ಭಾಷೆ ಹೊಂದಿರುವ ಲಿಪಿಯನ್ನೇ ಬಳಸಿದರೆ ಉಪಯುಕ್ತವಾಗುತ್ತದೆ. ಇಲ್ಲವಾದಲ್ಲಿ ಭಾಷಿಕರು ಸಮಸ್ಯೆ ಇಲ್ಲವೇ ಗೊಂದಲಕ್ಕೆ ಒಳಗಾಗಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.
ಕೇಳುತ್ತಾ ಹೋದರೆ ಇಂತಹ ಅನೇಕ ಅಭಿಪ್ರಾಯಗಳು ನಮ್ಮೆದುರಿಗೆ ಇರುತ್ತವೆ. ಆದಕಾರಣ ಬಂಜಾರ ಭಾಷೆ ಸಮಾಜ ಸಂಸ್ಕೃತಿ ಸಾಹಿತ್ಯದ ಸಂಗೋಪನೆಗಾಗಿ ಯೋಜನೆಯೊಂದನ್ನು ರೂಪಿಸಿ ಕೆಲಸ ಮಾಡಬೇಕಾದ ಅಗತ್ಯವಿದೆ…..
ಎಲ್ಲರಿಗೂ ಲೋಕ ತಾಯ್ನುಡಿ ದಿನದ ಶುಭಾಷಯಗಳು..
ಲೋಹಿತೇಶ್ವರಿ ಎಸ್ ಪಿ.