ಕಾವ್ಯ ಸಂಗಾತಿ
ಪರಿಮಳ ಐವರ್ನಾಡು ಸುಳ್ಯ
ಇದುವೇ ಜೀವನ
ಕಳೆದುಕೊಂಡದೆಷ್ಟೋ
ಅಮೂಲ್ಯವಾದದ್ದು
ಅದ್ಭುತವಾದದ್ದು
ಪ್ರೀತಿಪಾತ್ರವಾದದ್ದು
ಸರ್ವಸ್ವವೆಂದುಕೊಂಡದ್ದು
ಜೀವಕ್ಕಿಂತಲೂ ಮಿಗಿಲಾದದ್ದು
ಬಾಳ ಜೀವವೆನಿಸಿದ್ದು
ಎಲ್ಲವನ್ನೂ ಕಳೆದುಕೊಂಡ ಜೀವಕೆ
ಜೊತೆಯಾಗಿ ಉಳಿದದ್ದು ಆ ಜೀವದ
ನೆರಳು ಮಾತ್ರ
ನೆರಳು
ನಾನತ್ತರೆ ನನ್ನೊಂದಿಗೆ ಅಳುತ್ತೆ
ನಕ್ಕರೆ ನನ್ನೊಂದಿಗೆ ನಗುತ್ತೆ
ಸತ್ತರೆ ನನ್ನೊಂದಿಗೆ ಸಾಯುತ್ತೆ
ಜಗವೇ ತೊರೆಯಲಿ ನನ್ನ
ನೆರಳೊಂದೇ ಬರುವುದು
ನನ್ನ ಜೊತೆಯಲಿ
ಅದೆಷ್ಟು ಪ್ರೀತಿ ನನ್ನಲಿ
ಬದುಕುತಿಹೆ ನನ್ನ ನೆರಳಲಿ
ನೆರಳಿನ ಮಡಿಲಲಿ
ಪರಿಮಳ ಐವರ್ನಾಡು ಸುಳ್ಯ