ವಿನುತಾ ಹಂಚಿನಮನಿ ಕವಿತೆ-ಪ್ರೇಮ ನಿವೇದನೆ

ಮನಸು ಕೂಡಿಸಲು ಯಾರು ಕೇಳಿದರು
ಕೊನೆಯ ಪಕ್ಷ ಕೈಯಾದರು ಕೂಡಿಸುತಿರು
ಮನದ ಆಸೆ ಏನೆಂದು ಕೇಳಿರೆ ಹೇಳಲಾರೆ
ಆದರೆ ನಿನಗೆ ಹೇಳದೆಯೂ ಇರಲಾರೆ

ನೀನು ಸಾಗರ ನೀನೇ ನನ್ನ ದೋಣಿ
ನೀನಿಲ್ಲದೆ ಹರಿದು ಸಾಗಲು ಆಗದು
ನನ್ನ ಮನೆಯ ಹೊಸಿಲು ಗೋಡೆ ನೀನು
ನೀನಿಲ್ಲದೆ ಅಸಲು ಏನೂ ದಾಟಲು ಆಗದು

ಜಗದ ಅವಮಾನದ ವಿಷ ಕುಡಿಯಬಹುದು
ಆದರೆ ನಿನ್ನ ನಿರ್ಲಕ್ಷ್ಯ ಸಹಿಸಿರಲು ಆಗದು
ನನಗಾಗಿ ಚಂದ್ರನ ತಂದು ಕೊಡುವರಾರು
ನಿನ್ನ ಮುಖ ಚಂದಿರ ನನಗಾಗಿ ಬೆಳಗುತಿರು

ನೋವು ರತ್ನ ನೋವು ಮುತ್ತು ನೋಡ
ನೋವನು ಕಣ್ಣಿಂದ ಹರಿಸಿ ಕಳೆಯಬೇಡ
ಸ್ವತಃ ಇಷ್ಟೊಂದು ನೀ ಕಾಪಾಡಿಕೊಳ್ಳಬೇಡ
ಮಳೆ ಸುರಿದರೆ ತೋಯಿಸಿಕೊಳ್ಳದಿರಬೇಡ

ಸುಂದರ ತುಟಿಗಳ ಕೆಲಸ ಮಾಡಿಸುತಿರು
ಮಾತು ಮಾತಿನಲಿ ತುಸುನಗೆ ಸೂಸುತಿರು
ಖಿನ್ನತೆಯ ಹೊಡೆದೊಡಿಸುವುದು ಬಿಸಿಲು
ಮಾಳಿಗೆಗೆ ಬರುತಿರು ಬಟ್ಟೆಯ ಒಣಗಿಸಲು

ನನ್ನ ಬಾಳಕಥನದ ಚೆಂದ ಪುಸ್ತಕ ನೀನು
ಒಂದು ಪುಟ ಓದಲೂ ಆಗದು ಮತ್ತೆ
ಓದದೆ‌ ಮಡಚಿಡಲೂ ಆಗದು ನನ್ನಿಂದ
ಇನ್ನು ಪ್ರೇಮ ನಿವೇದನೆ ಹೇಗೆ ಮಾಡಲಿ

ಬಹಳ ಹಾರಿದೆವು ಎತ್ತರದ ಆಕಾಶದಡಿ
ಈಗ ನೆಲದ ಮೇಲೆ ಆಶ್ರಯ ಹುಡುಕೋಣ
ಜೀವ ಯಾನದಲಿ ಸುಳ್ಳು ಸಂಬಂಧ ಬೇಡ
ಹೃದಯ ಸಂಬಂಧದ ಸತ್ಯ ಹುಡುಕೋಣ

ಈಗ ನಗುವ ನೆಪಗಳನು ಹುಡುಕೋಣ
ದುಃಖಗಳಿಲ್ಲದ ಸ್ಥಳಗಳನು ಅರಿಸೋಣ
ಬಹಳ ಹೊತ್ತು ಕತ್ತಲಲಿ ಕಳೆದುಹೋದೆವು
ಕತ್ತಲಿನ ರಾತ್ರಿಯ ಬೆಳಗಿಗಾಗಿ ಕಾಯೋಣ


Leave a Reply

Back To Top