ಡಾ ಅನ್ನಪೂರ್ಣ ಹಿರೇಮಠರವರ ಗಜಲ್

ನಿನ್ನ ಪ್ರೀತಿಯೆನಗೆ ಮುತ್ತು ಮಾಣಿಕದಂತೆ ಜಿಯಾ
ಹೊನ್ನ ಮುತ್ತುಗಳೆನಗೆ ನಶೆಯ ಸುರೆಯಂತೆ ಜಿಯಾ

ಅರಳಿದ ತಾವರೆಯ ಕೋಮಲತೆ ಇದೆ ಈ ಭಾವಕೆ
ಕಣ್ಣ ಆಲಿಂಗನವೆನಗೆ ಸ್ವರ್ಗದಿ ವಿಹರಿಸಿದಂತೆ ಜಿಯಾ

ಪರಿಮಳಿಸೊ ಹೂರಾಸಿಯ ಗಂಧವಿದೆ ಪ್ರೇಮಕೆ
ತೋಳ ಸೆರೆಯೆನಗೆ ಗಗನದಿ ಹಾರಾಡಿದಂತೆ ಜಿಯಾ

ಭೃಂಗ ತಂದ ಜೇನಸುಧೆಯ ಸವಿಯಂತಿರೊ ಒಲವು
ಸರಸದಾಟವೆನಗೆ ಸಿಹಿ ಹೋಳಿಗೆ ಮೆಲ್ಲುವಂತೆ ಜಿಯಾ

ಮಾಮರದೆ ಮಾಗಿದಣ್ಣಿನ ರುಚಿಯಂತಿರುವ ಮನಕೆ
ಚಿನ್ನ ಸನಿಹ ಸಲುಗೆಯೆನಗೆ ಸಂತಸಕೊಟದಂತೆ ಜಿಯಾ

ನಳನಳಿಸೊ ಸೃಷ್ಟಿಸೊಬಗ ಹಸಿರ ವನದಂತಿರುವ ಬಯಕೆ
ಇನಿಯನಾ ಎದೆ ಬಣವೆನಗೆ ನಲಿವ ವದನದಂತೆ ಜಿಯಾ

ಅನುಳ ಒಡಲಾಳದ ಕಡಲಲಿ ತುಡಿಯುತ್ತಿರುವ ಹಂಬಲ
ಹೊನ್ನ ಪುಟ್ಟ ಹೃದಯವನಗೆ ದೇವಮಂದಿರದಂತೆ ಜಿಯಾ


Leave a Reply

Back To Top