ಡಾ.ಸುರೇಖಾ ರಾಠೊಡ್ ಕವಿತೆ ‘ಅಕ್ಷರದವ್ವ ಸಾವಿತ್ರಿ……’

ಭೂತಕ್ಕೆ ಬಗ್ಗದೆ
ವರ್ತಮಾನಕ್ಕೆ ಅಂಜದೆ
ಭವಿಷ್ಯಕ್ಕೆ ದುಡಿದ
ಅಕ್ಷರದವ್ವ ಸಾವಿತ್ರಿ…….

ಭೂತಕಾಲದ ಭೂತವ ಬಿಡಿಸಿ
ವರ್ತಮಾನದ ಸಂಕೋಲೆಗಳನ್ನು ಬಿಡಿಸಿ
ಭವಿಷ್ಯದ ದಾರಿತೋರಿದ,
ಅಕ್ಷರದವ್ವ ಸಾವಿತ್ರಿ…….

ಸ್ನೇಹಿತಿ ಫಾತಿಮಾಳ ಸಹಾಯ
ಪತಿ ಜ್ಯೋತಿಬಾರ ಪ್ರೋತ್ಸಹ,
ಅಂಜದೆ, ಅಳುಕದೆ, ಬಗ್ಗದೆ..
ದುಡಿದಳು ಹೆಣ್ಣಗಳ
ಭವಿಷ್ಯ ಕಟ್ಟಲು,
ಎಲ್ಲವ ಸಹಿಸಿ ಮುನ್ನುಗಿದಳು
ಅಕ್ಷರದವ್ವ ಸಾವಿತ್ರಿ…….

ಇವಳಾರು ಇವಳಾರು ಎನ್ನದೇ
ಎಲ್ಲರೂ ನಮ್ಮವರೂ ನಮ್ಮವರೆಂದು..
ಶಿಕ್ಷಣ ಕೊಡಿಸಲು ಬಡಿದಾಡಿದಳು,
ಅವಮಾನಕ್ಕೊಳಗಾದಳು,
ಅಕ್ಷರದವ್ವ ಸಾವಿತ್ರಿ…….

ಧರ್ಮ, ಜಾತಿ, ಕುಲ ಎನ್ನದೆ
ಸರ್ವ ಮಹಿಳಾ ಕುಲದ..
ಸರ್ವೋತೋಮುಖ ಅಭಿವೃದ್ಧಿಗೆ ದುಡಿದಳು
ಅಕ್ಷರದವ್ವ ಸಾವಿತ್ರಿ…….

ಇಂದು,
ದೊಡ್ಡ ದೊಡ್ಡ ಹುದ್ದೆ ಅಲಂಕರಿ
ಕಿರ್ತಿ ಪತಾಕೆ ಹಾರಿಸುತ್ತಿರುವರು
ಅಕ್ಷರ ಕಲಿತ ಹೆಣ್ಣಗಳು,
ನಿತ್ಯ ನೆನೆಯಬೇಕು
ತ್ಯಾಗಮವಿ
ಅಕ್ಷರದವ್ವ ಸಾವಿತ್ರಿಯನ್ನು…
—————————————


Leave a Reply

Back To Top