ಗುಲ್ಜಾರ್ ಅವರ ಕವಿತೆಯ ಕನ್ನಡಾನುವಾದ ಅನಸೂಯ ಜಹಗೀರದಾರ

ಪ್ರತಿ ಮಾತಿಗೂ
ಜವಾಬು ಇರಲು ಸಾಧ್ಯವಿಲ್ಲಬಿಡು
ಪ್ರತಿ ಪ್ರೇಮವೂ
ಖರಾಬು ಆಗಲು ಸಾಧ್ಯವಿಲ್ಲನಿಡು

ಪಾನಪ್ರಿಯರೆಲ್ಲ ನಶೆಯಲಿ ಓಲಾಡಬಹುದು
ಪ್ರತಿ ನಶೆಯೂ
ಶರಾಬು ಆಗಲು ಸಾಧ್ಯವಿಲ್ಲಬಿಡು

ಯಾರೊಂದಿಗೋ
ಕಾರಣವಿಲ್ಲದೆ ಬೆನ್ನು
ತಿರುಗಿಸಿ ನಡೆಯುತ್ತೇವೆ
ಅದೇ ಸಂಬಂಧ ಬೆಸುಗೆ
ಅಧಿಕ ತೀವ್ರತೆ
ಇರದೆ ಇರಲು ಸಾಧ್ಯವಿಲ್ಲಬಿಡು

ಯಾರೋ ದೇವರಲಿ
ಬೇಡಿದರಂತೆ ತಮ್ಮ ಸಾವನ್ನು..
ಸಾವನ್ನು ವರವಾಗಿ
ನೀಡಿದ ದೇವನ ಉತ್ತರವಿದು “
ನಿನ್ನ ಜೀವನ ವರವಾಗಿ
ಬೇಡಿದವರಿಗೇನು ಕೊಡಲಿ? ‘
ದೇವನಿಗೂ ಗೊಂದಲ
ಇಲ್ಲದೇ ಇರಲು ಸಾಧ್ಯವಿಲ್ಲಬಿಡು

ಪ್ರತಿ ಮನುಜನ ಹೃದಯ
ಖರಾಬಿಲ್ಲ ಬಿಡು
ಪ್ರತಿ ಮನುಜ
ಕೆಟ್ಟವನೂ ಅಲ್ಲ ಬಿಡು
ಒಮ್ಮೊಮ್ಮೆ ಎಣ್ಣೆ ಮುಗಿದೂ
ದೀಪ ನಂದಿರಬಹುದು…
ಪ್ರತಿಬಾರಿಯೂ ಗಾಳಿಯ
ತಪ್ಪೆನ್ನಲು ಸಾಧ್ಯವಿಲ್ಲಬಿಡು.


5 thoughts on “ಗುಲ್ಜಾರ್ ಅವರ ಕವಿತೆಯ ಕನ್ನಡಾನುವಾದ ಅನಸೂಯ ಜಹಗೀರದಾರ

Leave a Reply

Back To Top