ಶೋಭಾ ನಾಗಭೂಷಣ ಕವಿತೆ-ಮೋಹವೇತಕೆ?

ಮೋಹವೇತಕೆ ಮರುಳೆ
ಬರಿಯ ತೊಗಲಿನ ಮೇಲೆ
ಅದರ ವರ್ಣದ ವ್ಯಾಮೋಹವೇಕೆ?

ಕಳೆದುಕೊಳ್ಳುವುದು ಗುಣವ
ಕಾಲ ಸರಿದಂತೆ ಒಂದು ದಿನ
ಅಶಾಶ್ವತವಾದದರ ಬಗ್ಗೆ ಹೆಮ್ಮೆಯೇಕೆ?

ಬಿಳಿ ಕಪ್ಪು ಎರಡೂ ಜೀವನದ
ಮಗಲುಗಳು ಸುಖ ದುಃಖದಂತೆ
ಅದರ ಬಗೆಗೆ ನೀನು ಬೀಗುವುದೇಕೆ?

ಚರ್ಮದ ಹೊದಿಕೆ ಇರುವ
ಈ ಶರೀರವು ಒಮ್ಮೆ ಸೇರುವುದು ಮಣ್ಣಲ್ಲಿ
ಮಣ್ಣಾಗಿ ಗರ್ವವದೇಕೆ?

ಕೃಷ್ಣ ಕಪ್ಪಾದರೂ ಅವವನನು
ಮೋಹಿಸಿದರು ಗೋಪಿಕೆಯರು
ಆ ಸತ್ಯ ನಿನಗೆ ತಿಳಿಯಲಿಲ್ಲವೇಕೆ?

ಬಣ್ಣವಲ್ಲ ಮುಖ್ಯವದು ಗುಣವು
ಗುಣವಿಲ್ಲದ ಶರೀರವನು
ಹೊತ್ತು ಬದುಕು ನಡೆಸಲೇಕೆ?


2 thoughts on “ಶೋಭಾ ನಾಗಭೂಷಣ ಕವಿತೆ-ಮೋಹವೇತಕೆ?

Leave a Reply

Back To Top