ವಿಭಾ ಪುರೋಹಿತ ಕವಿತೆ-ನಿನ್ನ ಸಂಗ

ನಿನ್ನ ಮಾತಿನ ಸೊಗಸು
ಮನವನೇ ಕಲಕಿತು

ನಿನ್ನ ಕಣ್ಣ ಭಾಷೆ
ಹೃದಯವನೇ ಅರಳಿಸಿತು

ನಿನ್ನ ಮೌನದ ಕಾವು
ಪದಗಳನೇ ಹುಟ್ಟಿಸಿತು

ನೀ ಮೀಟಿದ ಹೊಸತಂತು
ಪ್ರೇಮಗಡಲಾಗಿ ಹರಿಯಿತು

ನಿನ್ನ ಮೋಹದ ಪರಿ
ಬಾಳನೇ ಬದಲಿಸಿತು

ನೀ ಅಪ್ಪಿದ ಗಳಿಗೆ
ಕಾಲವೇ ಸ್ತಬ್ದವಾಯಿತು

ನಿನ್ನ ಸ್ಪರ್ಶದ ಪುಳಕದಲ್ಲಿ
ಬದುಕೇ ಚಿಗುರೊಡೆತು.

ನಿನ್ನ ಪ್ರೀತಿಯ ರೀತಿ
ರಸಭಾಷ್ಯವನೇ ಬರೆಯಿತು

ನಿತ್ಯ ವಸಂತ ನೀನು
ನಿನ್ನ ಸಂಗ ವಾಸಂತಿಕೆ ನಾನು


6 thoughts on “ವಿಭಾ ಪುರೋಹಿತ ಕವಿತೆ-ನಿನ್ನ ಸಂಗ

Leave a Reply

Back To Top