ಮಾಧುರಿ ದೇಶಪಾಂಡೆ
ಹುಟ್ಟಿ ಬೆಳೆದದ್ದು ಬೆಂಗಳೂರು
ವಿದ್ಯಾಭ್ಯಾಸ ಕನ್ನಡ ಮತ್ತು ಹಿಂದಿ ಎಂ ಎ
ಉದ್ಯೋಗ : freelance ಅನುವಾದಕಿ
ಹವ್ಯಾಸ : ಪುಸ್ತಕ ಬರೆಯುವುದು ಓದುವದು, ಕನ್ನಡ ಮತ್ತು ಹಿಂದಿ ಭಾಷೆಗಳ ಸಾಹಿತ್ಯ ಕೃತಿಗಳನ್ನು ಅನುವಾದ ಮಾಡಿ ಎರಡೂ ಭಾಷೆಗಳ ಸೊಗಡನ್ನು ಪರಸ್ಪರ ತಿಳಿಯುವಂತೆ ಮಾಡುವುದು..
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹಾಗೂ ಎನ್ ಸಿ ಡಿಸಿ ಗೆ ಅಧಿಕೃತ ಅನುವಾದಕಿ
ಪ್ರಕಟಿತ ಕೃತಿಗಳು ಮತ್ತು ಅನುವಾದಗಳು :-

ಮಾತೃತ್ವ ಮತ್ತು ಇತರ ಕಥೆಗಳು (ಕಥಾ ಸಂಕಲನ) ಪರಿವರ್ತನೆ ಮತ್ತು ಇತರ ಕಥೆಗಳು (ಕಥಾ ಸಂಕಲನ) ಕಾದಂಬರಿ ಮತ್ತು ಇತರ ಕಥೆಗಳು (ಕಥಾ ಸಂಕಲನ) ಕಥಾರಂಜಿನಿ (ಕಥಾ ಸಂಕಲನ)
ಕವನ ಝರಿ (ಕವನ ಸಂಕಲನ)
ಪ್ರೇಮ (ಅನುವಾದಿತ ಕಾದಂಬರಿ) – ಮೂಲ ಮುನ್ಷಿ ಪ್ರೇಮಚಂದ್) (2012 ನೇ ಸಾಲಿನ ಅರಳು ಪ್ರಶಸ್ತಿ ಪುರಸ್ಕೃತ ಕೃತಿ)
ಚಂದ್ರ ಗುಪ್ತ (ಅನುವಾದಿತ ನಾಟಕ – ಮೂಲ ಜಯಶಂಕರ ಪ್ರಸಾದ್)
ಬಾಂಧವ್ಯ (ಕಾದಂಬರಿ)
ಮಕ್ಕಳಿಗಾಗಿ ಸುವಿಚಾರ  (ಸಣ್ಣ ಸಣ್ಣ ಸುವಿಚಾರಗಳ ಸಂಗ್ರಹ )
ಕೊಡಲಾಗಿರುವ ಪ್ರಶಸ್ತಿ, ಬಹುಮಾನಗಳ ವಿವರ  :-

 2012 ನೇ ಸಾಲಿನ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಅರಳು ಪ್ರಶಸ್ತ

2020 ಸಾಲಿನ ಬುದ್ಧ ಬಸವ ಗಾಂಧಿ ಪ್ರತಿಷ್ಟಾನದ ದತ್ತಿ ಪ್ರಶಸ್ತಿ
2023ನೇ ಸಾಲಿನ ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿ ನಿಯಮಿತ ಸಂಸ್ಥೆಯಿಂದ ಮಹಿಳಾ ಸಾಧಕಿ ಪ್ರಶಸ್ತಿ

ಇಂದು ಸಂಜೆ ಪತ್ರಿಕೆಯಲ್ಲಿ ದಿನ ನಿತ್ಯ “ಸುವಿಚಾರ ಅಂಕಣ ” ದಿ ಡೈಲಿ ನ್ಯೂಸ್ ಪತ್ರಿಕೆಯಲ್ಲಿ “ಹಿತ್ತಲ ಮದ್ದು” ಅಂಕಣ, “ಶ್ರೀ ಶೈಲ ಪ್ರಭ” ಮತ್ತು ಸಪ್ತಗಿರಿ ಮಾಸಿಕ ಪತ್ರಿಕೆಗಳಲ್ಲಿ ಧಾರ್ಮಿಕ ಲೇಖನಗಳೂ, ಸಂಯುಕ್ತ ಕರ್ನಾಟಕ, ವಿಶ್ವ ವಾಣಿ, ಸಂದರ್ಶನ ಪತ್ರಿಕೆ ಗಳಲ್ಲಿ ಆಗಾಗ ಲೇಖನಗಳು, ವಿಕ್ರಮ ವಾರ ಪತ್ರಿಕೆಯಲ್ಲಿ ಲೇಖನ.

ಆಯ್ದ ಕವಿ ಗೋಷ್ಠಿ ಗಳಲ್ಲಿ ಕವನ ವಾಚನ ಮಾಡುವುದು

ಫೇಸ್ಬುಕ್  ನ ಕಸ್ತೂರಿ ಚಂದನವನ ಮತ್ತು ಸೌರಭ ಸಾಹಿತ್ಯ ಗುಂಪಿನಲ್ಲಿ ಹಾಗೂ ಉತ್ತರಾದಿ ಮಠ ಗುಂಪಿನಲ್ಲಿ ಅಡ್ಮಿನ್

ಗೋಕುಲದ ಗೋಪಿಗೆ ಅನಿಸಿದ್ದು,
ಕೃಷ್ಣನ ಪ್ರಿಯತಮೆ ಯಾದರೂ
ರಾಧೆಯಾಗುವುದು ಸರಳವಲ್ಲ

ಎಷ್ಟೇ ಪ್ರೀತಿ ತೋರಿದರೂ ಮಾಧವ,
ಎಲ್ಲ ಗೋಪಿಯರೊಡನೆ ಅವನ ಪ್ರೀತಿ ಹಂಚಿಕೊಳ್ಳುತ
ರಾಧೆಯಗುವುದು ಸರಳವಲ್ಲ

ಅವನಿಗಾಗಿ ಅವನಿಂದಲೇ ದೂರವಿದ್ದು,
ಅವನ ನೆನಪಲ್ಲೇ ಇದ್ದು, ಅವನಿಗಾಗಿ ಕಾಯುತ
ರಾಧೆಯಾಗುವುದು ಸರಳವಲ್ಲ

ಲೋಕದಲಿ ಪ್ರೀತಿಯ ಪ್ರತೀಕವಾಗುತ,
ಪ್ರೀತಿಯ ನೆನಪುಗಳೊಂದಿಗೆ ಸಂಸಾರ ಮಾಡುತ
ರಾಧೆಯಾಗುವುದು ಸರಳವಲ್ಲ

ಲೌಕಿಕ ಪ್ರೀತಿಯ ಕಾಣುವ ಜನರೆದುರು,
ಆಧ್ಯಾತ್ಮಿಕದ ಅರಿವ ಮೂಡಿಸುತ
ರಾಧೆಯಾಗುವುದು ಸರಳವಲ್ಲ

ತತ್ವ ಜ್ಞಾನವ ಭಗವಂತನ ಆರಾಧನೆಯ,
ಭೋದಿಸಲು ಬರುವ ಉದ್ಧವನಿಗೆ ಪ್ರೇಮ ಪಾಠ ಮಾಡುತ
ರಾಧೆಯಾಗುವುದು ಸರಳವಲ್ಲ

********

ನೆನೆಯುತಿದೆ ನಿನ್ನ ಈ ನನ್ನ ಮನ
ನಿನ್ನೊಡನೆ ನನ್ನ ನೋಟ ಸಂಧಿಸದೇ ಕಳಿದಿದೆ ಎಷ್ಟೋ ದಿನ
ನಿನ್ನ ನುಡಿ ಕೇಳದ ಹೃದಯ ಅಳುತಿದೆ ಅನುದಿನ
ಬಾ ನನ್ನ ನಲ್ಲ ಎಂದಿಗೆ ಆಗುವುದು ನಮ್ಮಯ ಮಿಲನ
ನಿನ್ನ ಜೊತೆಗೆ ಇರುವೆ ಇಡೀ ಜೀವನ

ಚಂದ್ರನಿಗಾಗಿ ಕಾಯುವ ಚಕೋರಿಯಂತೆ
ಸೂರ್ಯನ ಕಿರಣಕ್ಕಾಗಿ ಕಾಯುವ ಕಮಲದಂತೆ
ದುಂಬಿಯ ಕಾಯುವ ಸುಮದಂತೆ
ಹಣತೆಯನ್ನು ಬಿಟ್ಟಿರದ ದಿಪದಂತೆ
ಕಾದಿರುವೆ ನಿನಗಾಗಿ ನನ್ನ ಪ್ರಿಯತಮ ನನಗೆ ನಿನ್ನದೇ ಚಿಂತೆ

*******

ಕೃಷ್ಣನಿಗೆ ರಾಧೆಯ ಸೆಳೆತ
ಮನದಲ್ಲಿ ಪ್ರೇಮ ಮೊರೆತ
ಪ್ರಥಮ ನೋಟದಲೇ ಆನತ

ಉಪವನದ ಏಕಾಂತದಲೇ ನಿವೇದನೆ
ಪ್ರೀತಿಯ ಹೃದಯಗಳೆರಡರ ಸ್ಪಂದನೆ
ಅಲೌಕಿಕ ಚೇತನಗಳೆರಡರ ಒಲವಿನರಮನೆ

ಪ್ರೇಮದ ಸವಿಯುಣಿಸಿ ಹೃದಯ ಸಾಮ್ರಾಜ್ಯದಿ
ವಿಜೃಂಭಿಸಿ ನಡೆದ ಮಧುರೆಯಡೆಗೇ ನಿರ್ಧಯದಿ
ಪುರುಷೋತ್ತಮ ಕೈ ಬಿಡಲಾರನೆಂಬ ವಿಶ್ವಾಸದಿ

ತಿರುಗಿದಳು ವೃಂದಾವನದ ಸಂದಿಗೊಂದಿಯಲಿ
ಪ್ರೀತಿ ತೋರಿದ ಕರ್ತವ್ಯದ ಕರೆಗೆ ಓಡಿದ ವೇಗದಲಿ
ಲೋಕದಿ ಅವನನೇ ಎಲ್ಲೆಡೆ ಹುಡುಕುತಲಿ

ಪುರುಷೋತ್ತಮನೂ ಪುರುಷನಲ್ಲವೇ
ರಾಧೆಯ ಪ್ರೀತಿ ಕಾಣಲಿಲ್ಲವೇ
ಭಾವನೆಗಳ ಮೋಹ ಸ್ತ್ರೀಯರಿಗೆ ಅಲ್ಲವೇ

*******

ಪ್ರೀತಿ ಸಿಕ್ಕಿತೆ? ಎಲ್ಲಿದೆ ಎಂದು ಹುಡುಕುತಿತ್ತು ಜೀವ
ಎಲ್ಲೆಲ್ಲಿ ಹುಡುಕಲಿ ಎಲ್ಲಿದೆ ಎಂದು ಹುದುಕುತಿತ್ತು ಜೀವ
ಪ್ರಕೃತಿಯ ಮಡಿಲಲ್ಲಿ ಇದೆಯೇ?
ಅಂಬರದಲ್ಲಿ ಇದೆಯೇ?
ಪಾತಾಳದಲ್ಲಿ ಇದೆಯೇ?
ಕಾಡಿನಲ್ಲಿ ಇದೆಯೇ?
ಊರಿನಲ್ಲಿ ಇದೆಯೇ?
ಎಲ್ಲೂ ಸಿಗಲಿಲ್ಲ ಪ್ರೀತಿ, ಹುಡುಕುತ ಹೊರಟಿತು ಜೀವ.

ತಾಯಿ ಮಗುವಿನ ಸಂಬಂಧದಲ್ಲಿ
ಗಂಡ ಹೆಂಡಿರ ನಡುವಿನಲ್ಲಿ
ಅಣ್ಣ ತಮ್ಮಂದಿರ ನಂಟಿನಲ್ಲಿ
ಅಕ್ಕ ತಂಗಿಯರ ಒಡನಾಟದಲ್ಲಿ
ಪ್ರೀಯತಮೆ ಪ್ರಿಯನ ಸಂಗದಲ್ಲಿ
ಎಲ್ಲೂ ನಿಜವಾದ ಪ್ರೀತಿ ಸಿಗಲೇ ಇಲ್ಲ ಎನ್ನುತಿತ್ತು ಜೀವ.

ಪ್ರಕೃತಿಯ ಕಣ ಕಣದಲ್ಲೂ ನಾನಿದ್ದೇನೆ ಪ್ರೀತಿಯು ಇದೆ ಎನ್ನುತಿತ್ತು ದೈವ
ಅಂಬರದಲ್ಲಿ ಇದೆ
ಪಾತಾಳದಲ್ಲಿ ಇದೆ
ಕಾಡಿನಲ್ಲಿ ಇದೆ
ನಾಡಿ ನಲ್ಲಿ ಇದೆ
ಎಲ್ಲೆಡೆಯೂ ಪ್ರೀತಿ ತುಂಬಿದೆ ಎನ್ನುತ್ತಿತ್ತು ದೈವ.

ತಾಯಿಯ ಕಣ್ಣಿನಲ್ಲಿ ಇದೆ ಮಗುವಿನ ನಗುವಿನಲ್ಲಿ ಇದೆ
ಗಂಡನ ಅಕ್ಕರೆಯಲ್ಲಿ ಇದೆ ಹೆಂಡತಿಯ ಒಲವಿನಲ್ಲಿ ಇದೆ
ಅಣ್ಣನ ಗದರುವಿಕೆಯಲ್ಲಿದೆ ತಮ್ಮನ ಜಗಳದಲ್ಲಿ ಇದೆ
ಅಕ್ಕನ ಬುದ್ದಿ ಮಾತಿನಲ್ಲಿ ಇದೆ ತಂಗಿಯ ಹಠದಲ್ಲಿ ಇದೆ
ಪ್ರಿಯತಮೆಯ ಹುಸಿ ಮುನಿಸಿನಲಿ ಪ್ರಿಯನ ತುಂಟಾಟದಲ್ಲಿ ಇದೆ
ಎಲ್ಲೆಲ್ಲೂ ಪ್ರೀತಿಯೇ ತುಂಬಿದೆ ಎನ್ನುತಿತ್ತು ದೈವ.

ಜೀವ ದೈವದ ನಡುವೆ ಮಾತಿಗಿಳಿದಾಗ ಹೀಗೆ ಹೇಳಿತು ದೈವ
ಎಲೈ ಜೀವವೇ ನೀನು ಬರೆ ಪಡೆಯುವ ಪ್ರೀತಿಯನ್ನು ಹುಡುಕುತ್ತ ಇದ್ದಿ ,ಅದಕ್ಕೆ ಅದು ನಿನಗೆ ಸಿಗುತ್ತಿಲ್ಲ.
ಜೀವನದ ಒಂದು ಸತ್ಯ ತಿಳಿಯೋ ಜೀವ, ಪ್ರೀತಿ ಬರೆ ಪಡೆಯುವ ವಸ್ತುವಲ್ಲ?
ನೀನು ಕೊಡುವ ಪ್ರೀತಿ ಎಲ್ಲೂ ಸಿಗುತ್ತದೆ
ಪ್ರೀತಿಯ ಸಾರ್ಥಕ, ಪಡೆಯುವ ಪ್ರೀತಿಗಿಂತ ಕೊಡುವ ಪ್ರೀತಿಯಲ್ಲೇ ಇದೆ ಎಂದಿತು ದೈವ
******

11 thoughts on “

  1. ನಿಮ್ಮ ಲೇಖನಗಳು ತುಂಬಾ ಚೆನ್ನಾಗಿರುತ್ತೆ .ಮತ್ತು ಒಳ್ಳೆಯ ಅರ್ಥಪೂರ್ಣವಾಗಿರುತ್ತವೆ ಹೀಗೆ ಒಂದು ಒಳ್ಳೆಯ ಸಾಹಿತಿಯಾಗಿ ಮುಂದೆ ಒಳ್ಳೆ ಹೆಸರು ಗಳಿಸಿ

    1. ಶ್ರೀ ಮಾಧುರಿಯವರ ಸಾಹಿತ್ಯ ಕ್ಷೇತ್ರದಲ್ಲಿ ಮೇರು ಪ್ರತಿಭೆಯಾಗಿ ಮೆರೆಯಲಿ ದೇವರು ಆಶೀರ್ವಾದ ಮಾಡಿ kaapaduttalirali

  2. ಹೃತ್ಪೂರ್ವಕ ಅಭಿನಂದನೆಗಳು ನಿಮ್ಮ ಲೇಖನಗಳನ್ನು ಸಾಹಿತ್ಯ ಗ್ರೂಪ್ ನಲ್ಲಿ ಸಮಯ ಸಿಕ್ಕಾಗ ಒಂದೊಂದು ಓದಿರುವೆ, ಅರ್ಥ ಪೂರ್ಣವಾಗಿರುತ್ತವೆ ಜೊತೆಗೆ ಸುವಿಚಾರ ತುಂಬಾ ಇಷ್ಟವಾಗುತ್ತದೆ. ಇನ್ನಷ್ಟು ನಿಮಗೆ ಸಾಹಿತ್ಯದಲ್ಲಿ ಸೇವೆ ಮಾಡಲೆಂದು ಪ್ರೀತಿಯಿಂದ ಹಾರೈಸುವೆ ಮೇಡಂ . ಸವಿತಾ ಮುದ್ಗಲ್ ಗಂಗಾವತಿ

    1. ನಿಮ್ಮ ಲೇಖನಗಳು ತುಂಬಾ ಚೆನ್ನಾಗಿರುತ್ತೆ ಅನುವಾದಗಳನ್ನು ಕೂಡ ತುಂಬಾ ಮಾಡಿದ್ದೀರಾ ಆದರೆ ಅದನ್ನ ನಾನು ಓದಿಲ್ಲ. ಓದಿದ್ದು ಎಲ್ಲವೂ ಇಷ್ಟವಾಗಿದೆ. ನಿಮ್ಮ ಪಯಣ ಹೀಗೆ ಮುಂದುವರೆಯಲಿ ಎಂದು ಆಶಿಸುವ,
      ಅನ್ನಪೂರ್ಣ ಹೇಮಚಂದ್ರ.

  3. ನಿರಂತರವಾಗಿ ಬಿಡುವಿಲ್ಲದೇ ಬರೆವ ಬಿಡುವಿಲ್ಲದ ಬರಹಗಾರ್ತಿ ಮಾಧುರಿ ದೇಶಪಾಂಡೆ ಅವರಿಗೆ ಅಭಿನಂದನೆಗಳು

Leave a Reply

Back To Top