ಕಾವ್ಯ ಸಂಗಾತಿ
ದೂರವೆಂಬ ಸನಿಹ
ಲೋಹಿತೇಶ್ವರಿ ಎಸ್ ಪಿ.
ಇಂದಿಗೆ ವರುಶ ಕಳೆಯಿತು
ಆದರೂ ಕ್ಶಣಕಳೆದ ಭಾವ
ದೂರವೇ ….ಆದರೂ
ಉಸಿರಲೇ ಬೇರೆತ ಭಾವ
ದೂರದಿಂದಲೇ ಆರಂಭವಾಗಿ
ದೂರದಲ್ಲಿಯೇ ಉಳಿಯುವ ಭಾವ
ದೂರವೆಂದರೆ ದೂರವೇ ಅಲ್ಲ
ಉಸಿರಿಗೂ ಮಿಗಿಲಾಗಿ ಸನಿಹ
ದೂರವೆಂಬ ಮಾತು ಪ್ರತಿಗಳಿಗೆ ಧ್ವನಿಸಿದರೂ
ಉಸಿರಾಗಿಯೆ…..ಇರುವ ಭಾವ
ದೂರವೆಂಬ ಮಾತು ನೀ ನಾ ಎಂದರೂ
ನಾ ನೀನಾಗಿ ನೀ ನಾಗಾಗಿಯೆ ಇರುವ ಭಾವ
ದೂರವೆಂದು ದೂರ ಸರಿಯುವ ಮನಕೆ
ಉಸಿರಲಿ ಬೇರೆತಿರುವ ಭಾವದ ಅರಿವಿಲ್ಲ
ಸಾವಿನಲೂ ಜೊತೆಗಿರುವ ಜೀವವ ಕುರಿತು
ದೂರ ಮಾಡುವುದೆಂಬ ಭಾವವೇಕೊ……
ಉಸಿರಿಗೂ ಮಿಗಿಲಾದ ಸನಿಹ ಸೇರಿದರೂ
ದೂರವಾಗುವೆನೆಂಬ ತವಕವೇತಕೊ…
ಭಾವದ ಅರಿವಿಲ್ಲವೊ…..
ಭಾವವೇ ಇಲ್ಲವೊ ಅರಿಯೆ
ಆದರೆ ಬಂಧವೆಂಬುದು ಬದುಕಾಗಿ
ದೂರವೆನ್ನುವುದು ಸನಿಹವಾಗಿದೆ..
ಅದು ಉಸಿರಿಗೂ ಮಿಗಿಲಾಗಿ
ಉಸಿರನೇ ಆವರಿಸಿದೆ….
ಲೋಹಿತೇಶ್ವರಿ ಎಸ್ ಪಿ.