ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಶಿವನಿಗೊಂದು ಮೊರೆ
ನಾ ಮಗುವಾಗಿ
ನಿನ್ನ ಮಡಿಲಲಿ ಮಲಗಲೇನು ಶಿವ ?
ಮರೆತು ಬದುಕ ಜಂಜಾಟಗಳ
ಕೆಲ ಕ್ಷಣಗಳ ಕಳೆಯಲೇನು ಶಿವ ?
ಸುಖದ ಹುಡುಕಾಟದಲೇ
ಉರುಳುತಿಹುದು ಪ್ರತಿ ದಿನವು
ನೆಮ್ಮದಿಯ ಕಣ್ತುಂಬಿಕೊಳ್ಳಲು
ಕಾತರಿಸುತಿಹುದು ಪ್ರತಿ ಇರುಳು
ಶಾಂತವಿಲ್ಲದ ಮನಸಿಗೆ
ನಿದಿರೆಯಿಲ್ಲದ ನಯನದೊಂದಿಗೆ ಸ್ನೇಹ
ಚೂರಾದ ಎದೆಯ ತುಕಡಿಗಳಿಗೆ
ಹಸಿಯಾದ ಹತಾಶೆಯೊಂದಿಗೆ ಸ್ನೇಹ
ನನ್ನದೆಂಬುದು ಬರೀ ಮೋಹವಿಲ್ಲಿ
ನನ್ನವರೆಂಬುದು ಬರೀ ಮಿಥ್ಯವಿಲ್ಲಿ
ಎಲ್ಲವನೂ ಮರೆತು
ನಿನ್ನ ಬಳಿಗೆ ಬರಲೇನು ಶಿವ ?
ಚಿಂತೆಗಳನು ಚಿತೆಗೇರಿಸಿ
ನಿನ್ನ ಮಡಿಲಲಿ ಮಲಗಲೇನು ಶಿವ ?
———————————–
ವಾಣಿ ಯಡಹಳ್ಳಿಮಠ
Super
Thank you so much
ನಿಮಗೊಂದು ನಮನಗಳು
ತುಂಬಾ ಧನ್ಯವಾದಗಳು