ಅನುವಾದ ಸಂಗಾತಿ
“ಬಾನ ಹಕ್ಕಿ ಕೆಳಗಿಳಿದು”
ಇಂಗ್ಲೀಷ್ ಮೂಲ:ಎಮಿಲಿಡಿಕಿನ್ಸನ್
ಕನ್ನಡಕ್ಕೆ ಬಾಗೇಪಲ್ಲಿ
ಬಾನ ಹಕ್ಕಿ ನೆಲಕಿಳಿದು ಹೆಜ್ಜೆ ಹಾಕಹತ್ತಿತು
ಗಮನಿಸಲಿಲ್ಲ ಅದು ನಾ ಅದನು ಕಂಡದ್ದು
ಒಂದು ಎರೆಹುಳವ ಅರ್ಧಕೆ ಕಚ್ಚಿ ತುಂಡರಿಸಿ ಹಸಿಹಸಿಯಾಗಿ ನುಂಗಿತು ನಿರಾತಂಕದಿ ಕೊಂದು
ನಂತರ ಸುತ್ತ ಹುಲ್ಲಿನ ಮೇಲಿನ ಹಿಮದ ನೀರ ಸುಲಭದಿ ಹೀರಿ
ಪಕ್ಕ ಗೋಡೆಯ ಕಡೆ ಕುಪ್ಪಳಿಸುತ ಒಂದು ಜೀರುಂಡೆ ಹಾದು ಹೋಗಲು ಹಾದಿಮಾಡಿತು ಸ್ವ ಪ್ರಾಣ ರಕ್ಷಣೆಯಲಿ
ಬಹಳ ಸೂಕ್ಷ್ಮದಿ ಸುತ್ತಲಿನ ವಿದ್ಯಮಾನ ಅವಲೋಕಿಸಿ
ಹೆದರಿದಂತಾಗಿ ಅದರ ಕಣ್ಣು ಮಣಿಗಳಂತೆ ಕಂಡಿತು
ಅದೊಮ್ಮೆ ತನ್ನ ನಯವಾದ ಪುಕ್ಕದ ಕತ್ತನು ಕೊಂಕಿಸಿತು ಶತೃಭಯದಿ
ಆಪತ್ತಿನಲಿರುವಂತೆ ಕಂಡ ಅದಕೆ ನಾ ಎಚ್ಚರದಿ ರೊಟ್ಟಿಯ ಚೂರನಿತ್ತೆ
ರೆಕ್ಕೆಗಳ ಅನಾವರಣಗೊಳಿಸಿ ಗೂಡಿನತ್ತ ಸಾವಕಾಶದಿ ತೆರಳಿತು ನೆಮ್ಮದಿಯಲಿ
ನನಗೊ ಹುಟ್ಟುಹಾಕುವಾಗ ಸೀಳಿದ ಸಾಗರದ ನೀರು ಮರಳಿ ಸೇರುತ ಮೂಡುವ ಹೊಲಿಗೆ ಸಾಲು
ನದಿದಡಗಳನು ಬಿಸಿಲಝಳದಿ ಹೋಗುವ ಚಿಟ್ಟೆಯ ನಿಶ್ಯಬ್ದ ಜಿಗಿತ ಮಸ್ಥಿಷ್ಕದಿ ಮೂಡಿ
ಹಕ್ಕಿಯದು ಮಾತ್ರ ಪ್ರಾಣವೇ ಎರೆಹುಳುವಿನದೇನು ಎನಿಸಿತು.
ಇಂಗ್ಲೀಷ್ ಮೂಲ:ಎಮಿಲಿಡಿಕಿನ್ಸನ್
ಕನ್ನಡಕ್ಕೆ ಬಾಗೇಪಲ್ಲಿ