ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ತಿಳಿಗೊಳದೆ ಬಿಳಿ ಹಂಸಗಳು ಬಳುಕೊ ನೋಟ ಅದೆಷ್ಟು ಚೆನ್ನ
ಬಿಳಿಮೋಡದೆ ಮೇಘ ಮಂದಾರಗಳ ನಿಲ್ಲದ ಓಟ ಅದೆಷ್ಟು ಚೆನ್ನ

ಚುಕ್ಕಿ ಚಂದ್ರಮರಿಂದ ರಾತ್ರಿಯ ಬಾನ ತೋಟದೆ ವೈಯ್ಯಾರ
ಹಸಿರು ಗುಡ್ಡದೆ ಗಿಡಮರಗಳ ಥಳುಕಿನ ಮಾಟ ಅದೆಷ್ಟು ಚೆನ್ನ

ಹಕ್ಕಿ ಪಿಕ್ಕಿಗಳಿಂದ ಬೆಳಗು ಮುಂಜಾವದಿ ಗಾನ ಮಾಧುರ್ಯ
ವಾದ್ಯ ಮೇಳದೆ ರಾಗ ತಾಳಗಳ ಮಿಳಿತದ ಕೂಟ ಅದೆಷ್ಟು ಚೆನ್ನ

ಚಿಟ್ಟೆ ದುಂಬಿಗಳಿಂದ ಅರಳಿದ ಹೂಗಳ ಒಳಗಿನ ಒಡನಾಟ ರಮ್ಯಾ
ಘಂಟಾಘೋಷದೆ ದೇವಮಂದಿರದಿ ಭಕ್ತಿಭಾವದ ಉಟ ಅದೆಷ್ಟು ಚೆನ್ನ

ಝರಿ ತೊರೆಗಳಿಂದ ಬಳುಕೊ ನೀನಾದ ಇಂಪು ಮಧುರ ಕಂಪು
ಜೇನು ಗೂಡದೇ ಸಿಹಿ ಹನಿಗಳ ಮಿಳಿತದ ಹಟ ಅದೆಷ್ಟು ಚೆನ್ನ

ಗುಡಿ ಗೋಪುರಗಳಿಂದ ತೀರ್ಥಕ್ಷೇತ್ರಗಳಾದ ತಾಣಗಳ ವೈಭವ
ಭಕ್ತಿ ಭಾವದ ಪರವಶತೆಯಲಿ ತುಳುಕುವ ತಟ ಅದೆಷ್ಟು ಚೆನ್ನ

ವನಸಿರಿಯ ಹಸಿರು ಮರಗಳ ತಂಬೆಲರಲೇ ಅನುಳ ನಿವಾಸ
ಹೂ ಕುಸುಮಗಳ ಪರಿಮಳ ದುಂಬಿಗಳ ಆಟ ಅದೆಷ್ಟು ಚೆನ್ನ


One thought on “ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

Leave a Reply

Back To Top