ಕಾವ್ಯ ಸಂಗಾತಿ
“ಬಾ ಕಟ್ಟೋಣ, ಬಾಗಿಲಿರದ ಮನೆಯ”
ನಾಗಪ್ಪ ಸಿ ಬಡ್ಡಿ ಕವಿತೆ
ಮತ್ತೊಮ್ಮೆ ಕಟ್ಟಬೇಕಿದೆ
ಜಾತಿ ಮತಗಳ ಸೊಂಕಿಲ್ಲದ
ಮುಕ್ತವಾಗಿ ಗಾಳಿ ಬೆಳಕು
ಹರಿದು ಬರುವಂತೆ
ವಾಸ್ತು ನೋಡಿ
ಮಾನವೀಯತೆಯ
ಮನೆ ಕಟ್ಟಬೇಕಿದೆ.
ಬುದ್ದ – ಬಸವ – ಗಾಂಧಿ
ತತ್ವಗಳ ಬುನಾದಿ ತುಂಬಿ
ಹಿಂದೂ-ಮುಸ್ಲಿಂ-ಕ್ರೈಸ್ತ…
ಹೀಗೆ ಸರ್ವಧರ್ಮಗಳ
ಇಟ್ಟಿಗೆ ಜೋಡಿಸಿ
ಮನೆ ಕಟ್ಟಬೇಕಿದೆ!
ಗೊಡ್ಡು ಆಡಂಬರಕ್ಕೆ
ಸೆಡ್ಡು ಹೊಡೆದು
ನಗು,ಪ್ರೀತಿ,ವಿಶ್ವಾಸದ
ಮನೆ ಕಟ್ಟಬೇಕಿದೆ !
ಸಿಡಿಮದ್ದುಗಳ
ಸದ್ದು ಕೇಳಿಸದಂತೆ
ಭಯೋತ್ಪಾದನೆ ಬೀಜ ಬಿಡಿಸಿ
ಬಂದೂಕು ಗುಂಡು ಸುಟ್ಟುಹಾಕಿ
ಆ ಬೂದಿಯನ್ನೆಲ್ಲ
ದೂರದ ನದಿಯಲ್ಲಿ
ತರ್ಪಣ ಬಿಟ್ಟು !
ಮತ್ತೆ ಶಾಂತಿಯಿಂದ
ಹಿರಿಯರು ಕಿರಿಯರು
ಕೂಡಿ ಬಾಳುವ
ಅನುಭವ ಮಂಟಪದಂತೆ
ಕಟ್ಟಬೇಕಿದೆ
ಬಾಗಿಲು
ಇಲ್ಲದ ಮನೆಯ !
ನಾಗಪ್ಪ ಸಿ ಬಡ್ಡಿ
Spr bro
Super meaning full thoughts sir edu
Super sir
Nice