ರಾಜನು ತನ್ನ ಅಣ್ಣನ ಮದುವೆ ಫಿಕ್ಸ್  ಆಗುವವರೆಗೆ ಕಾಯೋಣ ಎಂದಾಗ, ದೇವಕಿಯು ಅಲ್ಲಿಯವರೆಗೆ ನಮ್ಮ ಮನೆಯಲ್ಲಿ ಏನು ಹೇಳಲಿ? ಮೊದಲೇ ನಿನ್ನ ಪರಿಚಯ ಆಗಿದ್ದರೆ ನನಗೆ ಒಳ್ಳೆಯದಿತ್ತು. ಆದರೆ ಗಂಡು ನೋಡುವ ಶಾಸ್ತ್ರ ಶುರು ಆದ ಮೇಲೆ ನಿನ್ನ ಪರಿಚಯ ಆಗಿದೆ.ಇನ್ನೂ ಹೇಗೆ ಬೇಡ ಅಂತ ಕಾರಣ ಕೊಡಲಿ? ಎನ್ನುತ್ತಾಳೆ. ಏಜ್ಯುಕೇಶನ್  ಮುಂದುವರೆಸುವ ಕಾರಣ ಕೊಡಿ ಎಂದು ಹೇಳುತ್ತಾನೆ ರಾಜ.ಆಗ ದೇವಕಿಗೆ ರಾಜ ಕೊಟ್ಟ ಉಪಾಯ ಸರಿ ಅನಿಸುತ್ತೆ. ಸರಿ ಹಾಗೆ ಮಾಡುವೆ ಎಂದು ಹೇಳಿ ನಗುತ್ತ ಮಾತು ಮುಗಿಸಿ,ಇಬ್ಬರು ನಗುತ್ತ ಮನೆ ಕಡೆಗೆ ಹೊರಡುತ್ತಾರೆ.
ಸ್ವಲ್ಪ ದಿನಗಳು ಕಳೆದ ದೇವಕಿಯು ತನ್ನ ಸ್ನೇಹಿತೆಗೆ ತಮ್ಮಿಬ್ಬರ ಪ್ರೀತಿಯ ವಿಚಾರ ಹಂಚಿಕೊಳ್ಳುತ್ತಾಳೆ. ದೇವಕಿಯ ಸ್ನೇಹಿತೆ ಕೂಡ ಅವರಿಬ್ಬರ ನಡುವಿನ ಪ್ರೀತಿಗೆ ಸೇತುವೆಯಾಗಿ ನಿಲ್ಲುತ್ತಾಳೆ. ದೇವಕಿಯ ಮನೆಯಲ್ಲಿ ಮದುವೆ ಮುಂದಕ್ಕೆ ಹಾಕಲು ರಾಜನು ಕೊಟ್ಟ ಉಪಾಯದ ಹಾಗೆ ತನ್ನ ತಂದೆಗೆ ನೌಕರಿಯ ಜೊತೆಗೆ ಓದು ಮುಂದುವರೆಸುವ ವಿಚಾರ ಹೇಳುತ್ತಾಳೆ. ಅದಕ್ಕೆ ಅವರ ತಂದೆ ಸರಿ ಆಯಿತು ಎಂದು ಹೇಳುತ್ತಾರೆ.ಆಗ ದೇವಕಿ ಸಂತೋಷದಿಂದ ತನ್ನ ಸ್ನೇಹಿತೆಯ ಜೊತೆಗೆ ಕಾಲೇಜಿಗೆ ಹೋಗಿ ಮುಂದಿನ ಡಿಗ್ರಿಯ ಅಡ್ಮಿಷನ್ ಮಾಡಿ ಬರುತ್ತಾಳೆ. ನೌಕರಿಯ ಜೊತೆ ಜೊತೆಗೆ ಪಿಜಿ ಎಕ್ಸಾಮ್ ಕೂಡ ಉತ್ತಮ ಅಂಕ ಪಡೆಯುವ ಮೂಲಕ ಎರಡು ವರ್ಷದಲ್ಲಿ ದೇವಕಿ ಮುಗಿಸಿಕೊಳ್ಳುತ್ತಾಳೆ.

ಅಷ್ಟರೊಳಗೆ ರಾಜನ ಅಣ್ಣನ ಮದುವೆ ಕೂಡ ಫಿಕ್ಸ್ ಆಗುತ್ತದೆ. ಅಣ್ಣ ತಮ್ಮಇಬ್ಬರ ಮದುವೆಯನ್ನು ಒಟ್ಟಿಗೆ ಮಾಡಬೇಕು ಎಂದು ರಾಜನ ಮನೆಯಲ್ಲಿ ಚರ್ಚೆಯಾಗುತ್ತದೆ. ಆಗ ರಾಜನಿಗೆ ಒಂದು ಕ್ಷಣ ಏನೂ ತೋಚದೇ ಸುಮ್ಮನೆ ಸೈಲೆಂಟ್ ಆಗುತ್ತಾನೆ. ರಾಜನು ಮನದಲ್ಲಿ ಅಂದುಕೊಳ್ಳುತ್ತಾನೆ, ಪಾಪ  ದೇವಕಿಗೆ 2 ವರ್ಷ ವೈಟ್ ಮಾಡಿ ಆಮೇಲೆ ನಮ್ಮ ಮನೆಯಲ್ಲಿ ಹೇಳುವೆ ಅಂದಿದ್ದೆ,ಅವಳು ನನಗೋಸ್ಕರ ವೈಟ್ ಮಾಡಿದ್ದಾಳೆ. ಇನ್ನು ಮನೆಯಲ್ಲಿ ನಮ್ಮ ಪ್ರೀತಿ ವಿಷಯ ಹೇಳಲೇಬೇಕು. ಇನ್ನು ತಡ ಮಾಡಿ ಪ್ರಯೋಜನ ಇಲ್ಲ ಅಂತ ಮನಸ್ಸಿನಲ್ಲೇ ವಿಚಾರ ಮಾಡುತ್ತಾನೆ.

ಮರುದಿನ ರಾಜನು ಅವರ ತಂದೆ ತಾಯಿ ಹಾಗೂ ಮನೆಯ ಎಲ್ಲ ಸದಸ್ಯರನ್ನು ಕರೆಯುತ್ತಾನೆ. ಯಾಕ ರಾಜ ಮೀಟಿಂಗ್ ವಿಷಯ ಏನು ಅಂತ ಕೇಳಿದಾಗ. ರಾಜನು ಏನಿಲ್ಲ ನೀವು ನಿನ್ನೆ ಅಣ್ಣನ ಮದುವೆ ಫಿಕ್ಸ್ ಆಯಿತು.ಇನ್ನೂ ರಾಜನಿಗೆ ಹೆಣ್ಣು ನೋಡೋಣ. ಇಬ್ಬರದೂ ಒಟ್ಟಿಗೆ ಮದುವೆ ಮಾಡೋಣ ಅಂತ ಹೇಳಿದ್ರಿ.ಅದಕ್ಕೆ ಈ ಮೀಟಿಂಗ್ ಅಂತ ರಾಜ ಹೇಳುತ್ತಾನೆ. ಸರಿಯಪ್ಪ ಏನು ಅಂತ ಹೇಳು ಅಂದಾಗ ಅವನ ಮತ್ತು ದೇವಕಿಯ ಪ್ರೀತಿಯ ವಿಷಯ ಹೇಳುತ್ತಾನೆ. ಓಹೋ  ಇದೋ ವಿಷಯ ಎಂದು ಎಲ್ಲರೂ ನಗುತ್ತಾರೆ.ಆಗ ರಾಜನ ತಂದೆ ಕೋಪದಿಂದ  ಏನೋ ರಾಜ ಏಷ್ಟೋ ಧೈರ್ಯ ನಿನಗೆ? ನೀನು ನಮ್ಮ ಮನೆಯಲ್ಲಿ ಚಿಕ್ಕವನು ಅಂತ ಗೊತ್ತಿದ್ದೂ, ನೀನು ಎಲ್ಲರನ್ನೂ,ವ್ಯವಹಾರವನ್ನುಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುತ್ತಿಯ ಅಂತ ಎಲ್ಲ ಜವಾಬ್ದಾರಿ ನಿನಗೆ ವಹಿಸಿದರೆ, ನೀನು ಅದೆಲ್ಲ ಬಿಟ್ಟು ಪ್ರೀತಿ,ಪ್ರೇಮ ಅಂತ ಹುಡುಗಿ ಹಿಂದೆ ಸುತ್ತುತ್ತಾ ಇದೀಯಾ ಅಂತ ಗದರಿಸುತ್ತಾರೆ. ಆಗ ರಾಜನು ಏನು ಮಾತಾಡದೆ ಸಪ್ಪಗೆ ಮುಖ ಮಾಡಿ ಸುಮ್ಮನೆ ಇರುತ್ತಾನೆ…


Leave a Reply

Back To Top