ಕಾವ್ಯ ಸಂಗಾತಿ
ವಸಂತ್. ಕೆ. ಹೆಚ್
ಮತ ಭ್ರಾಂತಿ
ಬುದ್ದಿಯ ಬಡತನದಿಂದ
ಊನವಾಗಿದೆ ಈ ಸಮಾಜ ‘,
ಮತ ಮೌಢ್ಯದಿಂದ,
ಧರ್ಮದ ಅಫೀಮಿನಲ್ಲಿ
ದಹಿಸುತ್ತಿದೆ ನರನ
ಸುಂದರ ಬದುಕು ||
ನೆತ್ತರು ಹಾರಿ ಹೋಗಿದೆ’,
ಮನುಜ ಮತದ,
ತತ್ವವ ಹೇಳುತ
ದಾಸ್ಯದ ಹೊರೆಯಲಿ,
ದರಿದ್ರವ ತುಂಬಿ
ಮತ ಭ್ರಾಂತಿಯ ಅರುವುವರಿಲ್ಲಿ||
ನಿಷ್ಪಾಪಿ ಜೀವಗಳು
ಬಲಿಯಾಗುತಿವೆ, ಮತವೆಂಬ
ನೇಣು ಕುಣಿಕೆಯಲಿ’,
ಇದನ್ನರಿಯಿರೋ ಕುಲಕೋಟಿಗಳೇ
ಅಂದತ್ವವ ಮರೆತು
ಬಂಧುತ್ವವ ಉಣಬಡಿಸಿ
ನಾಳೆಯ ನೆಮ್ಮದಿಯ ಸಮಾಜಕೆ||
ದೈವವೆಂದೂ..ಬೀದಿಗಿಳಿಯಲಿಲ್ಲ
ಗುಡಿ, ಚರ್ಚು, ಮಸಜೀದಿ ಬೇಕೆಂದು
ಪಾಮರರಂತೆ ಮೌಢ್ಯತೆಯ
ಮಾರಿಯನು ಬಹಿರಂಗದಲ್ಲಿಟ್ಟು
ಅಂತರಂಗದ ಕದವ ಮುಚ್ಚಿದರಲ್ಲೊ,
ಶತಶತಮಾನಗಳುರುಳಿದರೂ
ನೀ.. ಕಳಚಲಿಲ್ಲ ಯಾಕೆ?
ಮತ ಭ್ರಾಂತಿಯ ಮತೀಯನು… ||
ವಸಂತ್. ಕೆ. ಹೆಚ್.
ಪ್ರಸ್ತುತ ಪರಿಸ್ಥಿತಿಗೆ ಕನ್ನಡಿ ಹಿಡಿದಂತಿದೆ ಕವನ.
ವಂದನೆಗಳು.
ಧನ್ಯವಾದಗಳು ಸರ್ ನಿಮಗೆ
ನಿಮ್ಮ ಕವನದಲ್ಲಿ ಬಹಳಷ್ಟು.. ಸತ್ಯಂಶವಿದೆ. ವಸಂತ್. ಅಭಿನಂದನೆಗಳು… ಎಸ್. ಎಲ್. ಕ್ರಾಸ್ತಾ.
ಧನ್ಯವಾದಗಳು ಸರ್ ನಿಮಗೆ