ಕಾವ್ಯ ಸಂಗಾತಿ
ಮನ್ಸೂರ್ ಮೂಲ್ಕಿ
ನಗುತಲಿರು ತಮ್ಮ
ಪ್ರೇಮದ ಪಾಶಕೆ ಬಿದ್ದ ಮೇಲೆ
ನೀನೇ ಎಲ್ಲಾ ಅಂದುಕೊಂಡು
ಮನೆಯ ಮರೆತುಕೊಂಡರೆ
ಹುಟ್ಟು ಸಾರ್ಥಕವಲ್ಲ
ತಮ್ಮ ನೋವೆ ತುಂಬಿರುವುದೆಲ್ಲ.
ಹೆತ್ತ ಕರುಳಿನ ಪ್ರೀತಿಯ ಕಾಣದೆ
ರೆಕ್ಕೆಯ ಕಟ್ಟಿ ಬಾನಲ್ಲಿ ಹಾರಿದರು
ಅಮ್ಮನ ಮನದ ನೋವು ನಿಲ್ಲದು
ಮನಸ್ಸು ಕೊರಗಿ ಕೊರಗಿ ಜೀವ ತೆತ್ತುವುದು
ಅಮ್ಮ ಬಚ್ಚಿಟ್ಟ ಕನಸು ಕರಗಿ ಹೋಗುವುದು
ಒಳಿತಿನ ನಡೆಯಲ್ಲಿ ನಡೆಯಬೇಕು
ಮನೆಯಮಾತು ಮಲ್ಲಿಗೆಯಂತಿರಬೇಕು
ಪ್ರಕೃತಿಯು ಪರಿಸರವು ನಗುತಲಿರಬೇಕು
ನ್ಯಾಯದ ಬದುಕಿಗೆ ನೀನು ಪಾಠವಾಗಬೇಕು
ತಮ್ಮ ಅಮ್ಮನ ನೆನಪು ಸದಾ ಇರಬೇಕು
ಎಲ್ಲೆಲ್ಲೂ ನಡೆದಾಡಿದರು ನೀನು
ಅಮ್ಮನಿಗೆ ಗೌರವ ಸಿಗಬೇಕು
ಅಮ್ಮನ ಹೃದಯದಲ್ಲಿ ಪುಟ್ಟ ಮಗು ನೀನಾಗಿ
ಬದುಕನ್ನು ಸವಿಯಬೇಕು
ತಮ್ಮ ಹೀಗೆ ಜಗದಲ್ಲಿ ಬದುಕಬೇಕು
ಮನ್ಸೂರ್ ಮೂಲ್ಕಿ