“ಬೇಡೇನು ಮತ್ತಿನ್ನೇನನೂ” ಲಲಿತಾ ಮ ಕ್ಯಾಸನ್ನವರ ಕವಿತೆ

ನೆನೆದು ನಿನ್ನ ನಾನು…
ಮರೆಯದಾಗಿದೆ ಮನವು ನಿನ್ನನು
ಮಸುಕಾಗಿಸಿದೆ ಕಣ್ಣಂಚನು
ಬಿರಿಯದೆ ಬಿರಿದಿಹ ಸುಮದಲಿ
ಸುಗಂಧ ತಾಸೂಸದಂತಿದೆ ಮನಸಿನ್ನು

ಬಾಚಿತಬ್ಬಿದ ಆಘಳಿಗೆ ಸಿಗದೆ ನನಗಿನ್ನು
ಮುಂಗುರುಳು ತಿದ್ದಿದ ಕೈಗೆ ಇತ್ತ ಸವಿಮುತ್ತಿನ್ನು
ನೆನೆ ನೆನೆದು ಬಿಕ್ಕುತಿದೆ ಈ ಮನವಿನ್ನೂ
ಮನವು ನಿನ್ನನೇ ನೆನೆಯುತಿದೆ ಇನ್ನುನೂ

ದೂರ ದೂರದ ಪಯಣ‌ ಬೆರಳಿನ ಕಚಗುಳಿ
ಒಂದಿಷ್ಟು ಹುಡುಗಾಟ ಬಿಸಿಯಪ್ಪುಗೆಯಲಿ
ಮತ್ತೆ ಮತ್ತೇರಿಸುವ ನಿನ್ನ ಹುಚ್ಚಾಟದಲಿ
ಮತ್ತೆ ಮತ್ತೆ ನೆನಪು ಮರೆಯಲಾರೆ‌ನಿನ್ನನು

ಒಂದರೆಘಳಿಗೆ ನಾನು ನನ್ನವಳಾಗಲಿಲ್ಲ
ಎಲ್ಲ ಚಣದಲೂ ನಿನ್ನದೆ ಸೊಲ್ಲ‌ ನನನಲ್ಲ
ಮಿಂಚಿ ಮಾಯವಾಗುವ ಸಿಡಿಲಿನ ತರಹ
ಹಚ್ಚಿಬಿಟ್ಟು ಪ್ರೀತಿಯ ಸವಿಬೆಲ್ಲ ಮಾಯವಾಗಿಬಿಟ್ಟೆಯಲ್ಲ.

ಮರೆಯದಾಗಿದೆ ಮನವು‌ನಿನ್ನನು
ಒಂದರೆಘಳಿಗೆ ನೆಮ್ಮದಿ ನಾ ಕಾಣೆನು
ಹುಸಿಕೋಪದ ತುಸುಪ್ರೀತಿ‌ಯ ಹಂಚು ನೀನು
ಉಸಿರಿರೋವರೆಗೂ ಬೇಡೆನು ಮತ್ತಿನ್ನೇನನೂ…

Leave a Reply

Back To Top