ವ್ಯಾಸ ಜೋಶಿ ಅವರ ತನಗಗಳು

ವಯ್ಯಾರಿ ಚೆಲುವೆಗೆ
ಸಾಕಷ್ಟು ಆಭರಣ.
ನಾಚಿಕೆಯೊಂದಿರದೆ
ಎಷ್ಟೊಂದು ಭಣ ಭಣ.

ತೆಗೆದು ಹಾಕಿದಳು
ಗೋಡೆಯ ಗಡಿಯಾರ
ಕುಳಿತಾಗ ಸುಂದರಿ
ಕನ್ನಡಿಯ ಎದುರು.

ಬಾಡಿದ ಹೂ ನೋಡಿ
ಚಡಪಡಿಸಿದಾಕೆ.
ಬಣ್ಣವ ಹಾಕಿದಳು
ಮಾಸಿದ ತನ್ಮುಖಕೆ.

ಎಷ್ಟೆಷ್ಟೋ ಕಣ್ಣುಗಳು
ಅವಳ ನೋಡುತಿರೆ.
ಆಕೆ ನೋಟ ನನ್ನೆಡೆ!
ಎಂದ್ಹೇಳಿತು ಕನ್ನಡಿ.

ತಕ್ಷಣವೇ ಬಾ ಎಂದೆ
ಆ ಆಶು ಕವಿತೆಗೆ,
ಮೇಕಪ್ ಇಲ್ಲದೆಯೇ
ಬರಲಿಲ್ಲ ಹೊರಗೆ.

ನೀರಾಭರಣೆ ಆದ್ರೂ
ಸುಂದರಿ ಈ ತನಗ
ಸಾಲಂಕೃತವಾದರೆ
ಮಾರುಹೋದ ಓದುಗ.

Leave a Reply

Back To Top