“ಭಾರವಾಗಿರುವೆ” ಲೋಹಿತೇಶ್ವರಿ ಎಸ್. ಪಿ.ಯವರ ಕವಿತೆ

ಭಾರವಾಗಿರುವೆ
ಅಂದು ಭರದಲಿ
ಇಂದು ಬೇಸರದಲಿ

ನನಗೆ ನಾನೆ ಭಾರವಾಗಿರುವೆ
ಮನದಲಿ ಸಾವಿರ ಪ್ರಶ್ನೆ
ಜೊತೆಗೆ ಹೆಣ್ಣೆಂಬ ಭಾವ

ಹೆಣ್ಣೆಂದು ಜರಿದು ದೂರುವ ಮನಕೆ
ದೂರುವ ಭರದಲಿ ಯಾರಬಳಿ
ದೂರುತಿರುವೆನೆಂಬುದರ ಗಮನವಿಲ್ಲ

ಒಡಲ ಒಡೆಯನಿಗೆ
ಒಡಲ ಸ್ವರ್ಗವಾಗಿಸುವುದು ಗೊತ್ತು
ಒಡಲಿಂದಾಚೆ ದೂರುವುದು ಗೊತ್ತು

ಆದರೆ, ದೂರುವ ಒಡೆಯನಿಗೆ
ದೂರುವ ಮುನ್ನ ಏನೊಂದನು
ಕೇಳಬೇಕೆಂಬುದರ ಅರಿವಿಲ್ಲ

ಹೆಣ್ಣಲ್ಲವೇ ಎಂಬ ಭಾವ
ಆದಶ್ಟೂ ಬೇಗ ದೂರಿ
ಭಾರ ಇಳಿಸಿಕೊಳ್ಳಬೇಕೆಂಬ ತುಡಿತ

ಮನಕೆ ಹೆಣ್ಣೆಂದು ಜರಿವ ಮುನ್ನ
ಜರಿಯಲು ಅನುವಾದವಳು
ಹೆಣ್ಣೆಂಬ ಅರಿವಿಲ್ಲ…..


Leave a Reply

Back To Top