ಮಧುಮಾಲತಿ ರುದ್ರೇಶ್ ಕವಿತೆ “ಹೊಸಬೆಳಕು”

ಭರವಸೆಯ ಹೊನ್ನ ಬೆಳಕ ಬೀರುತˌˌˌˌ
ಬರುತಿಹ ನೇಸರ ಹೊನ್ನ ಕಿರಣವ ಸೂಸುತˌˌ

ಮುಚ್ಚಿದ ಬೊಗಸೆಯ ಅರಳಿಸಬೇಕಿದೆˌˌ
ಅರಳುವ ಬದುಕಿಗೆ ಬೆಳಕು
ಮೂಡಬೇಕಿದೆ ˌˌˌ

ಬಂಡೆಯಡಿ ಸಿಲುಕಿದ ಬೀಜಕ್ಕೆ
ಸ್ಪೂರ್ತಿಯದುˌˌ
ಭಾಸ್ಕರನ ಭರವಸೆಯ
ಬೆಳ್ಳಿಕಿರಣವದುˌˌ

ಕಗ್ಗತ್ತಲ ಕಾಡಿನಲ್ಲಿ ಸೂರ್ಯರಶ್ಮಿಯೆ ಜ್ಯೋತಿˌˌ
ಕತ್ತಲು ಕವಿದ ಮನಕೆ ಬೇಕು
ಭರವಸೆಯ ಪ್ರೀತಿˌˌ

ಅಂಧಕಾರವ ಸೀಳಿ ಬರುವ ರವಿಕಿರಣವುˌˌˌ
ಆಗಲಿ ಎಮ್ಮ ಮನಗಳಿಗೂ
ಆಶಾದೀಪವುˌˌ

ಬಂಡೆ ಸೀಳಿ ಬೆಳೆದು ಅರಳಿ ನಿಂತ ಸುಮದಂತೆ
ಗೆಲ್ಲಬೇಕಿದೆ ನಾವು ಮರೆತೆಲ್ಲ
ಚಿಂತೆ ˌˌ

ಬನ್ನಿ ಪ್ರಕ್ರತಿದೇವಿಯ ಆರಾಧಿಸೋಣˌˌ
ನಿತ್ಯ ಹೊಸ ಪಾಠವ ನಿಸರ್ಗದಿಂದಲೇ ಕಲಿಯೋಣˌˌ


2 thoughts on “ಮಧುಮಾಲತಿ ರುದ್ರೇಶ್ ಕವಿತೆ “ಹೊಸಬೆಳಕು”

  1. ತುಂಬು ಧನ್ಯವಾದಗಳು..ಹೊಸ ಬರಹಗಾರರನ್ನು ಪ್ರೋತ್ಸಾಹಿಸುವ ತಮ್ಮ ಕಾರ್ಯ ಶ್ಲಾಘನೀಯ

  2. ಕಡೆಯ ಎರಡನೆಯ ಪದ್ಯದಲ್ಲಿರುವ ” ಬಂಡೆ ಸೀಳಿ ಅರಳುವ ಸುಮವು ” ತಾತ್ಕಾಲಿಕ ಪ್ರೇಮವನ್ನು ಸೂಚಿಸುತ್ತದೆ. ಏಕೆಂದರೆ ಬಂಡೆ ಸೀಳಿದ ಸಸಿ ಬಹಳದಿನ ಉಳಿಯೋಲ್ಲ
    ೦ ೦೦೦೦೦೦೦೦೦ ೦
    ಜಿ.ಎಸ್.ಪ್ರಕಾಶ್,ಬೆಂ ಗಳೂರು
    ೦೦೦

Leave a Reply

Back To Top