ಕಾವ್ಯ ಸಂಗಾತಿ
ಹೆಚ್. ಎಸ್. ಪ್ರತಿಮಾ ಹಾಸನ್
“ಮುತ್ತಿನಂತ ಮುಕ್ತಕಗಳು”
ಮೋಸವನು ಮಾಡುವರು ನಂಬಿಕೆಯ ಗಮನಿಸುತ
ಗಾಸಿಯದು ಮನಕದುವೆ ಜೀವನದಲೆ
ಸೋಸುತಲಿ ಜನರನ್ನು ಸ್ನೇಹವನು ಮಾಡಿದರೆ
ಆಸನವು ನೀಡುವರು ಲಕ್ಷ್ಮಿ ದೇವಿ
ತಾಯಿಯನು ನೆನೆಯುತಲಿ ಪ್ರೀತಿಯನು ತೋರಿಸುತ
ಮಾಯೆಯನು ನಂಬದಲೆ ಬಾಳುತಿರಲು
ಕಾಯಕವ ಮಾಡುತಲೆ ನಡೆಯುತಿರು ಜೀವನದಿ
ಪಾಯಸದ ಸಿಹಿ ಇರಲಿ ಲಕ್ಷ್ಮಿ ದೇವಿ
ದಯೆಯನು ತೋರುವುದು ಬಡತನಕೆ ಸಹಿಯಿಹುದು
ಪಯಣದಲಿ ಗಮನವಿರೆ ಚಂದವದುವೆ
ಗಯಿಸುತಲೆ ನಡೆಯದಿರು ನಂಬಿಕೆಯು ಇರಬೇಕು
ಸಯಿಸುತಲೆ ಬಾಳುತಿರು ಲಕ್ಷ್ಮಿ ದೇವಿ
ಫಲವಿರದ ಮರದಂತೆ ಆಗದಿರು ಬದುಕಿನಲಿ
ಸಲಹುತಿರು ಇತರರನು ಅನುಬಂಧದಿ
ಕಲಿಸುತಲಿ ಕಲಿಯುತಲಿ ನಡೆಯುತಿರು ದಾರಿಯಲಿ
ಕಲೆಗದುವೆ ಬೆಲೆಯಿಹುದು ಲಕ್ಷ್ಮಿ ದೇವಿ
ಮನವಿರಲು ಶಾಂತಿಯಲಿ ಕಾಡವುದೆ ನೋವುಗಳು
ಸನಿಹದಲಿ ಬಂಧುಗಳು ಪ್ರೀತಿಯಲಿರೆ
ಹನಿಯಾಗಿ ಬೀಳುವುದು ನಂಬಿಕೆಯ ಫಲವದುವೆ
ತೆನೆಯಂತೆ ಅನುಬಂಧ ಲಕ್ಷ್ಮಿ ದೇವಿ
ಹೆಚ್. ಎಸ್. ಪ್ರತಿಮಾ ಹಾಸನ್
ಗಾಸಿ ಮತ್ತು ಸಯಿಸು ಪದಗಳು ತಪ್ಪು ಬಳಕೆ,;ಅವು ಘಾಸಿ ಮತ್ತು ಸಹಿಸು -ಎಂಬ ಪದಗಳಅರಿವು ಕವಿಗೆ ಮೂಲಭೂತವಾಗಿ ಇರಬೇಕಲ್ಲವೇ..
೦ ಜಿ.ಎಸ್.ಪ್ರಕಾಶ್,ಬೆಂಗಳೂರು ೦