ಕಾವ್ಯ ಸಂಗಾತಿ
ಶಾಲಿನಿ ಆರ್ ಹುಬ್ಬಳ್ಳಿ
ನತಭಾವ
ಒಡಲಾಳದಲಿ ಒಡಮೂಡಿದ
ತಪ್ತತೆಯ ಪ್ರಶ್ನೆಗಳ ಸುರಿಮಳೆ/
ಉತ್ತರ ಹುಡುಕುವಿಕೆ ಬೈಗು ಜಾವದ
ಸರಹದ್ದಿನ ಅಂಚಿನಲಿ ಈ ಇಳೆ//
ಕಳಚುವ ಹುನ್ನಾರು ಒದೊಂದೆ ಭಾವಗಳು ಬೆತ್ತಲಾಗಿ ಬಯಲಿಗೆ/
ಸೊಬಗಿನ ಪಾತರಗಿತ್ತಿ ನೋವಿನ ಹುಳುವಾಗಿ ಮತ್ತೆ ಗೂಡಿಗೆ//
ಉಕ್ಕಿದ ಕಡಲಾಳದಿ ನೂರು ಭಾವಗಳ
ಸಮಾಧಿ ಪಳೆಯುಳಿಕೆಯಂತೆ/
ಬಿಚ್ಚಿಡುವ ತವಕದಲಿ ಕಾಲ ಸರಿದಿದೆ
ದಡಕಪ್ಪಳಿಸದ ಅಲೆಯಂತೆ//
ಮಂಜಿನ ಮುಸುಕಿನ ಚಳಿಯ ಕುರ್ಳಿಗಾಳಿ ಸುಳಿದು ಬಳಿಗೆ/
ತುಂಬಿದ ಎನ್ನೆದೆಗೆ ಮೋಹದ ಮುತ್ತನೊತ್ತಿದೆ ಒಲವ ಸುಳಿಗೆ//
ಜನುಮವಿದು ಬರಿದಾಗಬೇಕು
ಮತ್ತೆ ಮತ್ತೆ ಚಿಗುರ ಹಡೆಯಲು/
ಒಳಬೇಗುದಿಗಳ ಬಿಕ್ಕು ನಿಲ್ಲಬೇಕು
ಮತ್ತೆ ಮತ್ತೆ ನಿನ್ನ ಪಡೆಯಲು//
ಸೂತ್ರವಿದು ಬಾಳ ಭವಣೆಗೆ
ನೀತಿ ಮಂತ್ರದ ರೀತಿ ಪಾಠ/
ಬಿದ್ದ ಎಲೆಯಲು ನೂರು ಕನಸಿದೆ
ಮತ್ತೆ ಅನುಭವದ ರಸದೂಟ//
ಶರದೃತುವಿನ ಮಾಧುರ್ಯವಿದೆ ನತಭಾವದ ಆದಿಯಲಿ/
ಒದೊಂದೆ ಎಲೆಗಳು ಕಳಚಿ ಬೀಳುವ
ವಿಸ್ಮಯದ ಬಾಳ ಪಯಣದಲಿ//
ಶಾಲಿನಿ ಆರ್ ಹುಬ್ಬಳ್ಳಿ