ಡಾ .ಶಶಿಕಾಂತ ಪಟ್ಟಣ-ವಿಶ್ವ ಪುರುಷ ದಿನ

ಕಾವ್ಯ ಸಂಗಾತಿ

ಡಾ .ಶಶಿಕಾಂತ ಪಟ್ಟಣ

ವಿಶ್ವ ಪುರುಷ ದಿನ

ಗೆಳೆಯರೇ
ಇಂದು ವಿಶ್ವ ಪುರುಷ ದಿನ
ಮುಂಜಾನೆ ಕೆಲಸದವಳು
ಕೈ ಕೊಟ್ಟಳು .
ನನ್ನವಳ ಮುನಿಸು .
ಎಂದಿನಂತೆ ಕಸಬರಿಗೆ ಹಿಡಿದೆ.
ಮಗುವಿನ ಬಟ್ಟೆ ಇಸ್ತ್ರಿ ಮಾಡಿದೆ.
ಮನೆಯೊಡತಿ ಮಾರ್ಕೆಟಿಗೆ
ಮನೆಯಲ್ಲಿ ಗೃಹ ಕೆಲಸ .
ಹಾಲು ಕಾಯಿಸುವುದು.
ಬಿಲ್ಲ ಕಟ್ಟುವುದು
ಟೀ ಕುದಿಸುವುದು.
ಅಯ್ಯೋ ಗ್ಯಾಸಿನ ತೊಂದರೆ.
ಗಾಡಿಯಲ್ಲಿ ಸಿಲಿಂಡರ್ ತಂದೆ .
ಪೋಸ್ಟ್ ಕೊರಿಯರ್
ಬಿದ್ದಿವೆ ಬಾಕ್ಸ್ ತುಂಬಾ
ಎತ್ತಿ ತಂದೆ.
ಸಂಜೆ ನಲ್ಲಿಯಲ್ಲಿ ನೀರಿಲ್ಲ .
ಕೊಳಾಯಿ ಖಾಲಿ .
ಮತ್ತೆ ಹೊತ್ತೆ ಕೊಡ ಬಕೀಟು.
ದಿನಸಿ ಅಂಗಡಿ ಗಿರಣಿ ಕೆಲಸ
ಬಾನಿನಲಿ ಚುಕ್ಕಿ ಮೂಡಿದವು .
ಟಿವಿಯಲಿ ವಿಶ್ವ ಪುರುಷ ದಿನ ಚರ್ಚೆ.
ಮನೆಯೊಡತಿಗೆ ನೆನಪಾಯಿತು.
ಏನ್ರೀ ಇಂದು ವಿಶ್ವ ಪುರುಷ ದಿನ ?
ಅಭಿನಂದನೆ ಎಂದಳು
ನಗಲಿಲ್ಲ ನಾನು.
ಒಳಗೊಳಗೇ ಹೆಮ್ಮೆ .

ಇಂದು ವಿಶ್ವ ಪುರುಷ ದಿನ.


ಡಾ .ಶಶಿಕಾಂತ ಪಟ್ಟಣ .ಪೂನಾ

6 thoughts on “ಡಾ .ಶಶಿಕಾಂತ ಪಟ್ಟಣ-ವಿಶ್ವ ಪುರುಷ ದಿನ

  1. ತುಂಬಾ ಹಾಸ್ಯ ವಿಡಂಬನೆ ಕಾವ್ಯ ಸರ್

    ಗೀತಾ ಬಾಗಲಕೋಟೆ

  2. ನಿಜಕ್ಕೂ ಪುರುಷರು ಮನೆ ಮತ್ತು ಉದ್ಯೋಗ ನಿರ್ವಹಿಸುವ ಸಾಮರ್ಥ್ಯ ಹೊಂದಿದವರು ಹಾಸ್ಯಮಯವಾಗಿ ಮೂಡಿ ಬಂದಿದೆ ಸರ್

    ಅಶೋಕ ಕುಮಾರ ಪಾಟೀಲ

  3. ಪುರುಷರ ಕಷ್ಟ ಅವರಿಗೇ ಗೊತ್ತು…ಹೊರಗಿನ ಕೆಲಸದ ಜೊತೆಗೆ ಮನೆಯನ್ನೂ ಸಂಭಾಳಿಸುವುದು… ಅದನ್ನೇ ತಿಳಿಯಾಗಿ ಇವತ್ತು ಸಾಂದರ್ಭಿಕವಾಗಿ ನಮ್ಮ ಜೊತೆಗೆ ಹಂಚಿಕೊಂಡಿದ್ದೀರಿ…ಸುಂದರ ವಿಡಂಬನೆ

    ಸುಶಿ

Leave a Reply

Back To Top