ಡಾ.ಸರೋಜಾ ಜಾಧವ ಕವಿತೆ-ಆರದಿರಲಿ ದೀಪ

ಕಾವ್ಯ ಸಂಗಾತಿ

ಡಾ.ಸರೋಜಾ ಜಾಧವ

ಆರದಿರಲಿ ದೀಪ

ಸುಖವಿರಲಿ ದುಃಖವಿರಲಿ
ಭರವಸೆಯ ದೀಪ ಆರದಿರಲಿ
ಸೋತು ಸುಣ್ಣವಾದರು ನಾನು
ನಿನ್ನ ಗುಡಿಗೆ ಬಣ್ಣವಾಗುವೆನು

ಸೋಲಿನುರುಳು ಕತ್ತಿಗೆ
ಕೊಯ್ಯತಿದ್ದರು ಕುತ್ತಿಗೆ
ಹಿಡಿವೆ ಮುತ್ತಿನ ಸತ್ತಿಗೆ
ಆರದಿರಲಿ ದೀಪ ಬಾಳಿಗೆ

ಚುಚ್ಚಿ ಕೊಂದರು ಮಾತಲಿ
ತುತ್ತು ಕಸಿದರು ಬಾಳಲಿ
ಅವಮಾನ ಹೇಗೆ ತಾಳಲಿ
ದೇವ ಭರವಸೆದೀಪ ಆರದಿರಲಿ

ಹರಿಶ್ಚಂದ್ರನ ಸಹನೆ ನೀಡು
ಸೀತಾಮಾತೆಯ ತಾಳ್ಮೆಕೊಡು
ಅಕ್ಕನ ವಿರಕ್ತಿನೀಡು
ಆರದಿರಲಿ ದೀಪ ನೋಡು

ಒಲವದೀಪ ಆರದಿರಲಿ
ಮನಸು ಚಂಚಲಾಗದಿರಲಿ
ಬದುಕ ಬಂಡಿಗ್ಹೆಗಲಿಗಿರಲಿ
ದೀಪವಾರದೆ ಬೆಳಗಲಿ

ಅಪವಾದಗಳು ಅಪಮಾನಗಳು
ಸಹಿಸಿನೊಂದು ಕಣ್ಣಹನಿಗಳು
ನಿನ್ನ ಕೊರಳಮುತ್ತಿನ ಹಾರಗಳು
ದೇವ ಆರದಿರಲಿ ದೀಪ ಬಾಳಿಗೆ

ಡಾ.ಸರೋಜಾ ಜಾಧವ

6 thoughts on “ಡಾ.ಸರೋಜಾ ಜಾಧವ ಕವಿತೆ-ಆರದಿರಲಿ ದೀಪ

    1. ತುಂಬಾ ಅರ್ಥಪೂರ್ಣ ಕವಿತೆ ಕವಿತೆ. ಅಭಿನಂದನೆಗಳು ಅಕ್ಕಾ ❤

  1. ಅರ್ಥಪೂರ್ಣವಾದ, ಬಾಳಿನ ಅನುಭವದ, ನಿತ್ಯ ಜೀವನದ ಕವಿತೆ.

Leave a Reply

Back To Top