ಶ್ರೀಪಾದ ಆಲಗೂಡಕರ ಕವಿತೆ-ಬಾನಲ್ಲಿ ಚಂದಿರ

ಕಾವ್ಯ ಸಂಗಾತಿ

ಶ್ರೀಪಾದ ಆಲಗೂಡಕರ-

ಬಾನಲ್ಲಿ ಚಂದಿರ

ಬಾನಲ್ಲಿ ಬೆಳಗಿದ ಚಂದಿರನು
ಮಗುವಿನ ಮನಸ ಅರಿತವನು
ಅವನಿಲ್ಲದೆ ತುತ್ತನ್ನ ಇಳಿಯದು
ಚಂದ್ರಮನ ಛಾಯೆಯೇ ಪ್ರೀತಿಯದು

ಬೆಳಗುವ ಲಕ್ಷಾಂತರ ನಕ್ಷತ್ರಗಳು
ಚಂದಿರನ ನನ್ನಮ್ಮ ತೋರುವಳು
ಗುಂಡಗೆ ಬೆಳ್ಳಗೆ ಹೊಳೆಯುವನು
ಮಕ್ಕಳ ಹೃದಯದ ಕನಸಿವನು

ಬಾಲ್ಯದ ನಗುವಿನ ಮೊಗವಿದು
ಬಾನಲ್ಲಿ ಹಾರುವ ಹಕ್ಕಿಯಿದು
ಅತ್ತರೆ ನೀಬಂದು ಸಂತೈಸುವೆ
ನೀರಿನಲ್ಲಿ ಪ್ರತಿಬಿಂಬ ತೋರಿಸುವೆ

ಅಮ್ಮನ ಮಡಿಲಲಿ ತೆವಳುತಲಿ
ತೂಗುವ ಉಯ್ಯಾಲೆ ಸ್ಮರಿಸುತಲಿ
ಆಕಾಶದ ತಾರೆಗಳ ಎಣಿಸುತಲಿ
ತೊದಲು ನುಡಿಗಳ ಕಲಿಯುತಲಿ


ಶ್ರೀಪಾದ ಆಲಗೂಡಕರ

2 thoughts on “ಶ್ರೀಪಾದ ಆಲಗೂಡಕರ ಕವಿತೆ-ಬಾನಲ್ಲಿ ಚಂದಿರ

Leave a Reply

Back To Top