ಕಾವ್ಯ ಸಂಗಾತಿ
ಡಾ. ಅಭಿಷೇಕ್ ಭಾರದ್ವಾಜ್ ಬಿ ಕೆ
ಮತ್ತೆ ಕಾಡಿದ ವಿರಹ
ಮುಖಾಮುಖಿಯಾದಾಗ
ಮನದ ಮಾತುಗಳೆಲ್ಲ ಮೌನವಾದವು
ನಿನ್ನ ಕಂಡ ಕಂಗಳಿಗೆ
ನಿನ್ನನ್ನೇ ನೋಡುವ ಚಟವು
ತುಂಬಿ ಬಂದ ಭಾವಕ್ಕೆ ತುಟಿಯೆರಡು
ಬಿರಿಯದಾಗಿ ಮಾತುಗಳ ಬದಲಿಸಿದವು
ಎದೆ ಬಡಿತದ ಏರಿಳಿತಗಳು
ಮೊರೆತವಿಟ್ಟವು
ಜೊತೆಗಳೆದ ಗಳಿಗೆಗಳ ಇನ್ನೂ
ಬೇಕೆಂದು ಬೇಡಿದವು
ಸ್ಪರ್ಶಿಸಿದ ಕೈಗಳಿಗೆ ಹೂದಳಗಳು ಛೇಡಿಸಿದವು
ನಿನ್ನಿಂದ ತುಸು ದೂರಾಗುವ ಸಮಯದಿ
ಕಣ್ಣಾಲಿಗಳು ತಿಳಿಯದೇ ಕೊಳವಾದವು
ಎದೆಯ ಭಾವಗಳೆಲ್ಲಾ ಸ್ತಬ್ಧವಾಗಿ
ಕಾರ್ಮೋಡಕವಿದಂತೆ ನಿಶ್ಶಬ್ಧವಾದವು
ದೇಹ ಬದುಕಿದ್ದರೂ ಜೀವ
ನಿನ್ನ
ಸನಿಹವೇ ಗಿರಕಿ ಹೊಡೆದು
ನಿನ್ನ ಪದಪಾದದಲೇ ಬೆರೆತು ಮಗುವಾದವು
ಮನದ ಮಡಿಕೆಯ ತುಂಬಿದ
ಭಾವ ಬತ್ತಿ ಬರಿದಾಗಿತ್ತು
ಮುಚ್ಚಿದ ಕಂಣ್ರೆಪ್ಪೆಗಳು
ನಿನ್ನ ಚಿತ್ರವ ಕಾಣುವಲ್ಲಿ ಕಾದಾಡಕ್ಕೆ ಶುರುವಚ್ಚಿದ್ದವು
ಎನೋ ಅರಿಯದ ಸೆಳೆತ
ನಿನ್ನೊಳಗೆ ನನ್ನ ಹುಡುಗಿಸಿಟ್ಟಿದ್ದವು
ನೀ ನಕ್ಕ ಪ್ರತಿಸಾರಿ ನನ್ನನ್ನೇ ನನಗೆ
ಪ್ರತಿಬಿಂಬಿಸಿ ನಲಿಸುತ್ತಿತ್ತು
ನಿನ್ನೊಲವ ಸಾಂಗಿತ್ಯದಿ
ಜೇನ್ಬೆರೆತ ಹಾಲಂತೆ ಸವಿಯಾಗಿತ್ತು
ಕಳೆದ ಗಳಿಗೆಗಳ ಲೆಕ್ಕ ವಿಡುವಲ್ಲಿ ಬುದ್ದಿ ಲೆಕ್ಕ ತಪ್ಪಿತ್ತು
ನೀನಿರದ ಪ್ರತಿಗಳಿಯೂ ತೋಳ್ತೆಕ್ಕೆ
ದುಃಖಿಸಿ ಅಳುತಿತ್ತು.
ಚೈತನ್ಯತುಂಬಿದ್ದ ಅಂಗಾಗಳು
ನಿಶ್ಚೈತ್ಯದೊಳು ನಿರ್ಜೀವವಾಗಿ ಶವದಂತಾಗಿದ್ದವು
ಆದರೂ ಕಡಲಿಗೂ ಕಿನಾರಿಗೂ ಇದ್ದಂತೆ
ನಮ್ಮ ಅನುಬಂಧ
ಸೇರುವುದು ಬೆರೆಯುವುದು
ಮತ್ತೆ ಅಗಲಿ ದೂರಾಗುವುದು
ಸಹಜ ನಿತ್ಯ ಜೀವನ ಚಕ್ರ.
ನಿನ್ನ ಮಾತುಗಳ ಮತ್ತೆ ಮತ್ತೆ ನೆನೆದ
ಎನ್ಚಿತ್ತ ನೀನಿರುವ ಎದೆಗೂಡ ತೋರಿ
ಸಾಂತ್ವಾನ ಹೇಳಿ ಸಂತೈಸಿತ್ತು
ನಿನ್ನ ಒಲವಿನ ಚಿತ್ರ ಭಾವನೆಗಳ
ಅಂತರ್ಗಣ್ಣಿನ ಕನ್ನಡಿಯಲ್ಲಿಟ್ಟು
ಆದರೂ ಹೃದಯ ವೀಣೆಯ ಸ್ವರದಲ್ಲಿ
ಏನೋ ಅಪಸ್ವರ
ನಿನ್ನ ಸನಿಹದ ಲಯವಿಲ್ಲದೆ
ನಿನ್ನ ಧನಿಯ ತಾಳವಿಲ್ಲದ ಸಪ್ತಸ್ವರ
ಎಷ್ಟೇ ಸಾಂತ್ವಾನ ಗೈದರೂ ಸಮಾಧಾನಿಸುತ್ತಿಲ್ಲ
ಮುಗಿಲ ಮಾಳಿಗೆ ಮನ
ಜೀವವಿದ್ದರೂ ನಿರ್ಜೀವವಾಗಿದೆ ಕಾಯ
ಘೋರಿಯೊಳಗಿನ ಶವದಂತೆ
ಮತ್ತೆ ಮತ್ತೆ ಕಾಡುತಿದೆ ವಿರಹ
ಮಸಣದ ಭೀಕರ ಮೌನ ಕಡುಗತ್ತಲಂತೆ
ಡಾ. ಅಭಿಷೇಕ್ ಭಾರದ್ವಾಜ್ ಬಿ ಕೆ
ಸೂಪರ್ ಅದ್ಭುತ ಬರಹ. ಕಾವ್ಯಾತ್ಮಕ… ❤️
Super