ನರಸಿಂಗರಾವ ಹೇಮನೂರ ಕವಿತೆ ನಾ ಭಾಳ ಖೋಡಿ ಹುಡುಗ

ಕಾವ್ಯ ಸಂಗಾತಿ

ನರಸಿಂಗರಾವ ಹೇಮನೂರ

ನಾ ಭಾಳ ಖೋಡಿ ಹುಡುಗ

ನೀ ಮೂಗ ಮುರದು ನನ ಕೆಣಕ ಬ್ಯಾಡ
ನಾ ಭಾಳ ಖೋಡಿ ಹುಡುಗ,
ನೀ ಓಡಿ ಹೋಗಬ್ಯಾಡ, ನಿಂತ ನೋಡ
ಇನ್ನೊಂದು ಸಾರಿ ನನಗl

ಚೋಟುದ್ದ ಪೋರಿ ನಿನಗೆಷ್ಟು ಸೊಕ್ಕ?
ಬಿಡು ನನ್ನ ಜೋಡಿ ಮುರುಕ,
ಕಡಿತನಕ ಹಿಂಗ ಕಡದಾಡಿ ಓಡಿದರ
ಕಲಿಬೇಕ ಹೆಂಗ ಬದುಕ!

ನೀ ಮನಸ ಪೂರ ನನ ಮ್ಯಾಗ ಇಟ್ಟು
ಮತ್ಯಾಕ ಕುಣಸತಿದ್ದಿ?
ಈ ಆಟ ನನಗ ತಿಳಿವೊಲ್ದ ಹುಡುಗಿ,
ಬಿಡಿಸೇಳ ಎಲ್ಲ ಸುದ್ದಿl

ನನ್ನ ಜೀವ ನಿನ ಸೇರ ಬಯಸಿ
ದಿನರಾತ್ರಿ ಮಿಡಿಯುತಾದ,
ನಿನಗೆಂಗ ಹೇಳ ಬೇಕ ಹೇಳ ಗೆಳತಿ
ಬರಬಾರದೇನ ಕದ್ದl


ನರಸಿಂಗರಾವ ಹೇಮನೂರ

Leave a Reply

Back To Top