ಹನಿಬಿಂದು ಅವರ ಹೊಸ ಗಜಲ್

ಕಾವ್ಯ ಸಂಗಾತಿ

ಹನಿಬಿಂದು

ಗಜಲ್

ಬಾರೆ ಗಝಲ್ ಪ್ರೀತಿಯಿಂದ ಮಾತನಾಡುವ
ತಾರೆ ಮನದ ಭಾವಕ್ಕೀಗ ಶಕ್ತಿ ತೋಟವ

ಕ್ಯಾರೆ ಎನದೆ ನಡೆಯುತಿರಲು ಲೋಕ ಭಯವೆ
ಹಾರೆ ಗುದಲಿ ಹಿಡಿದು ದುಡಿಯೆ ಸರ್ವ ಸುಖವೆ

ವಾರೆ ನೋಟ ಬೀರಿ ಸೆಳೆದು ಒಡನೆ ನಡೆದರು
ಓರೆ ಗುಣವ ಅಳೆದು ತಿಳಿದು ಬದುಕು ನೊಂದರು

ಸೀರೆ ಉಟ್ಟು ಬಾಳು ಮೆರೆದು ಜೈ ಎನಿಸಿಕೊಂಡರು
ನೀರೆ ತಾನು ಎದೆಯ ಹೊಕ್ಕು ಗಟ್ಟಿ ಕುಳಿತರು

ಯಾರೆ ಬರಲಿ ಬದುಕಿನಲ್ಲಿ ಪ್ರೇಮ ಬೀರುತ
ನಮಗೆ ನಾವೆ ಹನಿಯ ಬಿಂದು ಸಮಯಕ್ಕಾಗುತ್ತ

———————

ಹನಿಬಿಂದು

Leave a Reply

Back To Top