ನಿಶ್ಚಿತ.ಎಸ್ ಕವಿತೆ ನಾ ನಿನ್ನಲ್ಲಿ ಬೆರೆತು ಹೋದೆ….

ಕಾವ್ಯಸಂಗಾತಿ

ನಿಶ್ಚಿತ.ಎಸ್ ಕವಿತೆ

ನಾ ನಿನ್ನಲ್ಲಿ ಬೆರೆತು ಹೋದೆ….

ನಿನ್ನದೊಂದು ನಗು ಸಾಕು,,
ನಾ ಮರೆಯಲು ನನ್ನೆಲ್ಲ ನೋವನ್ನು,,
ಕಾಣುವೆ ನಿನ್ನ ಖುಷಿಯಲ್ಲಿ ನನ್ನ ನಗೆಯನ್ನು,,
ನಾ ಬೆರೆತು ಹೋದೆ ನಿನ್ನ ನಗುವಲ್ಲಿ…

ನಿನ್ನದೊಂದು ಮಾತು ಸಾಕು ,,
ನಾ ಮರೆಯುವೆ ನನ್ನ ಬೇಡವಾದ,, ನೂರು ಯೋಚನೆಗಳನ್ನು ,,
ನಾ ಮೌನಿಯಾಗಿ ಹೋಗುವೆ
ನಿನ್ನ ದನಿಯಲ್ಲಿ,,
ನಾ ಬೆರೆತು ಹೋದೆ ನಿನ್ನ ನುಡಿಯಲ್ಲಿ…

ನಿನ್ನದೊಂದು ಕರೆ ಸಾಕು,,
ಈ ಒತ್ತಡ ಜೀವನದಲ್ಲೂ ,,
ನಾ ಎಲ್ಲವನ್ನೂ ನಿಭಾಯಿಸುವೆ,, ನಿನ್ನ ಧೈರ್ಯದ ನುಡಿಯಲ್ಲಿ ನಾ ಬೆರೆತು ಹೋದೆ..

ನಿನ್ನದೊಂದು ಸಮಯ ಸಾಕು,,
ಈ ಪ್ರಪಂಚವೇ ನಿನ್ನೊಳಗಿದೆ ಎಂದು ತಿಳಿದು,,
ನಾ ಕಳೆಯುವೆ ನನ್ನ ಬದುಕನ್ನೇ
ನಿನ್ನ ಕೈ ಹಿಡಿದು,,
ನಾ ಬೆರೆತು ಹೋದೆ ನಿನ್ನ ಬೆರಳ ಜೊತೆಯಲ್ಲಿ..

ನಿನ್ನದೊಂದು ನೋಟ ಸಾಕು,,
ನೂರು ಕಣ್ಣುಗಳ ಮಧ್ಯೆಯು,,
ನಾ ಕಣ್ಣಾಯಿಸುವೆ ನಿನ್ನನ್ನೇ ,,
ಅರ್ಥೈಸಿಕೊಳ್ಳುವೆ ಎಲ್ಲವನ್ನೂ ನಿನ್ನ ಆ ನೋಟದಲ್ಲೇ ,,
ನಾ ಬೆರೆತು ಹೋದೆ ನಿನ್ನ ಕಣ್ಣಲ್ಲಿ

ಒಟ್ಟಿನಲ್ಲಿ ನಾ ಬೆರೆತು ಹೋದೆ ನಿನ್ನಲ್ಲಿ,,
ಮರೆಯುತ್ತಾ ನನ್ನೆಲ್ಲಾ ಆಲೋಚನೆಗಳನ್ನು ನಿನ್ನಲ್ಲ


ನಿಶ್ಚಿತ.ಎಸ್

Leave a Reply

Back To Top