ಕಾವ್ಯ ಸಂಗಾತಿ
ಮಧು ಕಾರಗಿ ಹೊಸ ಕವಿತೆ
ಒಲುಮೆ
ಅವ
‘ ನಾ ನಿನ್ನ ಪ್ರೀತಿಸುತ್ತೇನೆ ‘
ಎಂದು ಹೇಳಿಕೊಂಡವನಲ್ಲ
ಕಡಲೂ ತುಂಬಿ ಕೊಡಲಾಗದ
ಅಗಾಧತೆಯನ್ನು ತೋರಿಬಿಡುತ್ತಾನೆ
ಮಾತಿನಲ್ಲಿ
ಮೌನದಲ್ಲಿ
ಸಿಹಿಮುತ್ತಿನಲ್ಲಿ
ಕೈ ತುತ್ತಿನಲ್ಲಿ
ಬದುಕಿಗೆ ನೆರಳಾಗುವ ಕಾಳಜಿಯಲ್ಲಿ
ಒಂದು ನವಿರು ಸ್ಪರ್ಶದಲ್ಲಿ!
ಯಾಕೆ ಹೇಳುವುದಿಲ್ಲ ಅವನು ಕೇಳಬೇಕೆಂದುಕೊಳ್ಳುತ್ತೇನೆ
ಪ್ರತಿ ನೋಟದಲ್ಲೂ
ಅವನ ಕಣ್ಣಿನಲ್ಲಿ
ಉಕ್ಕಿ ಹರಿವ ಪ್ರೀತಿಯ ಜಲಪಾತವನ್ನು ಕಂಡು
ನನ್ನ ಹುಚ್ಚು ಪ್ರಶ್ನೆಯನ್ನು
ಒಳಗೊಳಗೇ ನುಂಗಿಬಿಡುತ್ತೇನೆ!
ಅವನ ದೆಸೆಯಿಂದ
‘ನುಡಿಗಿಂತ ನಡೆ ಮೇಲು’
ಎಂದರಿತುಕೊಂಡು
ಈಗೀಗ ಕವಿತೆ ಬರೆಯುತ್ತಿದ್ದೇನೆ
ನಾನೂ ಕವಿಯಾಗಿ !
ಒಂದು ದಿನ
ನನ್ನ ಡೈರಿಯಲ್ಲಿ
ಕೆಂಪು ಗುಲಾಬಿ ಪಕಳೆ ಅಂಟಿಸಿ
ಬಾಣ ನೆಟ್ಟ
ಹೃದಯದ ಚಿತ್ತಾರದ
ಮೇಲೆ ಬೆರಳಾಡಿಸುತ
ನಟ್ಟ ನಡುವಿನ ಪುಟದ ಪದ್ಯವನ್ನು
ಓದಿ ಜೋರಾಗಿ ನಗಬಹುದು ಅವನು
ಹುಚ್ಚು ಹುಡುಗಿ
ಎಂದು ತಲೆಕೊಡವಿ
ಈ ಪುಟ್ಗವಿತೆಯನ್ನು ಎದೆಗಪ್ಪಿಕೊಳ್ಳಬಹುದು
ನಾನು ಎಲ್ಲಿದ್ದರೂನು
ಆ ಸ್ಪರ್ಶ ಗಾಳಿಯಾಗಿ ಸೋಕಿ
ಹೋಗುವ ನಂಬಿಕೆಯಿದೆ !
ಮಧು ಕಾರಗಿ
ತುಂಬಾ ಚೆನ್ನಾಗಿದೆ ಮಧು
Super ma
ನೈಸ್ ಲೈನ್
Non moodu. Magalu. Kavana. Andre. Saraswati. Devi. Enda. Kavana