ನಿಜಗುಣಿ ಎಸ್ ಕೆಂಗನಾಳ-ಕನ್ನಡ ಕನ್ನಡ

ಕಾವ್ಯ ಸಂಗಾತಿ

ನಿಜಗುಣಿ ಎಸ್ ಕೆಂಗನಾಳ-

ಕನ್ನಡ ಕನ್ನಡ

ಮರೆಯದೀರು ನೀ ಈ ನಮ್ಮ
ಕನ್ನಡ
ತೊರೆಯದಿರು ನೀ ಈ ನಮ್ಮ
ಕನ್ನಡ
ನಾವುಗಳೇ ಮರೆತರೆ ಈ ನಮ್ಮ
ಕನ್ನಡ
ಯಾರು ಬೆಳೆಸಿ ಉಳಿಸುವರು
ಈ ನಮ್ಮ ಕನ್ನಡ…!

ಹೆತ್ತ ತಾಯಿಯ ಎದೆಹಾಲು
ಸವಿದಂತೆ ಈ ನಮ್ಮ ಕನ್ನಡ
ಈ ನಮ್ಮ ನಾಡಿಗೆ ಹಿರಿಮೆಯ
ಗರಿಯೂ ಈ ನಮ್ಮ ಕನ್ನಡ…!

ನಮ್ಮ ರಕ್ತದ ಕಣ ಕಣದಲ್ಲು
ಹರಿದಾಡುತ್ತಿದೆ ಈ ನಮ್ಮ ಕನ್ನಡ
ನಮ್ಮ ಬದುಕಿಗೆ ಬೆಳಗುವ
ಜ್ಯೋತಿಯಾಗಿ ನಿಂತಿರುವುದೇ
ಈ ನಮ್ಮ ಕನ್ನಡ…!

ಈ ಕನ್ನಡವೇ ನಮಗೆ ಶಕ್ತಿಯಂತೆ
ಈ ಕನ್ನಡವೇ ನಮಗೆ ಯುಕ್ತಿಯಂತೆ
ಈ ಕನ್ನಡವೇ ನಮ್ಮ
ಬದುಕಿಗೆ ದಾರಿದೀಪದಂತೆ
ಈ ನಮ್ಮ ಕನ್ನಡವೇ ನಮಗೆ
ನಮ್ಮ ಬದುಕಿನ ಆಶಾ ಕಿರಣದಂತೆ…!

—————————————–


ನಿಜಗುಣಿ ಎಸ್ ಕೆಂಗನಾಳ

Leave a Reply

Back To Top