ಕಾವ್ಯಯಾನ

ಗಝಲ್

Green and Blue Dragonflies on Green Leaf

ತೇಜಾವತಿ ಹೆಚ್.ಡಿ.

ಮೌನದ ಮಾತು ಅರ್ಥವಾಯಿತು ನಿನ್ನಿಂದ
ಕಾಣದ ಕನಸು ಗೋಚರವಾಯಿತು ನಿನ್ನಿಂದ

ಹದವಾದ ಭೂಮಿ ಬಂಜರಾಗಿತ್ತು ನೀನಿಲ್ಲದೆ
ಉತ್ತುವ ಕಾರ್ಯ ಅರ್ಥವಾಯಿತು ನಿನ್ನಿಂದ

ಪ್ರೀತಿ ಹೃದಯದಿಂದ ಒಸರುತ್ತಿತ್ತು ರಸಜೇನಾಗಿ
ಸವಿಯ ಸವಿವುದು ಶುರುವಾಯಿತು ನಿನ್ನಿಂದ

ನೆರಳೂ ಹಿಂಬಾಲಿಸಲು ಅದುರುತ್ತಿತ್ತು ನನ್ನನ್ನು
ಕಣ್ಣಲ್ಲಿ ಬೆಳಕು ಒಮ್ಮೆಲೇ ಪ್ರಜ್ವಲಿಸಿತು ನಿನ್ನಿಂದ

ಕಾಯಕ್ಕೂ ಆತ್ಮಕ್ಕೂ ಹೊಂದಿಕೆ ಇರಲಿಲ್ಲ ಎನ್ನಲ್ಲಿ
ಮನದೊಳಗೆ ತೇಜಸ್ಸಿರುವುದು ತಿಳಿಯಿತು ನಿನ್ನಿಂದ

*******

Leave a Reply

Back To Top