ಎ. ಹೇಮಗಂಗಾ ಅವರ ಗಜಲ್

ಕಾವ್ಯ ಸಂಗಾತಿ

ಎ. ಹೇಮಗಂಗಾ

ಗಜಲ್

ಭೂತದ ಕಹಿನೆನಪುಗಳ ಮರೆವುದನು ಕಲಿತಿದ್ದೇನೆ
ವಾಸ್ತವದೊಡೆ ರಾಜಿಯಾಗುವುದನು ಕಲಿತಿದ್ದೇನೆ

ಅಂತರಂಗದಿ ಮಾಸಿ ಹೋದ ನೂರು ಕನಸುಗಳಿವೆ
ನಿರಾಶೆಯ ಒಳಗೇ ನುಂಗುವುದನು ಕಲಿತಿದ್ದೇನೆ

ದಕ್ಕದ ಪ್ರೀತಿಗಾಗಿ ಹಂಬಲಿಸಿದುದು ನನ್ನದೇ ತಪ್ಪು
ದುಃಖಿಸುವ ಜೀವವ ಸಂತೈಸುವುದನು ಕಲಿತಿದ್ದೇನೆ

ಸೋಲುಗಳ ಹೊಡೆತಕೆ ಮನಸು ನಿತ್ರಾಣಗೊಂಡಿದೆ
ಕುಸಿದರೂ ಕಸುವು ತುಂಬುವುದನು ಕಲಿತಿದ್ದೇನೆ

ನೆಮ್ಮದಿ ಗಮ್ಯ ಕಣ್ಣಾಮುಚ್ಚಾಲೆ ಆಡುತ್ತಲೇ ಇದೆ
ನನಗಾಗಿ ಮಾತ್ರ ನಾ ಬದುಕುವುದನು ಕಲಿತಿದ್ದೇನೆ


ಎ. ಹೇಮಗಂಗಾ






One thought on “ಎ. ಹೇಮಗಂಗಾ ಅವರ ಗಜಲ್

Leave a Reply

Back To Top