ಡಾ.ಅಮೀರುದ್ದೀನ್ ಖಾಜಿಯವರ- ಗಜಲ್

ಕಾವ್ಯ ಸಂಗಾತಿ

ಡಾ.ಅಮೀರುದ್ದೀನ್ ಖಾಜಿಯವರ

ಗಜಲ್

ಅಪ್ಪ ಜೀವದುಸಿರು,ಅಮ್ಮ ಭಾವದುಸಿರು
ಅಪ್ಪ ಅಮ್ಮ ಈರ್ವರು ಜೀವಭಾವದುಸಿರು

ಅಪ್ಪನೆಂದರೆ ಅದ್ಭುತ, ಅದಮ್ಯ, ಅಪಾರ ಶಕ್ತಿ
ಅಮ್ಮನೆಂದರೆ ವಾತ್ಸಲ್ಯ ಮಮತೆಯ ಅನುರಕ್ತಿ

ಅಪ್ಪ ಬಿಸಿಲ ಬೇಗೆಯಲಿ ನೆರಳಾಗುವ ಕೊಡೆ
ಅಮ್ಮ ಉದ್ವೇಗ ಕಳೆಯಲು ತಲೆದಿಂಬಾಗುವ ತೊಡೆ

ಅಪ್ಪನೆಂದರೆ ಆಗಸಯಾನವನೆ ಮಾಡಿಸುವ ದೊರೆ
ಅಮ್ಮನೆಂದರೆ ದೇವನನೆ ಒಪ್ಪಿಸುವ ಅನನ್ಯ ಮೊರೆ

ಅಪ್ಪನೆಂದರೆ ಆತ್ಮಸ್ಥೈರ್ಯದ ಅಂತಃಶ್ಶಕ್ತಿಯ ನೆಲೆ
ಅಮ್ಮನೆಂದರೆ ಸಂಬಂಧ ಬೆಸೆಯುವ ಪ್ರೀತಿಯ ಸೆಲೆ


ಡಾ.ಅಮೀರುದ್ದೀನ್ ಖಾಜಿ

One thought on “ಡಾ.ಅಮೀರುದ್ದೀನ್ ಖಾಜಿಯವರ- ಗಜಲ್

Leave a Reply

Back To Top