ಕಾವ್ಯ ಸಂಗಾತಿ
ಭಾರತಿ ಅಶೋಕ್ ಕವಿತೆ
ಅಸಂಗತ ಬದುಕಿಗೆ
ಅಸಂಗತ ಬದುಕಿಗೆ
ನೀನು ಸಂಗಾತಿ
ನಿನ್ನ ಪ್ರಪಂಚದಿ
ನಾನು ಬರೀ ಸಂಗತಿ
ಸಂಗತ ಅಸಂಗತದ
ಗೊಡವೆಯಿರದ ನೀನು
ಯಾವಾಗಲೂ ಸಂಗಾತಿ
ಒಮ್ಮೊಮ್ಮೆ ಸಂಗತಿಯೂ
ಅದೆಷ್ಟು ಬಾರಿ ಅವರಿಸಿಲ್ಲ
ನಿನ್ನ ಮುಗ್ದ ನಗು,ಅದರ
ಸೊಬಗು, ಎಷ್ಟು ಬಾರಿ ಮನ
ಮಗುವಾಗಿಲ್ಲ ನಿನ್ನ ಸಹನೆಗೆ
ನೀನ್ಹಾಗೆ ಇರು, ಮೂರು
ದಿನದ ಬದುಕಿಗೇಕೆ ಕಾಳಗ
ಮುಡಿದ ಮುತ್ತ ಹನಿಗಳು
ಕರಗುವ ಮುನ್ನ ಸಂತಸದ
ಸಂಗತಿಯಾಗಿ, ಸಂಗಾತಿಯಾಗಿ
ಭಾರತಿ ಅಶೋಕ್